ವಾಣಿಜ್ಯ ಉದ್ದೇಶದ ಹೋಟೆಲ್‌ಗೆ ಮಾತ್ರ ಅನುಮತಿ ನೀಡಿದ್ದೇವೆ
ಹೆಂಡದಂಗಡಿ ನಿರ್ಮಾಣಕ್ಕೆ
ಯಾವುದೇ ಅರ್ಜಿ ಬಂದಿಲ್ಲ - ಸದಸ್ಯರು
ಅರೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಸಲೂರು ಗ್ರಾಮದ ಹೊರಣೆಬೈಲಿನಲ್ಲಿ ಹೆಂಡದಂಗಡಿ ತೆರೆಯಲು ಗ್ರಾಮ ಪಂಚಾಯತಿ ಅನುಮತಿ ನೀಡಿದೆ ಎಂದು ನಡೆಸಲಾಗುತ್ತಿರುವ ಅಪಪ್ರಚಾರ ಖಂಡನೀಯ. ಆ ರೀತಿಯ ಯಾವುದೇ ಅನುಮತಿ ನೀಡಲಾಗಿಲ್ಲ. ಗ್ರಾಮ ಪಂಚಾಯತಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೇಳೂರು ಗಿರೀಶ್ ಕೆ.ಟಿ. ಮತ್ತು ಸದಸ್ಯರಾದ ಯಶಸ್ವಿ ಕಡ್ತೂರು, ಉಂಟಗೋಡು ಸಿದ್ದಾರ್ಥ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಂಡದಂಗಡಿ, ಅರಣ್ಯ
ಪ್ರದೇಶದ ಹೆಸರಿನಲ್ಲಿ ವಿವಾದ ಸೃಷ್ಟಿಸಲು ಹೊರಟಿರುವ ಪ್ರದೇಶದಲ್ಲಿ ಲಾಗಾಯ್ತಿನಿಂದಲೂ ಓಡಾಡುವ ರಸ್ತೆ ಇದೆ. ಇದು ಅನೇಕ ಮನೆ, ತೋಟಗಳಿಗೆ ಸಂಪರ್ಕ ಕೊಂಡಿಯಾಗಿದೆಯಲ್ಲದೆ ಪಂಚಾಯತ್
ಸಂತೆ ಮಾರುಕಟ್ಟೆಗೆ ಕೂಡ ಸಂಪರ್ಕ ಕಲ್ಪಿಸುತ್ತಿದೆ. ಈ ರಸ್ತೆಯ ಅಭಿವೃದ್ಧಿಗಾಗಿ ಪಂಚಾಯಿತಿಯಿಂದ ತೆಗೆದಿರಿಸಲಾಗಿದೆ. ಮತ್ತು ಸದರಿ ಜಾಗದಲ್ಲಿ ಪಂಚಾಯತ್ ಆದಾಯದ ದೃಷ್ಟಿಯಿಂದ ಕೇವಲ
ಹೋಟೆಲ್ ನಡೆಸಲು ಮಾತ್ರ ಅನುಮತಿ ನೀಡಲಾಗಿದೆ. ಸೂಕ್ತ ದಾಖಲೆಗಳನ್ನು ಹೊಂದಿರುವ ಅರ್ಜಿದಾರರು ಪಂಚಾಯಿತಿಗೆ
ವಾಣಿಜ್ಯ ಉದ್ದೇಶದ ವಹಿವಾಟುಗಳನ್ನು ನಡೆಸಲು ಅನುಮತಿ ಕೋರಿದಾಗ ಪಂಚಾಯತ್ ಆದಾಯದ ದೃಷ್ಟಿಯಿಂದ ಅನುಮತಿ
ನೀಡಲಾಗುತ್ತದೆ. ಆದರೆ ಹೆಂಡದಂಗಡಿಗೆ ಅನುಮತಿ ನೀಡುವಂತೆ ಯಾವುದೇ ಅರ್ಜಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ವೆ ನಂ 72 ರಲ್ಲಿ ಇಲ್ಲಿಯ ತನಕ ಅರಣ್ಯ, ಕಂದಾಯ, ಹಾಗೂ ಗೋಮಾಳ ಇನ್ನಿತರ ಪ್ರದೇಶದ ವರ್ಗಿಕರಣ ಆಗದೆಯೇ ಸದರಿ ಸ್ಥಳವನ್ನು ಅರಣ್ಯ ಪ್ರದೇಶವೆಂದು ಗುಲ್ಲೆಬ್ಬಿಸಲಾಗುತ್ತಿದೆ. ಇದೆ ಸ್ಥಳದಲ್ಲಿ ಸರ್ಕಾರದಿಂದ 1 ಎಕರೆ ಮುಸ್ಲಿಂ ಬಾಂಧವರ ಸ್ಮಶಾನಕ್ಕೆ, 25 ಗುಂಟೆ ಸಂತೆ ಮೈದಾನಕ್ಕೆ, ಉಚಿತ ನಿವೇಶನಕ್ಕೆ 9 ಗುಂಟೆ ಜಾಗ ಮಂಜೂರಾಗಿದೆ. ಬಹಳ ಹಿಂದೆಯೇ ಸಾರ್ವಜನಿಕ ಸದುದ್ದೇಶದಿಂದ ಸ್ಮಶಾನಕ್ಕೆ ಪಂಚಾಯಿತಿ ವತಿಯಿಂದ ಸಾಮಾನ್ಯ ಸಭೆಯ ಅನುಮೋದನೆ ಮೇರೆಗೆ ರಸ್ತೆ ದುರಸ್ತಿ, ನೀರು ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
ಆಗ ಉಂಟಾಗದ ವಿವಾದ
ಈಗ ಮಾತ್ರ ಏಕೆ?
ಇಲ್ಲಿ ಹೊಸ ರಸ್ತೆ
ನಿರ್ಮಾಣ ಆಗಿಲ್ಲ. ಇರುವ ರಸ್ತೆಗೆ ಅಭಿವೃದ್ಧಿಗಾಗಿ ಸಾಮಾನ್ಯ ಸಭೆಯ ಅನುಮೋಧನೆಯಂತೆ ಹಣ ನೀಡಲಾಗಿದೆ.
ಈ ವಿಚಾರವನ್ನು ಮುಂದಿಟ್ಟುಕೊಂಡು ಕಪೋಲಕಲ್ಪಿತ ಅಪಪ್ರಚಾರ ನಡೆಸುತ್ತಿರುವ ಹಿಂದೆ ಪಂಚಾಯತ್ ಅಭಿವೃದ್ಧಿ
ಸಹಿಸದ ಕಾಣದ ಕೈಗಳ ಪ್ರಚೋದನೆ ಇದೆ ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.
ಹೆಂಡದಂಗಡಿ ವಿಚಾರ ಮುಂದಿಟ್ಟುಕೊಂಡು ಅಪಪ್ರಚಾರ ನಡೆಸಿ ಅರಣ್ಯ ಇಲಾಖೆ ಮೂಲಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಹೀಗಾದರೆ ಅಭಿವೃದ್ಧಿ ಕೆಲಸಗಳು ನಡೆಯುವುದು ಹೇಗೆ ಎಂದು ಪ್ರಶ್ನೆ ಮಾಡಿರುವ ಗಿರೀಶ್ ಕೆ.ಟಿ, ಯಶಸ್ವಿ ಕಡೂರ್, ಸಿದ್ದಾರ್ಥ ಈ ಅಪಪ್ರಚಾರವನ್ನು ಇಡಿ ಗ್ರಾಮ ಪಂಚಾಯತ್ ಖಂಡಿಸಿದೆ ಮತ್ತು ಇದೆ ರೀತಿ ಅಪಪ್ರಚಾರ ಮುಂದುವರೆದರೆ ಪಂಚಾಯತ್ ಹಿತ ದೃಷ್ಟಿಯಿಂದ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.