ಬಿ.ಎಲ್.ಶಂಕರ್ ಅಧ್ಯಕ್ಷ, ಕಡಿದಾಳು
ಪ್ರಕಾಶ್ ಸಮಕಾರ್ಯದರ್ಶಿ
ನೂತನ ಸದಸ್ಯರಾಗಿ ಸಾಹಿತಿ
ಶಿವಾನಂದ ಕರ್ಕಿ ಆಯ್ಕೆ
ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯ
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ನೂತನ ಪದಾಧಿಕಾತಿಗಳನ್ನು ಮುಂದಿನ ಮೂರು ವರ್ಷದ ಅವಧಿಗೆ
ನೇಮಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಪ್ರತಿಷ್ಠಾನದ ಅಧ್ಯಕ್ಷರಾಗಿ
ಡಾ.ಬಿ.ಎಲ್.ಶಂಕರ್, ಪದನಿಮಿತ್ತ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲಾಧಿಕಾರಿ, ಸಮಕಾರ್ಯದರ್ಶಿಯಾಗಿ
ಕಡಿದಾಳ್ ಪ್ರಕಾಶ್, ಖಜಾಂಚಿತಾಗಿ ಡಿ.ಎಂ.ಮನುದೇವ್ ನೇಮಕಗೊಂಡಿದ್ದಾರೆ.
ಸದಸ್ಯರಾಗಿ ಸಾಹಿತಿ ಶಿವಾನಂದ
ಕರ್ಕಿ, ಸಿ.ಬಸವಲಿಂಗಯ್ಯ, ಎಸ್.ವಿ.ದಯಾನಂದ, ಡಾ.ಚಿದಾನಂದಗೌಡ, ಎಂ.ಸಿ.ನರೇಂದ್ರ
ನೇಮಕವಾಗಿದ್ದಾರೆ. ಪದನಿಮಿತ್ತ ಸದಸ್ಯರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಶಿವಮೊಗ್ಗ ಉಪ ಅರಣ್ಯ ಸಂಕ್ಷಣಾಧಿಕಾರಿ,
ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತ ಅಧೀಕ್ಷಕ ಇಂಜಿನಿಯರ್,
ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ,
ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಆಹ್ವಾನಿತ ಸದಸ್ಯರಾಗಿ ತೀರ್ಥಹಳ್ಳಿ
ಕ್ಷೇತ್ರದ ಶಾಸಕರು, ಹಂಪಿ ಕನ್ನಡ ವಿವಿ ಕುಲಪತಿ, ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ
ಅಧ್ಯಕ್ಷರನ್ನು ನೇಮಿಸಿ ಆದೇಶಿಸಲಾಗಿದೆ.
