ಬೇಗುವಳ್ಳಿ ಗಣೇಶೋತ್ಸವದಲ್ಲಿ ಡಿಜೆ ಬಳಕೆ

ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ವ್ಯಕ್ತಿ ಸಾವು
ತೀರ್ಥಹಳ್ಳಿ ಪಟ್ಟಣದಲ್ಲಿ ಗುಬ್ಬಚ್ಚಿ, ಡ್ರೋನ್‌, ಕ್ಯಾಮೆರಕ್ಕೆ ಹಾನಿ

ತೀರ್ಥಹಳ್ಳಿಯಲ್ಲಿ ನಡೆದ ವಿವಿಧ ಗಣೇಶೋತ್ಸವ ಮೆರವಣಿಗೆಯಲ್ಲಿ ಭಾರಿ ಪ್ರಮಾಣದ ಡೆಸಿಬಲ್‌ ಹೊಂದಿರುವ ಡಿಜೆ ಬಳಕೆಯಾಗಿದೆ. ಡಿಜೆಗೆ ತಕ್ಕಂತೆ ಯುವಕರನ್ನು ರಂಜಿಸುವ ಉದ್ದೇಶದಿಂದ ಲೇಸರ್‌ ಲೈಟ್‌, ವಿವಿಧ ರೀತಿಯ ಬೆಳಕುಗಳನ್ನು ಬಳಕೆ ಮಾಡಲಾಗಿದ್ದು ಹಾನಿಯ ಲೆಕ್ಕ ಅಂದಾಜಿಸಲು ಸಾಧ್ಯವಾಗಿಲ್ಲ.

ಬೇಗುವಳ್ಳಿಯಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಬಿದರಹಳ್ಳಿ ಗ್ರಾಮದ 66 ವರ್ಷದ ಇ.ಎಸ್.‌ ಶ್ಯಾಮಣ್ಣ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ವಿಪರೀತ ಪ್ರಮಾಣದಲ್ಲಿ ಬಳಕೆಯಾದ ಡಿಜೆ ಶಬ್ದದಿಂದಲೇ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ವಿಪರೀತ ಪ್ರಮಾಣದ ಧ್ವನಿ ಮತ್ತು ಲೇಸರ್‌ ಬಳಕೆ ಮಾಡಿದ್ದು ಡ್ರೋಣ್‌, ಡಿಎಸ್‌ಎಲ್‌ಆರ್‌ ಕ್ಯಾಮೆರಾ, 150ಕ್ಕೂ ಹೆಚ್ಚು ಮೊಬೈಲ್‌ ಕ್ಯಾಮೆರಾ ಲೆನ್ಸ್‌, ಡಿಸ್ಪ್ಲೇ, ಆಜಾದ್‌ ರಸ್ತೆಯ ಡಿವೈಡರ್‌ ಮೇಲಿನ ಮರದಲ್ಲಿ ವಾಸವಾಗಿದ್ದ ಗುಬ್ಬಚ್ಚಿ, ಸಣ್ಣ ಪಕ್ಷಿಗಳು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿವೆ. ಕೆಲವು ಪಕ್ಷಿಗಳು ಹಾರಿ ಹೋಗಿವೆ. ಕೆಲವು ಅಂಗಡಿ ಮಳಿಗೆಗಳ ವಸ್ತುಗಳು ಅಲ್ಲಾಡಿವೆ. ಔಷಧಿ ಮಳಿಗೆಗಳಲ್ಲಿ ಕೂಡಿದ್ದ ಗಾಜಿನ ಬಾಟಿಲಿ, ಅಂಗಡಿಗಳಲ್ಲಿ ಸಂಗ್ರಹಿಸಿದ್ದ ವಿವಿಧ ರೀತಿಯ ವಸ್ತುಗಳು ಕೆಳಗೆ ಬಿದ್ದು ಹಾಳಾಗಿವೆ. ತೀರ್ಥಹಳ್ಳಿ ಪಟ್ಟಣದಲ್ಲಿ ವಾಸಿಸುವ ಅನೇಕರ ಮನೆಯ ಒಳಗೆ ಅಲುಗಾಡಿದಂತೆ ಆಗಿದ್ದು ಹಲವರಿಗೆ ಭೂಕಂಪದ ವಾತಾವಣರ ಸೃಷ್ಟಿಯಾಗಿತ್ತು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post