ದಸರಾ ಉತ್ಸವ ಗೋತಾ ಹೊಡೆದ ಹೊಟ್ಟೆ ಉರಿ

ಸಂದೇಶ ಎನ್ನುವ ಬದಲು “ನಂಜೇಶ” ಎನ್ನಬೇಕು – ಅಮರನಾಥ ಶೆಟ್ಟಿ
ಆರಗ ಹಿಂಬಾಲಕರು ಗ್ಯಾರಂಟಿ ಯೋಜನೆ ತ್ಯಜಿಸಲಿ ; ಬಿಂತ್ಲಾದಲ್ಲಿ ಆರಗರ ಬಣ್ಣ ಶೀಘ್ರ ಬಯಲಿಗೆ – ಆದರ್ಶ ಹುಂಚದಕಟ್ಟೆ

ಮುಂಗಡ ಅಭಿವೃದ್ಧಿ ಕಾಮಗಾರಿಗಳು ಸಂದೇಶ ಜವಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ ಕಾಲದಲ್ಲೂ ಬೇಕಾದಷ್ಟು ಆಗಿದೆ. ಸಾರ್ವಜನಿಕರಿಗೆ ತೀವ್ರ ಅಗತ್ಯ ಇದ್ದಾಗ ಅಭಿವೃದ್ಧಿ ಕಾಮಗಾರಿ ಮಾಡಿದರೆ ತಪ್ಪೇನು. ಸಂದೇಶ ಜವಳಿಗೆ ವಿರೋಧ ಮಾಡುವುದೇ ಕೆಲಸ. ಅವರ ಕಡೆಯವರು ಸಂಯೋಜಿಸಿದ ದಸರಾ ಉತ್ಸವ ಜನರಿಲ್ಲದೆ ಗೋತಾ ಹೊಡೆದು ಹುಲಿವೇಷ ಸ್ಪರ್ಧೆ ಭರ್ಜರಿ ಯಶಸ್ಸು ಕಂಡಿದ್ದರಿಂದ ತಡೆದುಕೊಳ್ಳಲಾಗದೆ ಹಿಂದುಳಿದ ವರ್ಗಗಳ ಕಲಾವಿದರ ಹೆಮ್ಮೆಯ ಕಲೆಗೆಂದು ಕೇವಲ 50 ಸಾವಿರ ರೂಪಾಯಿ ಪಟ್ಟಣ ಪಂಚಾಯಿತಿ ದೇಣಿಗೆ ಕೊಟ್ಟಿರುವುದನ್ನು ವಿರೋಧ ಮಾಡುತ್ತಿದ್ದಾರೆ. ಇವರು ವೇದಿಕೆಯ ಮೇಲೆ ಬಿಜೆಪಿ ಅಧ್ಯಕ್ಷ ನವೀನ್‌ ಹೆದ್ದೂರು ಅವರನ್ನು ಯಾವ ಮನ್ನಣೆ ಮೇಲೆ ಕರೆದು ಕೂರಿಸಿದರು. ಇದನ್ನೆಲ್ಲ ನೋಡಿದರೆ ಸಂದೇಶ ಎನ್ನುವ ಬದಲು ಈ ವ್ಯಕ್ತಿಯನ್ನು ನಂಜೇಶ” ಎಂದು ಕರೆಯುವುದೇ ಸೂಕ್ತ ಎಂದು ಸೋಮವಾರ ಗಾಂಧಿ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತೀರ್ಥಹಳ್ಳಿ ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಯುವ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಸುದೀರ್ಘವಾಗಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಆರಗ ಜ್ಞಾನೇಂದ್ರ ಕಾಂಗ್ರೆಸ್‌ ಪಕ್ಷ ಬಡವರಿಗಾಗಿ ರೂಪಿಸಿದ ಗ್ಯಾರಂಟಿ ಯೋಜನೆಗಳನ್ನು 420 ಯೋಜನೆಯೆಂದು ಟೀಕಿಸುತ್ತಿದ್ದರು. ವಿಪರ್ಯಾಸ ಎಂದರೆ ಈಗ ಅದೇ ಬಿಜೆಪಿ ಮಹರಾಷ್ಟ್ರ ಮತ್ತು ಜಾರ್ಖಾಂಡ್‌ ವಿಧಾನಸಭೆ ಚುನಾವಣೆಗೆ ಕರ್ನಾಟಕದ ಗ್ಯಾರಂಟಿ ಯೋಜನೆಯನ್ನು ಕಾಪಿ ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದಕ್ಕೇನು ಹೇಳುತ್ತಾರೆ ಆರಗ. ಗ್ಯಾರಂಟಿ ಯೋಜನೆಗಳ ಮೇಲೆ ಅವರಿಗೆ ಅಷ್ಟು ದ್ವೇಶವಿದ್ದಲ್ಲಿ ಅವರ ಹಿಂಬಾಲಕರ ಕುಟುಂಬದವರು ಆ ಯೋಜನೆಯನ್ನು ತ್ಯಜಿಸಲು ಕರೆ ನೀಡಲಿ ಎಂದು ಸವಾಲೆಸೆದರು. ಅಲ್ಲದೇ ಬಿಂತ್ಲಾದಲ್ಲಿ ನಡೆದ ಭೂ ಹಗರಣದ ಕುರಿತಂತೆ ಸದ್ಯದಲ್ಲೇ ಅವರ ಬಣ್ಣ ಬಯಲಾಗಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕೆಡಿಪಿ ಸದಸ್ಯ ಪೂರ್ಣೇಶ್‌ ಕೆಳಕೆರೆ, ಯುವ ಕಾಂಗ್ರೆಸ್‌ ಮುಖಂಡರಾದ ಆಸೀಫ್‌, ಅಶ್ವಲ್‌ ಗೌಡ, ಸುಜಿತ್‌ ಸಾಲಿಯಾನ, ಶ್ರೇಯಸ್‌ ರಾವ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post