ಸಾರ್ವಜನಿಕ ನೋಟೀಸ್
ನೀಡದ ಅಧಿಕಾರಿಗಳು
ಮರ ಕಡಿತಲೆಗೆ ಬೇಕಾಬಿಟ್ಟಿ
ಕಾನೂನು
ತೀರ್ಥಹಳ್ಳಿ ಪಟ್ಟಣದ
ಮುಖ್ಯ ಬಸ್ ನಿಲ್ದಾಣದ ಸಮೀಪದ ದ್ವಾರಕ ಹೋಟೆಲ್ ಮುಂಭಾಗದಲ್ಲಿ ಹುಲುಸಾಗಿ ಬೆಳೆದಿದ್ದ ಹಲಸಿನ ಮರವೊಂದು
ಧರೆಗೆ ಕೆಡವಲಾಗಿದೆ. ಸ್ವಾತಂತ್ರ್ಯ ಪೂರ್ವದ ಮರಗಳನ್ನು ಬೇಕಾಬಿಟ್ಟಿ ನೆಲಕ್ಕುರುಳಿಸುತ್ತಿದ್ದ ಇಲಾಖೆ
ಧೋರಣೆ ಕುರಿತು ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಹಲಸಿನ ಮರ ಅನೇಕ
ಪ್ರಭೇದದ ಬೆಳ್ಳಕ್ಕಿಗಳ ಆವಾಸ ಸ್ಥಾನವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಈ ಮರ ಇರುವುದರಿಂದ
ಅನೇಕ ವರ್ಷಗಳಿಂದ ಇಲ್ಲಿ ಬೆಳ್ಳಕ್ಕಿಗಳು ಇತರೆ ಬಲಿ ಪ್ರಾಣಿಗಳ ತೊಂದರೆಗಳಿಲ್ಲದೆ ಹಾಯಾಗಿ ರಾತ್ರಿ
ಕಳೆಯುತ್ತಿದ್ದವು. ಇದೀಗ ಅವುಗಳ ಆವಾಸ ಸ್ಥಾನ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಕಾಡು ರಕ್ಷಕರ ಹೆಸರಿನಲ್ಲಿ
ಬೇಕಾಬಿಟ್ಟಿ ಅರಣ್ಯ ನಾಶ ಮಾಡುತ್ತಿರುವ ಇಲಾಖೆ ಮರಗಳಿಗೆ ಬೇಕಾಬಿಟ್ಟಿ ಕೊಡಲಿ ಇಡುತ್ತಿದೆ. ರಸ್ತೆಗೆ
ಬೀಳುವ ಮರಗಳನ್ನು ಕಡಿಯಲು ಸಾವಿರಾರು ಅರ್ಜಿಗಳು ಸಲ್ಲಿಕೆಯಾದರು ಇಲಾಖೆ ಗಪ್ ಚುಪ್ ಎನ್ನದೆ ದೂರನ್ನು
ಮೂಲೆಗೆ ಒತ್ತುತ್ತಿದೆ. ಆದರೆ ಬೆಲೆ ಬಾಳುವ ಮರಗಳು ರಸ್ತೆಯ ಪಕ್ಕದಲ್ಲಿ ಇದ್ದರೆ ಅದನ್ನು ಕಡಿಯಲು
ಇನ್ನಿಲ್ಲದ ಹುನ್ನಾರ ನಡೆಸುತ್ತವೆ. ಹಲಸಿನ ಮರಕ್ಕೆ ಉತ್ತಮ ಬೆಲೆ ಇರುವ ಕಾರಣದಿಂದಲೇ ಇಲಾಖೆ ಮರ ಉರುಳಿಸಿದೆ.
ಸಾಮಾನ್ಯ ಜನರಿಗೆ ಒಂದು ಕಾನೂನು ಇಲಾಖೆಗೆ ಒಂದು ಕಾನೂನು ಎಂಬ ಬಂಡ ಧೈರ್ಯದಲ್ಲಿ ಮಲೆನಾಡನ್ನು ನಾಶಕ್ಕೆ
ಮುಂದಾಗಿದೆ.
ಸಾರ್ವಜನಿಕ ನೋಟೀಸ್
ನೀಡದೆ ಇಲಾಖೆ ಮರ ಕಡಿಯುವ ಕೆಲಕ್ಕೆ ಮುಂದಾಗುತ್ತಿದೆ. ಮರ ಕಡಿತಲೆ ಮಾಡುವ ಕುರಿತು ಸಾರ್ವಜನಿಕರಿಗೆ
ಯಾವುದೇ ನೋಟೀಸ್ ಕೂಡ ನೀಡುತ್ತಿಲ್ಲ. ಇಂತಿರುವಾಗ ಸಾಮಾನ್ಯರು, ರೈತರು ಬೆಳೆದ ವಾಣಿಜ್ಯ ಮರ ಕಡಿಯಲು
ಕೂಡ ತಂಟೆ, ತಗಾದೆ ತೆಗೆದು ಇಲ್ಲದ ಸಲ್ಲದ ಕೇಸ್ ಬುಕ್ ಮಾಡಲಾಗುತ್ತಿದೆ. ಇದೆಂತಹ ಇಲಾಖೆ ನಿಯಮ
ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.