ಮಲ್ಟಿ ಬ್ರಾಂಡ್ ವಾಚ್ ಮತ್ತು
ಬೆಳ್ಳಿ ಆಭರಣಗಳ ಶೋರೂಂ ಸೇರ್ಪಡೆ
ಶೋರೂಂ ಉದ್ಘಾಟಿಸಿದ ಹಾಜಿ ಶೇಖ್
ಅಹಮದ್ ಸಾಹೇಬ್
ಹಾಜಿ ಶೇಖ್ ಅಹಮದ್ ಸಾಹೇಬ್ ಅವರಿಂದ ತೀರ್ಥಹಳ್ಳಿಯಲ್ಲಿ ದಶಕಗಳ ಹಿಂದೆ ಸಣ್ಣಮಟ್ಟದಲ್ಲಿ ಆರಂಭಗೊಂಡ ನ್ಯಾಷನಲ್ ನಿರ್ಮಾಣ ಸಂಸ್ಥೆಯು ಇಂದು ಅಗಾಧವಾಗಿ ಬೆಳವಣಿಗೆ ಸಾಧಿಸಿದೆ. ನ್ಯಾಷನಲ್ ಗ್ರೂಫ್‌ನ ಹಲವು ಸಹ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ.
ನ್ಯಾಷನಲ್ ಸಮೂಹ ಸಂಸ್ಥೆಗಳನ್ನು ಶೇಖ್ ಅಹಮದ್ ಸಾಹೇಬರ ಮಕ್ಕಳಾದ ಇಬ್ರಾಹಿಂ ಷರೀಪ್ ಮತ್ತು ಸಹೋದರರಾದ ಅಬ್ದುಲ್ ರೆಹಮಾನ್, ಯೂಸೂಫ್ ಹೈದರ್, ಸುಲೇಮಾನ್, ಅಬ್ದುಲ್ ಕಲಾಂ ಆಜಾದ್, ಮೊಯ್ದಿನ್ ಕಬೀರ್ ಮತ್ತು ಅವರ ತಂಡ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ.
ಈಗ ಮತ್ತೊಂದು ಉದ್ಯಮ ನ್ಯಾಷನಲ್
ಮಲ್ಟಿ ಬ್ರಾಂಡ್ ವಾಚ್ ಹಾಗೂ ಬೆಳ್ಳಿ ಶೋರೂಂ ಆರಂಭಗೊಂಡಿದೆ. ಹಿರಿಯರಾದ ಹಾಜಿ ಶೇಖ್ ಅಹಮದ್ ಸಾಹೇಬ್
ಮತ್ತು ಶ್ರೀಮತಿ ಶೇಖ್ ಅಹಮದ್ ಈ ನೂತನ ಉದ್ಯಮವನ್ನು ಉದ್ಘಾಟಿಸಿದರು.
ಮಲೆನಾಡು ಭಾಗದಲ್ಲಿ ಗುಣಮಟ್ಟದ ಬೆಳ್ಳಿ - ಬಂಗಾರದ ಆಭರಣಗಳಿಗಾಗಿ ಜನರು ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಗೆ ಮೊದಲ ಆದ್ಯತೆ ನೀಡುತ್ತಾರೆ. ಏಕೆಂದರೆ ಗ್ರಾಹಕರಿಗೆ ಸಂತೃಪ್ತಿಯಾಗುವ ಗುಣಮಟ್ಟವನ್ನು ಇದು ಕಾಪಾಡಿಕೊಂಡು ಬಂದಿದೆ. ಇದರ ಭಾಗವಾಗಿಯೇ ಈಗ ಮಲ್ಟಿ ಬ್ರಾಂಡ್ ವಾಚಸ್ & ಸಿಲ್ವರ್ ಶೊ ರೂಂ ಹೊರಹೊಮ್ಮಿದೆ.
ನ್ಯಾಷನಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಹಾಜಿ ಶೇಖ್ ಅಹಮದ್ ಸಾಹೇಬ್ ಅವರು, ಮೊದಲಿನಿಂದಲೂ ತಾವು ಬೆಳೆಯುವುದರ ಜೊತೆಗೆ ಸಮಾಜವನ್ನು ಉನ್ನತಿಗೆ ಕೊಂಡೊಯ್ಯಬೇಕು ಎನ್ನುವ ಆಶಯ ಹೊಂದಿದವರು. ಹೀಗೆ ಸಮಾಜವನ್ನು ಉನ್ನತಿಗೆ ಏರಿಸುವಲ್ಲಿ ಶಿಕ್ಷಣದ ಪಾತ್ರ ಬಹಳ ಪ್ರಮುಖವಾಗಿರುತ್ತದೆ ಎಂದು ಭಾವಿಸಿದ ಶೇಖ್ ಅಹಮದ್ ಸಾಹೇಬ್ ಮತ್ತು ಮಕ್ಕಳು ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯುಗಳಿಸುವ ಲಾಭಂಶದ ಒಂದು ದೊಡ್ಡ ಭಾಗವನ್ನು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರಬಹುದು ಎಂದು ನಿರ್ಧರಿಸಿ 2010 ರಿಂದಲೂ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಸ್ಕಾಲರ್ಶಿಪ್ ನೀಡುತ್ತಾ ಬಂದಿದ್ದಾರೆ.
25-12-2008 ರಲ್ಲಿ ತೀರ್ಥಹಳ್ಳಿಯ
ಗಾಂಧಿ ಚೌಕದ ಬಾಡಿಗೆ ಕಟ್ಟಡದಲ್ಲಿ ನ್ಯಾಷನಲ್ ಗೋಲ್ಡ್ ಅಂಡ್ ಜ್ಯುವೆಲ್ಲರ್ಸ್ ಹೆಸರಿನಲ್ಲಿ ಉದ್ಯಮ
ಆರಂಭಗೊಂಡಿತು. ನಂತರದ ವರ್ಷಗಳಲ್ಲಿ ಸಂಸ್ಥೆಯು ಆಜಾದ್ ರಸ್ತೆಯಲ್ಲಿರುವ ತನ್ನ ಸ್ವಂತ ಕಟ್ಟಡಕ್ಕೆ
ಸ್ಥಳಾಂತರಗೊಂಡಿತು.
ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್
ಸಂಸ್ಥೆಯು 2010 ರಲ್ಲಿ 10 ಜನ ವಿದ್ಯಾರ್ಥಿಗಳಿಗೆ 50 ಸಾವಿರ ರೂ.ಗಳ ಸ್ಕಾಲರ್ಶಿಪ್ ನೀಡುವ ಮೂಲಕ
ಈ ಯೋಜನೆಯನ್ನು ಆರಂಭಿಸಿತು. ಈ ವಿದ್ಯಾರ್ಥಿ ವೇತನ ನೀಡುವ ಯೋಜನೆ ಯಾವ ಮಟ್ಟಕ್ಕೆ ಬೆಳೆಯಿತೆಂದರೆ
2024 ರಲ್ಲಿ 307 ವಿದ್ಯಾರ್ಥಿಗಳಿಗೆ 9 ಲಕ್ಷದ 49 ಸಾವಿರ ರೂ.ಗಳನ್ನು ವಿತರಿಸಲಾಯಿತು ಎಂದರೆ ನಿಜಕ್ಕೂ
ಸಂಸ್ಥೆಯು ಶಿಕ್ಷಣದ ಕುರಿತಂತೆ ಹೊಂದಿರುವ ಕಾಳಜಿಯ ಬಗ್ಗೆ ಹೆಮ್ಮೆಯೆನಿಸುತ್ತದೆ. 2010 ರಲ್ಲಿ ಆರಂಭವಾದ
ಈ ಯೋಜನೆಯಡಿಯಲ್ಲಿ ಈತನಕ ಒಟ್ಟು 2115 ವಿದ್ಯಾರ್ಥಿಗಳಿಗೆ
4 ಕೋಟಿ ವಿದ್ಯಾರ್ಥಿ ವೇತನವನ್ನು ವಿತರಿಸುವಂತಹ ಸಾರ್ಥಕ ಕಾರ್ಯವನ್ನು ಈ ಸಂಸ್ಥೆಯು ಮಾಡಿಕೊಂಡು
ಬಂದಿದೆ.

.jpeg)

