ಬಿಜೆಪಿಗೆ ಸೇರದ
ಬಡವರು ಬಡವರು ವಿದೇಶಿಗರು
ಅರ್ಹತೆಗಿಂತಲೂ ಪಕ್ಷದ
ಲೇಬಲ್ ಮೇಲೆ ವಸತಿ ಹಂಚಿಕೆ – ಕಿಮ್ಮನೆ ತೀವ್ರ ವಾಗ್ದಾಳಿ
ಬಡವರು ಬಿಜೆಪಿ ಪಕ್ಷಕ್ಕೆ
ಸೇರಿಲ್ಲ ಎಂದಾದರೆ ಅಂತವರು ಈ ದೇಶದವರೇ ಅಲ್ಲ ಎಂಬಷ್ಟು ದ್ವೇಷ ಸಾಧನೆಯನ್ನು ಶಾಸಕ ಆರಗ ಜ್ಞಾನೇಂದ್ರ ಇಂದಿಗೂ ಮಾಡಿಕೊಂಡೇ
ಬಂದಿದ್ದಾರೆ. ಅದಕ್ಕೆ ನೂರಾರು ಉದಾಹರಣೆಗಳುಂಟು. ಶ್ರೀಮಂತಿಕೆ ತುತ್ತ ತುದಿಯಲ್ಲಿರುವ ಆರಗ ಜ್ಞಾನೇಂದ್ರರಿಗೆ
ಬಡತನ, ಅಸಹಾಯಕತೆ ಲೆಕ್ಕಕ್ಕೆ ಬರುವುದಿಲ್ಲ. ಅರ್ಹ ಬಡವರಿಗೆ ಸರ್ಕಾರದ ಸೌಲತ್ತು ತಪ್ಪಿಸುವ ಸಲುವಾಗಿ
ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಯಾವುದೇ ಅಧಿಕಾರಿಗೂ ಅವರು ಬೆದರಿಕೆ ಒಡ್ಡುತ್ತಾರೆ. ಹೊದಲ
ಅರಳಾಪುರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಪ್ರಧಾನಮಂತ್ರಿ ವಸತಿ ಸೌಲಭ್ಯ ದೊರಕದೆ ಇರಲು ಅವರ ಇಂತಹ
ಮನಸ್ಥಿತಿಯೆ ಕಾರಣ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ವಾಗ್ದಾಳಿ ನಡೆಸಿದ್ದಾರೆ.
ವಸತಿ ಸಮಿತಿಯ ತಾಲ್ಲೂಕು
ಅಧ್ಯಕ್ಷರಾದ ಶಾಸಕ ಆರಗ ಜ್ಞಾನೇಂದ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆ ಹಂಚಿಕೆಯಲ್ಲಿ ತಾರತಮ್ಯ
ಧೋರಣೆ ತೋರಿದ್ದಾರೆ. ವಸತಿ ಹಂಚಿಕೆ ಪಟ್ಟಿ ಪುನರ್ ಪರಿಷ್ಕರಿಸಬೇಕು ಎಂದು ಹೊದಲ-ಅರಳಾಪುರ ಗ್ರಾಮ
ಪಂಚಾಯಿತಿ ಸದಸ್ಯ ವಿನಾಯಕ ಎಂ ತುಪ್ಪದಮನೆ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು
ಮಾತನಾಡಿದ ಕಿಮ್ಮನೆ ಎಷ್ಟೋ ಕಡೆ ಅತೀವೃಷ್ಟಿಯಿಂದ ತೊಂದರೆಗೊಳಗಾದ ಬಡವರು ಬಿಜೆಪಿ ಅಲ್ಲ ಎನ್ನುವ ಒಂದೇ
ಕಾರಣಕ್ಕೆ ಪರಿಹಾರದಿಂದ ವಂಚಿತರಾಗಿದ್ದಾರೆ. ಬದಲಾಗಿ ಅರ್ಹತೆ ಇಲ್ಲದಿದ್ದರೂ ಬಿಜೆಪಿ ಎನ್ನುವ ಕಾರಣಕ್ಕಾಗಿಯೇ
ಪರಿಹಾರ ಪಡೆದುಕೊಂಡವರು ಇದ್ದಾರೆ. ಶಾಸಕರಾದವರು ಎಲ್ಲರನ್ನು ಸಮಾನವಾಗಿ ಕಾಣಬೇಕು. ಆ ಮನಸ್ಥಿತಿ ಜ್ಞಾನೇಂದ್ರರಿಗೆ
ಎಂದಿಗೂ ಬಂದಿಲ್ಲ. ಆದರೆ ನಾನು ಶಾಸಕನಾಗಿದ್ದ ಎರಡು ಅವಧಿಯಲ್ಲಿ ಬಗರ್‌ಹುಕುಂ ವಿಚಾರದಿಂದ ಹಿಡಿದು
ಮನೆ ಹಂಚಿಕೆವರೆಗೆ ಎಂದಿಗೂ ಕೂಡ ತಾರತಮ್ಯ ಅಥವಾ ದ್ವೇಶ ರಾಜಕಾರಣ ಮಾಡಿರಲಿಲ್ಲ. ಎಂದರಲ್ಲದೇ ಈ ಪ್ರತಿಭಟನೆ
ಆರಂಭ ಅಷ್ಟೇ ಮುಂದಿನ 15 ದಿನದೊಳಗೆ ಈ ರೀತಿ ಯಾವ ಪಂಚಾಯಿತಿಗಳಿಗೆ ವಂಚನೆಯಾಗಿದೆಯೋ ಆ ಎಲ್ಲರನ್ನು
ಕೂಡಿಸಿಕೊಂಡು ಬೃಹತ್ ಹೋರಾಟ ರೂಪಿಸುತ್ತೇವೆ ಎಂದರು.
ಉಪವಾಸ ಸತ್ಯಾಗ್ರಹ
ಹಮ್ಮಿಕೊಂಡಿದ್ದ ಹೊದಲ ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ ಎಂ ತುಪ್ಪದಮನೆ ಮಾತನಾಡಿ ಅನ್ಯಾಯ ಖಂಡಿಸಿದರೆ
ಶಾಸಕರು ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಹೊದಲ ಪಂಚಾಯಿತಿಯಲ್ಲಿ ಈಗಾಗಲೇ ಬಸವ ವಸತಿ
ಯೋಜನೆಯಡಿ 154, ಪ್ರಧಾನಿ ಆವಾಸ್ ಯೋಜನೆಯಡಿ 19 ಮನೆಗಳಿಗೆ ಅರ್ಜಿ ಸಲ್ಲಿಕೆಯಾಗಿದೆ. ಗ್ರಾಮಸಭೆ,
ವಾರ್ಡ್ ಸಭೆಗಳಲ್ಲಿ ಜನರ ಪ್ರಶ್ನೆಗಳಿಗೆ ಪಂಚಾಯಿತಿ ಸದಸ್ಯರು ಹೇಗೆ ಉತ್ತರಿಸಬೇಕು ಎಂದು ಪ್ರಶ್ನಿಸಿದರು.
ವಿವಾದಕ್ಕೆ ಕಾರಣವಾದ
ಫಲಾನುಭವಿಗಳ ಪಟ್ಟಿ
2024-25ನೇ ಸಾಲಿನಲ್ಲಿ
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ತಾಲ್ಲೂಕಿಗೆ ಒಟ್ಟು 473 ಮನೆಗಳು ಮಂಜೂರಾಗಿದೆ. 38 ಗ್ರಾಮ ಪಂಚಾಯಿತಿಗಳ
ಪೈಕಿ ಕೋಣಂದೂರಿಗೆ 50, ಹಾದಿಗಲ್ಲು 42, ಬೆಜ್ಜವಳ್ಳಿ 45, ಗುಡ್ಡೇಕೊಪ್ಪ 25 ಮನೆಗಳನ್ನು ಹಂಚಿಕೆ
ಮಾಡಿದರೆ ಹೊದಲ 1, ಸಾಲ್ಗಡಿ 1, ದೇಮ್ಲಾಪುರ 1 ಮನೆಗಳು ಮಾತ್ರ ಮಂಜೂರಾಗಿದೆ. ಬಸವಾನಿ ಪಂಚಾಯಿತಿಗೆ
0.
ವಿನಾಯಕ ಜೊತೆಯಲ್ಲಿ
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಧುರೀಣರು
ಹೊದಲ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಪ್ರತಿಭಟನೆ ಮತ್ತು ಉಪವಾಸ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಂಡಿತ್ತು. ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ, ನಿಶ್ಚಿತಾ, ಕಾಂಗ್ರೆಸ್ ಪಕ್ಷದ ಬಹುತೇಕ ಹಿರಿಯ ಕಿರಿಯ ಮುಖಂಡರಾದ ಕೆಸ್ತೂರು ಮಂಜುನಾಥ, ಅಮ್ರಪಾಲಿ ಸುರೇಶ್, ಹುಲ್ಲತ್ತಿ ದಿನೇಶ್, ಕಂಪದಗದ್ದೆ ಸುರೇಶ್, ಪುಟ್ಟೋಡ್ಲು ರಾಘವೇಂದ್ರ, ಅಮರನಾಥ ಶೆಟ್ಟಿ, ಆದರ್ಶ ಹುಂಚದಕಟ್ಟೆ, ಪೂರ್ಣೇಶ್ ಕೆಳಕೆರೆ, ಬಸವಾನಿ ಉದಯ್ ಕುಮಾರ್, ರಾಘವೇಂದ್ರ ಶೆಟ್ಟಿ, ಪಡುವಳ್ಳಿ ಹರ್ಷೇಂದ್ರ, ಸುಶೀಲ ಶೆಟ್ಟಿ, ವಾದಿರಾಜ್, ಕುಡುಮಲ್ಲಿಗೆ ರಮೇಶ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಅಶ್ವಲ್ ಗೌಡ, ಶ್ರೇಯಸ್ ರಾವ್, ರವಿಕುಮಾರ್, ಹೊದಲ ಶಿವು, ವಿನಂತಿ ಕರ್ಕಿ, ಗೀತಾ ರಾಘವೇಂದ್ರ, ಜೀನಾ ವಿಕ್ಟರ್ ಹೀಗೆ ಅನೇಕರು ಪಾಲ್ಗೊಂಡಿದ್ದರು.