ಮೇಗರವಳ್ಳಿ ನಿವಾಸಿ ನಿವೃತ್ತ ಶಿಕ್ಷಕ ಕೆ.ಎಲ್.ಕಾಮಣ್ಣ ಗೌಡ (ಮೇಷ್ಟ್ರು) (86) ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಬಹಳ ಶಿಸ್ತಿನ ಮೇಷ್ಟ್ರು ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಜನಮನ್ನಣೆ ಪಡೆದಿದ್ದರು. ಅಂತ್ಯಕ್ರೀಯೆ ಶನಿವಾರ ಮಧ್ಯಾಹ್ನ ಮೇಗರವಳ್ಳಿಯಲ್ಲಿ ನಡೆಯಲಿದೆ.