ಇನ್ಮುಂದೆ ತಾಲ್ಲೂಕು ಕೆಡಿಪಿ ಸಭೆ ಕಾವು ಹೆಚ್ಚಳ
ತೀರ್ಥಹಳ್ಳಿ ತಾಲ್ಲೂಕು
ಪಂಚಾಯಿತಿ ನೂತನ ಕೆಡಿಪಿ ಸದಸ್ಯರಾದ ಹೊಸಕೊಪ್ಪ ಮಹೇಶ್ ಗೌಡ, ಕೆಳಕೆರೆ ಪೂರ್ಣೇಶ್, ಮೂಡ್ಲು ಕರುಣಾಕರ,
ಸುರೇಶ್, ಜೀನಾ ವಿಕ್ಟರ್, ಅನ್ನಪೂರ್ಣ ಮೋಹನ್ ಅವರನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ
ಎನ್.ಶೈಲಾ, ವ್ಯವಸ್ಥಾಪಕ ಎಸ್.ರಾಘವೇಂದ್ರ ಗೌರವಿಸಿ ಸನ್ಮಾನಿಸಿದರು.
ಕಳೆದ ಐದು ವರ್ಷಗಳಿಂದ
ತಾಲ್ಲೂಕು ಪಂಚಾಯಿತಿ ಚುನಾವಣೆ ಆಗದ ಹಿನ್ನಲೆಯಲ್ಲಿ ಅಭಿವೃದ್ಧಿ ಸಂಬಂಧಿಸಿದಂತೆ ಸುದೀರ್ಘ ಚರ್ಚೆಗಳು
ನಡೆಯುತ್ತಿರಲಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆಯೂ ಅಷ್ಟಾಗಿ ಮುನ್ನೆಲೆಗೆ ಬರುತ್ತಿರಲಿಲ್ಲ. ಕೇಂದ್ರೀಕೃತ
ಯೋಜನೆ ಅನುಷ್ಟಾನಗಳಲ್ಲಿಯೇ ಆಡಳಿತ ಬಹುತೇಕ ಸಮಯ ವ್ಯಯ ಮಾಡುವ ಸಂದರ್ಭ ಎದುರಾಗಿತ್ತು. ಪಂಚಾಯತ್
ರಾಜ್ ವ್ಯವಸ್ಥೆಯ ದುರ್ಭಲ ಕುರಿತಂತೆ ಮಾಜಿ ಸದಸ್ಯರುಗಳಿಂದಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು.
ಬಿಜೆಪಿ ಅವಧಿಯಲ್ಲಿ ಕೆಡಿಪಿ ನಾಮ ನಿರ್ದೇಶನ ಸದಸ್ಯರ ಆಯ್ಕೆಯಾಗಿದ್ದರೂ ಸಹ ಹೆಚ್ಚು ಸಮಯ ಇರಲಿಲ್ಲ. ಇದೀಗ ರಾಜ್ಯದ ಕಾಂಗ್ರೆಸ್ ಸರ್ಕಾರ ಹೊಸದಾಗಿ ನಾಮನಿರ್ದೇಶನ ಸದಸ್ಯರನ್ನು ನೇಮಕಗೊಳಿಸಿದ್ದು ಆಡಳಿತ ಎಷ್ಟರಮಟ್ಟಿಗೆ ಚುರುಕುಗೊಳಿಸಲಿದೆ ಎಂದು ಕಾದು ನೋಡಬೇಕಿದೆ.
ಹೊಸಕೊಪ್ಪ ಮಹೇಶ್
ಗೌಡ, ಕೆಳಕೆರೆ ಪೂರ್ಣೇಶ್, ಮೂಡ್ಲು ಕರುಣಾಕರ, ಸುರೇಶ್, ಜೀನಾ ವಿಕ್ಟರ್, ಅನ್ನಪೂರ್ಣ ಮೋಹನ್
ಇವರನ್ನು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಂಶಗಳ ಅನುಷ್ಠಾನ ಪರಿಶೀಲನೆಗಾಗಿ ಸರ್ಕಾರದ ಅಧೀನ ಕಾರ್ಯದರ್ಶಿ
ಮಲ್ಲಿನಾಥ ಜೂನ್ 6 ರಂದು ಕೆಡಿಪಿ ನಾಮನಿರ್ದೇಶನ
ಸದಸ್ಯರ ನೇಮಕ ಆದೇಶ ಹೊರಡಿಸಿದೆ.

