ಮ್ಯಾಮ್ಕೋಸ್ ವಿರುದ್ಧದ
ಆರೋಪದಲ್ಲಿ ಸತ್ಯವಿದೆ – ಕರಿಮನೆ ರಾಘವೇಂದ್ರ ಭಟ್
ಮ್ಯಾಮ್ಕೋಸ್‌ಗಿಂತಲೂ 13 ಸಾವಿರ ಅಧಿಕ ಬೆಲೆ ಬೇರೆಡೆ ದೊರೆತಿದೆ
ಮ್ಯಾಮ್ಕೋಸ್ ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂಬ ಚರ್ಚೆ ಸಾರ್ವಜನಿಕವಾಗಿ ನಡೆಯುತ್ತಿರುವಂತೆಯೇ ಕರಿಮನೆ ರಾಘವೇಂದ್ರ ಭಟ್ ಎಂಬ ಅಡಿಕೆ ಬೆಳೆಗಾರ ಪತ್ರಿಕಾ ಹೇಳಿಕೆಯನ್ನು ನೀಡಿದ್ದು ಅದು ಹೀಗಿದೆ.
ಅಡಿಕೆ ವಿಚಾರವಾಗಿ
ಕೆಲವು ಹೇಳಿಕೆಗಳನ್ನು ಪತ್ರಿಕೆಯಲ್ಲಿ ಗಮನಿಸಿದ್ದೇನೆ. ಇಲ್ಲಿ ಮಾಡಿರುವಂತಹ ಆರೋಪಗಳು ಸತ್ಯಕ್ಕೆ
ಹತ್ತಿರವಾದಂತಿದೆ. ಅವರುಗಳೆಲ್ಲಿಯೂ ಕೂಡ ತಮ್ಮ ವೈಯಕ್ತಿಕ ಲಾಭಕ್ಕಾಗಿ ಪ್ರಶ್ನೆ ಮಾಡಿರುವುದಿಲ್ಲ.
ತಾಲ್ಲೂಕಿನ ಜಿಲ್ಲೆಯ ಅದೆಷ್ಟೋ ಜನರ ರೈತರಿಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿರುತ್ತಾರೆ. ಮ್ಯಾಮ್ಕೋಸ್
ಸಂಸ್ಥೆಯಿಂದ ನಷ್ಟ ಆದವರಲ್ಲಿ ಅಡಿಕೆ ವಾಪಾಸ್ಸು ತಂದವರಲ್ಲಿ ರೈತರ ಮಗನಾಗಿ ನಾನು ಕೂಡ ಒಬ್ಬನಿದ್ದೇನೆ
ಎಂದು ಕರಿಮನೆ ರಾಘವೇಂದ್ರ ಭಟ್ ಹೇಳಿದ್ದಾರೆ.
ರೈತ ಬಂಧುಗಳಲ್ಲಿ
ತಿಳಿಸುವುದೇನೆಂದರೆ ನಮ್ಮ ತಂದೆಯವರು ಕಳೆದ 55 ವರ್ಷಗಳಿಂದ ಹಿರಿಯರು ಒಳ್ಳೆಯ ಉದ್ದೇಶ ಇಟ್ಟುಕೊಂಡು
ಬೆಳೆಸಿದ ಮ್ಯಾಮ್ಕೋಸ್ ಸಂಸ್ಥೆಯಲ್ಲಿ ವ್ಯವಹಾರ ಮಾಡಿಕೊಂಡು ಬಂದವರಾಗಿದ್ದಾರೆ. ಅವರು ವಯೋವೃದ್ದರು
ಮತ್ತು ಅನಾರೋಗ್ಯ ಪೀಡಿತರಾಗಿರುವುದರಿಂದ ಅವರ ಹೆಸರಿನಲ್ಲಿ ನಾನು ವ್ಯವಹಾರ ಮುಂದುವರೆಸಿಕೊಂಡು ಬಂದಿರುತ್ತೇನೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಥೆಯ ವ್ಯವಹಾರ ಬೇಸರ ತರಿಸಿದೆ. ನಮ್ಮ ಅಡಿಕೆಗೆ ಸರಿಯಾದ ಬೆಲೆ
ಸಿಗದೆ ಎರಡು ಬಾರಿ ವಾಪಾಸ್ಸು ತಂದಿದ್ದೇನೆ. ಅದೇ ಅಡಿಕೆಗೆ ಇವರು ಕಟ್ಟಿದ ಬೆಲೆಗಿಂತ ಸುಮಾರು ಪ್ರತಿ
ಕ್ವಿಂಟಾಲ್‌ಗೆ 13 ಸಾವಿರ ರೂಪಾಯಿ ನನಗೆ ಹೆಚ್ಚು ದೊರಕಿದೆ. ರೈತರಿಗೋಸ್ಕರ ಹುಟ್ಟಿದ ಸಂಸ್ಥೆಯಲ್ಲಿ
ಈ ರೀತಿ ನಡೆಯುತ್ತಿರುವುದು ದುರಾದೃಷ್ಟಕರ ಮತ್ತು ಬೇಸರ ತರಿಸುವಂತಹದ್ದು.
ಎಷ್ಟೋ ರೈತರಿಗೆ
ಈ ರೀತಿಯ ಅನ್ಯಾಯ ಇಲ್ಲಿ ಆಗಿದೆ. ಮತ್ತೊಂದು ವಿಷಾದವೆಂದರೆ ಈ ಸಂಸ್ಥೆಯಲ್ಲಿ ನಾನಾ ಕಾರಣದಿಂದಾಗಿ
ಅಡಿಕೆ ವಾಪಾಸ್ಸು ಕೊಂಡೊಯ್ಯಲು ಸಾಧ್ಯವಾಗದೆ ಇವರು ನಿಗದಿ ಪಡಿಸಿದ ಬೆಲೆಗೆ ರೈತರು ಮಾರಾಟ ಮಾಡಿದ
ವಿಷಯವನ್ನು ಗಮನಿಸಿದ್ದೇನೆ. ನಮ್ಮ ಈ ಹೇಳಿಕೆ ಯಾವುದೇ ವ್ಯಕ್ತಿ ಅಥವಾ ಪಕ್ಷದ ಪರವಾಗಿ ಅಲ್ಲ.
ಜವಾಬ್ದಾರಿ ಸ್ಥಾನದಲ್ಲಿರುವವರು ವೈಯಕ್ತಿಕ ಟೀಕೆ ಟಿಪ್ಪಣಿ ಬಿಟ್ಟು ಆಗಿರುವ ಅನ್ಯಾಯ ಸರಿಪಡಿಸಲಿ. ರೈತರ ಪರವಾಗಿ ಯಾರೇ ಧ್ವನಿ ಎತ್ತಿದರು ಅವರ ಜೊತೆ ಅನ್ಯಾಯಕ್ಕೆ ಒಳಗಾದ ನಮ್ಮಂತಹ ರೈತರು ಖಂಡಿತ ಗಮನಿಸುತ್ತಾರೆ. ರೈತ ಪರವಾದ ಹೋರಾಟಗಳಿಗೆ ಜಯವಾಗಲಿ ಎಂದು ಕರಿಮನೆ ರಾಘವೇಂದ್ರ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೇರೆ ವಿಚಾರಗಳ ಬಗ್ಗೆ ಮಾಹಿತಿ ಗೊತ್ತಿಲ್ಲ. ಆದರೆ, ಮ್ಯಾಮ್‌ಕೋಸ್‌ಗಿಂತ 13,000 ಹೆಚ್ಚು ದರ ಹೊರಗಡೆ ದೊರೆಯುತ್ತಿರುವುದು ಸತ್ಯ. ಅನೇಕ ರೈತರು ಮ್ಯಾಮ್‌ಕೋಸ್‌ನಿಂದ ಅಡಿಕೆ ಹಿಂಪಡೆದು ಹೊರಗಡೆ ಮಾರಿ ನಿಜ ಬೆಲೆಯನ್ನು ಪಡೆದಿದ್ದಾರೆ, ಪಡೆಯುತ್ತಿದ್ದಾರೆ. ಈ ವಿಚಾರದಲ್ಲಿ ಮ್ಯಾಮ್‌ಕೋಸ ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸಂಸ್ಥೆ ಮತ್ತು ಸದಸ್ಯ ರೈತರ ಹಿತದೃಷ್ಟಿಯಿಂದ ಒಳ್ಳೆಯದು.
ReplyDeleteಅರವಿಂದ ಸಿಗದಾಳ್, ಮೇಲುಕೊಪ್ಪ
9449631248
https://vishwavani.news/state/mamcos-farmers-withdrawing-their-heaps-of-arecanut-from-mamcos-what-is-the-reason/?fbclid=IwY2xjawGN8j9leHRuA2FlbQIxMQABHZWslwNxFUfo383YdQs6EaTlJ5ANvCLqT6kAn3dUhxZn4MjitzRKqdpLWg_aem_ZP0LX2PIBCjF2IprQWG0Ug
ReplyDelete