ಬಿ.ಆರ್.ರಾಘವೇಂದ್ರ ಶೆಟ್ಟಿ, ಡಾ.ಅನಿಲ್, ವಿಲಿಯಂ ಮಾರ್ಟೀಸ್‌ಗೆ ಒಲಿದ ಅವಕಾಶ
ತೀರ್ಥಹಳ್ಳಿ ಪಟ್ಟಣ
ಪಂಚಾಯಿತಿ ನಾಮ ನಿರ್ದೇಶನ ಸದಸ್ಯರನ್ನಾಗಿ ಬಿ.ಆರ್.ರಾಘವೇಂದ್ರ ಶೆಟ್ಟಿ, ಡಾ.ಅನಿಲ್ ಹಾಗೂ ವಿಲಿಯಂ
ಮಾರ್ಟೀಸ್ ಇವರುಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ರಚನೆಯಾಗಿ ಕಳೆದ 2
ವರ್ಷಗಳಿಂದ ನಾಮನಿರ್ದೇಶನ ಸದಸ್ಯರ ನೇಮಕ ಗೊಂಡಿರಲಿಲ್ಲ. 15 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ
3 ನಾಮನಿರ್ದೇಶನ ಸದಸ್ಯರ ಆಯ್ಕೆಗೆ ಅವಕಾಶ ಇತ್ತು. ಇದೀಗ ನಾಮನಿರ್ದೇಶನ ಸದಸ್ಯರ ನೇಮಕಗೊಂಡಿದ್ದು
ಪಟ್ಟಣ ಪಂಚಾಯಿತಿ ಬಿರುಸಿನ ಚಟುವಟಿಕೆಯಿಂದ ಸಾರ್ವಜನಿಕವಾಗಿ ಗುರುತಿಸಿಕೊಳ್ಳುವ ನಿರೀಕ್ಷೆ ಇದೆ.
ಬಿ.ಆರ್. ರಾಘವೇಂದ್ರ
ಶೆಟ್ಟಿ ಸಾಕಷ್ಟು ಸಮಯದ ಹಿಂದೆ ಬಾಳೇಬೈಲು ವಾರ್ಡ್‌ನಿಂದ ಸದಸ್ಯರಾಗಿ ಆಯ್ಕೆಯಾಗಿ ಮೊದಲ ಆಯ್ಕೆಯಲ್ಲಿಯೇ
ಕರಾರುವಕ್ಕಾದ ಪ್ರಶ್ನೆಗಳು ಮತ್ತು ವಾದ ಮಂಡನೆಯಿಂದ ಗಮನ ಸೆಳೆದು ಭರವಸೆ ಮೂಡಿಸಿದ್ದರು. ಆದರೆ ಬಳಿಕ
ಅವರಿಗೆ ಅವಕಾಶ ದೊರಕಿರಲಿಲ್ಲ. ಡಾ.ಅನಿಲ್ ಕಾಂಗ್ರೆಸ್ ಕಟ್ಟಾಳುವಾಗಿಯೇ ಗುರುತಿಸಿಕೊಂಡಿದ್ದು ತಮ್ಮ
ಅಜಾತಶತ್ರು ವ್ಯಕ್ತಿತ್ವದಿಂದ ಪಕ್ಷದೊಳಗೆ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ
ವಿಭಾಗದ ಅಧ್ಯಕ್ಷರಾಗಿರುವ ವಿಲಿಯಂ ಮಾರ್ಟೀಸ್ ಕೂಡ ಪಕ್ಷ ನಿಷ್ಟೆ ಮತ್ತು ದಕ್ಷ ಕಾರ್ಯನಿರ್ವಹಣೆಗೆ
ಹೆಸರಾದವರು.