18 ಲಕ್ಷ ವೆಚ್ಚದಲ್ಲಿ ಎಳ್ಳಮಾವಾಸ್ಯೆ ಜಾತ್ರೆ

6 ಲಕ್ಷದ ಆಕರ್ಷಕ ಪೈಪೋಟಿ ಸಿಡಿಮದ್ದು ಪ್ರದರ್ಶನ

ಶಮಿತಾ ಮಲ್ನಾಡ್‌, ಉದಯ್‌ ಕುಮಾರ್‌ ಶೆಟ್ಟಿ ಅವರಿಂದ ಕಾರ್ಯಕ್ರಮ

ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆಯ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಡಿಸೆಂಬರ್‌ 28 ರಿಂದ ಜನವರಿ 2ರ ವರೆಗೆ ಏಳು ದಿನಗಳ ಪರ್ಯಂತ ಅಂದಾಜು ಜಾತ್ರೆ ವಿಜೃಂಬಣೆಯಿಂದ ನಡೆಯಲಿದೆ. ಜಾತ್ರೆ ಅಂದಾಜು 18 ಲಕ್ಷ ವೆಚ್ಚದಲ್ಲಿ ನಡೆಯಲಿದೆ. ಡಿಸೆಂಬರ್‌ 31 ರಂದು ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ ನಡೆಯಲಿದೆ. ಜನವರಿ 1 ರಂದು ಮನ್ಮಹಾರಥಾರೋಹಣ, 2ರಂದು ಶಿವಕಾಶಿಯ ಪ್ರಸಿದ್ಧ ಪಟಾಕಿ ತಯಾರಿಸುವ ನುರಿತ ತಜ್ಞರಿಂದ ವೈವಿದ್ಯಮಯ ಪಟಾಕಿ ಪ್ರದರ್ಶನದ ಜೊತೆಗೆ ತೆಪ್ಪೋತ್ಸವ ಜರುಗಲಿದೆ ಎಂದು ಎಳ್ಳಮಾವಾಸ್ಯೆ ಜಾತ್ರೆ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿದರು.

ಸಿಡಿಮದ್ದು ಪ್ರದರ್ಶನ 6 ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು ಎರಡು ನುರಿತ ತಂಡಗಳು ನಿರಂತರ 1 ಗಂಟೆಗಳ ಸಿಡಿಮದ್ದುಗಳನ್ನು ಸಿಡಿಸಲಿದ್ದಾರೆ. 3 ಲಕ್ಷ ರೂಪಾಯಿಗಳನ್ನು ಒಂದು ತಂಡಕ್ಕೆ ನಿಗಧಿ ಪಡಿಸಿದ್ದು ಪೈಪೋಟಿ ಮಾದರಿಯಲ್ಲಿ ಸಿಡಿಮದ್ದು ಪ್ರದರ್ಶನ ಜನರನ್ನು ರಂಜಿಸಲಿದೆ. ತೀರ್ಥಸ್ನಾನದ ದಿನ ಸಂಜೆ ತುಂಗಾ ತೀರದಲ್ಲಿ ಶಮಿತಾ ಮಲ್ನಾಡ್‌ ತಂಡದಿಂದ ಸಂಗೀತ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತೆಪ್ಪೋತ್ಸವದ ದಿನದಂದು ಉದಯ್‌ ಕುಮಾರ್‌ ಶೆಟ್ಟಿ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.

ಜಾತ್ರೆಯ ಬರುವ ಅಂಗಡಿ ಮಾಲೀಕರಿಗೆ ವಿಶೇಷ ರಿಯಾಯಿತಿ ನೀಡಲು ಚಿಂತಿಸಲಾಗಿದೆ. ಅಮ್ಯೂಸ್‌ ಮೆಂಟ್‌ ಪಾರ್ಕ್‌ಗಳಿಗೆ ಉಚಿತ ಟೋಕನ್‌ ನೀಡುವ ವ್ಯವಸ್ಥೆಯನ್ನು ರದ್ದು ಪಡಿಸುತ್ತಿದ್ದೇವೆ. ಉಚಿತವಾಗಿ ಅಧಿಕಾರಿಗಳು, ಸಮಿತಿ ಸದಸ್ಯರಿಗೆ ನೀಡುವುದಿಲ್ಲ. ಹರಾಜು ಮೂಲಕವೇ ವ್ಯವಸ್ಥೆಯನ್ನು ಸರಿಪಡಿಸುತ್ತಿದ್ದೇವೆ. ಜಾತ್ರೆಯ ಸಂದರ್ಭ ಆಗುವ ಪರಿಸರ ಹಾನಿ ತಡೆಯಲು ಸ್ವಚ್ಚತೆಗೆ ಆದ್ಯತೆ ನೀಡುತ್ತಿದ್ದೇವೆ. ಪಟ್ಟಣ ಪಂಚಾಯಿತಿ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮೂರುದಿನಗಳ ಕಾಲ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಚಾಲಕ ಟಿ.ಎಲ್.ಸುಂದರೇಶ್, ಸಮಿತಿಯ ಸದಸ್ಯರಾದ ಸಂದೇಶ ಜವಳಿ, ರತ್ನಾಕರ ಶೆಟ್ಟಿ, ಟಿ.ಜೆ.ಅನಿಲ್‌, ಪಾಂಡುರಂಗಪ್ಪ, ಅಶೋಕ್‌ ಶೆಟ್ಟಿ, ಸಂಜಯ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post