ಶ್ರೀಹರಿ ಲೀಲಾಮೃತ
ಯಕ್ಷಗಾನ ನವೆಂಬರ್ 29ಕ್ಕೆ
ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ
ಟ್ರಸ್ಟ್ ನೇತೃತ್ವ
ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ
ಟ್ರಸ್ಟ್ ಸಾಂಸ್ಕೃತಿಕ ವೇದಿಕೆ ವತಿಯಿಂದ ಪಾವಂಜೆ ನಾಗವೃಜ ಕ್ಷೇತ್ರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ
ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಆಡಿ ತೋರಿಸುವ ಕಾಲಮಿತಿ “ಶ್ರೀಹರಿ
ಲೀಲಾಮೃತ” ಯಕ್ಷಗಾನ ನವೆಂಬರ್ 29ರ ಶುಕ್ರವಾರ ತೀರ್ಥಹಳ್ಳಿಯ ಸಂಸ್ಕೃತಿ ಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ
ಎಂದು ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಂಗಳವಾರ ಬೆಟ್ಟಮಕ್ಕಿಯಲ್ಲಿ
ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಶ್ರೀಹರಿ ಲೀಲಾಮೃತ ಅಸುರ ಹಿರಣ್ಯಾಕ್ಷನ ಸಂಹಾರಕ್ಕೆ ಶ್ರೀಹರಿಯ ಸಿಡಿಲಬ್ಬರದ ವರಹಾವತಾರ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಭಾಗವತಿಕೆಯಲ್ಲಿ ಮೂಡಿ ಬರಲಿದೆ. ತೆಂಕಿನ ಪ್ರಖ್ಯಾತ ಕಲಾವಿದರ ಭರ್ಜರಿ ಮುಮ್ಮೇಳ, ಮೋಹಕ ಸ್ತ್ರೀವೇಷ, ನಕ್ಕು ನಲಿಸುವ ವಿದೂಷಕರು, ಗತ್ತು ಗಾಂಭೀರ್ಯದ ರಾಜವೇಷ, ಹುಬ್ಬೇರಿಸುವ ಗಿರ್ಕಿ, ಅಪರೂಪದ ಕಥಾನಕದೊಂದಿಗೆ ಯಕ್ಷಗಾನ ಮೂಡಿಬರಲಿದೆ ಎಂದರು.
ರಾಜಕೀಯ ಹೊರತುಪಡಿಸಿ ಸಂಗೀತ, ಕ್ರೀಡೆ, ಸಾಹಿತ್ಯ, ಕಲೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಸಾಲ ಸೌಲಭ್ಯ ಪಡೆದ ಮಹಿಳೆಯರು ಇದೀಗ ಜಿಲ್ಲೆಯಾದ್ಯಂತ ತಮ್ಮದೇ ಬ್ರಾಂಡ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದ್ದಾರೆ. ಉತ್ಪಾದನೆಯ ಜೊತೆಗೆ ಮಾರಾಟದ ಸೌಲಭ್ಯ ಕಲ್ಪಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ
ಯಕ್ಷಗಾನ ಕಲಾವಿದರಾದ ಮಂಗಳಗಾರು ರಮೇಶ್ ಆಚಾರ್ಯ, ಕೊಕೊಡ್ತಿ ಕೃಷ್ಣಮೂರ್ತಿ, ಗುಡ್ಡೇಕೇರಿ ಮೂರ್ತಿಗೌಡ,
ಬಿ.ಗಣಪತಿ ಅವರಿಗೆ ಸನ್ಮಾನಿಸಲಾಗುವುದು. ಜಾಗತಿಕವಾಗಿ ಕಾಳಿಂಗ ಹಾವಿನ ಪ್ರಭೇದವನ್ನು ವೈಜ್ಞಾನಿಕವಾಗಿ
ಕಾಳಿಂಗ ಎಂದು ಕರೆಯುವಂತೆ ಮಾಡಿದ ವಿಜ್ಞಾನಿ ಗೌರಿಶಂಕರ್ ಅವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ
ಹಮ್ಮಿಕೊಂಡಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ
ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಲೆಕ್ಕ ಪರಿಶೋಧಕ ಮಧುಸೂದನ್ ನಾವುಡ, ಪ್ರಮುಖರಾದ ಕೆಸ್ತೂರು ಮಂಜುನಾಥ,
ಡಿ.ಎಸ್.ವಿಶ್ವನಾಥ ಶೆಟ್ಟಿ, ಹಾರೋಗೊಳಿಗೆ ಪದ್ಮನಾಭ, ಜೀನಾ ವಿಕ್ಟರ್, ಟಿ.ಎಲ್.ಸುಂದರೇಶ್, ಕಟ್ಟೇಹಕ್ಕಲು
ಕಿರಣ್, ವಿಲಿಯಂ ಮಾರ್ಟೀಸ್, ಬೇಡನಬೈಲು ಯಲ್ಲಪ್ಪ, ಗೀತಾ, ಶಬನಮ್, ರತ್ನಾಕರ ಶೆಟ್ಟಿ ಮುಂತಾದವರು
ಇದ್ದರು.


