ಹಿಂದುತ್ವದ ಮುಂದೆ
ಗ್ಯಾರಂಟಿ ಲೆಕ್ಕಕ್ಕೆ ಬರಲ್ಲ
ಯಡಿಯೂರಪ್ಪ ಕುಟುಂಬ
ಸ್ವಾರ್ಥ ರಾಜಕಾರಣ ಮಾಡುತ್ತಿದೆ
ವಿಪ್ರ ಸಮಾಜಕ್ಕೆ ಮನವಿ ಮಾಡಿದ ಕೆ.ಎಸ್. ಈಶ್ವರಪ್ಪ
ಹಿಂದುತ್ವ ಈ ದೇಶದ
ಅಂತಃಸತ್ವ ಮತ್ತು ಬುನಾದಿ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದ ಹಿಂದೂ ಸಮಾಜ 500 ವರ್ಷಗಳಿಂದ
ಕಂಡ ಕನಸುಗಳನ್ನು ನನಸು ಮಾಡುತ್ತಿದ್ದಾರೆ. ಕೊಟ್ಟ ಆಶ್ವಾಸನೆಗಳನ್ನೇಲ್ಲಾ ಈಡೇರಿಸಿ ಸಮಸ್ತ ಹಿಂದೂಗಳ
ನೆಚ್ಚಿನ ನಾಯಕನಾಗಿ ಉದಯಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ
ಪ್ರಮುಖ ವಿಚಾರ. ಆ ಕಾರಣಕ್ಕಾಗಿಯೇ ಜನತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಬದಿಗೆ ಸರಿಸಿ
ಮೋದಿಯವರಿಗೆ ಮತ್ತು ಹಿಂದುತ್ವಕ್ಕೆ ಮತ ನೀಡುತ್ತಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ ನಗರದ
ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ವಿಪ್ರ ಸಮಾಜದಿಂದ ವಿಪ್ರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ
ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಮೋದಿ ಮತ್ತು ಹಿಂದುತ್ವದ ಆಶಯಗಳು ಭಗ್ನಗೊಳ್ಳುವ ಹಂತ ತಲುಪಿದೆ.
ಯಡಿಯೂರಪ್ಪರ ಹೋರಾಟ ಮತ್ತು ಒಂದು ಕಾಲದಲ್ಲಿ ಬಿಜೆಪಿಯನ್ನು ನಮ್ಮೆಲ್ಲರೊಡನೆ ಅವರು ಪಟ್ಟ ಪರಿಶ್ರಮದ
ಕುರಿತು ನನಗೆ ವೈಯಕ್ತಿಕವಾಗಿ ಮೆಚ್ಚುಗೆ ಇದೆ. ಆದರೆ ಈಗ ಅವರ ಕುಟುಂಬ ರಾಜಕಾರಣ ಹಿಂದುತ್ವದ ಹಾಗೂ
ಬಿಜೆಪಿಯ ಮೂಲ ಸಿದ್ಧಾಂತವನ್ನೇ ಹಾಳು ಮಾಡಿದೆ. ಎಂತಹ ಮಾರ್ಗದಿಂದಲಾದರೂ ಸರಿ ತಮ್ಮ ಕುಟುಂಬವೇ ರಾಜ್ಯ
ಬಿಜೆಪಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ತಮ್ಮ ಪುತ್ರ ವಿಜಯೇಂದ್ರನೇ ಮುಂದಿನ ಮುಖ್ಯಮಂತ್ರಿ
ಆಗಬೇಕು ಎಂಬ ಅವರ ಸ್ವಾರ್ಥ ಹಿಂದುತ್ವಕ್ಕೆ ವಿರುದ್ಧವಾಗಿದ್ದು. ಹಾಗಾಗಿಯೇ ಸಮಸ್ತ ರಾಷ್ಟ್ರಭಕ್ತ
ಮತ್ತು ಬಿಜೆಪಿಯ ಮೂಲ ಸಿದ್ಧಾಂತವಾದಿಗಳ ಪ್ರತಿನಿಧಿಯಾಗಿ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.
ತಮ್ಮ ಸಮುದಾಯ ತಮ್ಮನ್ನು
ಮಾತ್ರ ನಾಯಕನನ್ನಾಗಿ ಒಟ್ಟುತ್ತದೆ. ಹಾಗಾಗಿ ಬಿಜೆಪಿ ಕೂಡ ತನ್ನನ್ನು ಏನು ಮಾಡಿದರೂ ಒಪ್ಪಲೇಬೇಕೆಂಬ
ಅಹಂಕಾರ ಅವರಲ್ಲಿದೆ. ಆದರಿಂದಲೇ ಅವರು ಕೆಜೆಪಿ ಕಟ್ಟಿ ಬಿಜೆಪಿಯನ್ನು ಸೋಲಿಸಿದರು. ಇವೆಲ್ಲವೂ ನರೇಂದ್ರ
ಮೋದಿ, ಅಮಿತ್ ಶಾ, ನಡ್ಡಾರವರ ಗಮನದಲ್ಲಿದೆ. ಈಗವರು ಬಿಜೆಪಿಯನ್ನು ಪರೋಕ್ಷವಾಗಿ ಮುಗಿಸುತ್ತಿದ್ದಾರೆ.
ಹಿಂದೆ ಪಕ್ಷದ ಹಿರಿಯರು,
ನಾಯಕರು ಎಲ್ಲರೂ ಕೂತು ಯಾರಿಗೆ ಟಿಕೆಟ್ ಕೊಡಬೇಕು ಎಂದು ತೀರ್ಮಾನ ಮಾಡುತ್ತಿದ್ದೇವು. ಆದರೆ, ಈಗ
ಯಡಿಯೂರಪ್ಪ ಅವರು ಯಾರಿಗೆ ಹೇಳುತ್ತಾರೆ ಅವರಿಗೆ ಟಿಕೆಟ್ ಕೊಡುತ್ತಿದ್ದಾರೆ. ಹಿಂದುತ್ವ ನಾಯಕರಾಗಿದ್ದ
ಸಿ.ಟಿ.ರವಿ, ಬಸವನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ , ಸದಾನಂದ ಗೌಡರನ್ನು ಪಕ್ಕಕ್ಕೆ ಸರಿಸಲಾಗಿದೆ.
ಈ ಚುನಾವಣೆ ಮುಗಿದ ಮೇಲೆ ವಿಧಾನಸಭಾ ಚುನಾವಣೆ ಬರುತ್ತದೆ. ಇವರೆಲ್ಲ ಗೆದ್ದು ಬಂದರೆ ನನ್ನ ಮಗ ಮುಖ್ಯಮಂತ್ರಿ
ಆಗಲು ಸಾಧ್ಯ ಇಲ್ಲ ಎಂಬ ಯಡಿಯೂರಪ್ಪ ಸ್ವರ್ಥವೇ ಇದಕ್ಕೆ ಕಾರಣ ಎಂದರಲ್ಲದೇ ನನ್ನ ಹೋರಾಟ ನೈಜ ಹಿಂದುತ್ವದ
ಪರ ಎಂಬುದು ಅರಿವಾದ ಮೇಲೆ 500 ಜನ ಸೇರುವ ಸ್ಥಳದಲ್ಲಿ 5 ಸಾವಿರ ಸೇರುತ್ತಿದ್ದಾರೆ. ಕಾರ್ಯಕರ್ತರೇ
ಪರಸ್ಪರ ಪ್ರಚಾರ ಮಾಡಿಕೊಂಡು ಮುನ್ನಡೆಸುತ್ತಿದ್ದಾರೆ.
ನಾಮಪತ್ರ ಸಲ್ಲಿಕೆ
ಬಳಿಕ ಎಲ್ಲ ಮಠಗಳಿಗೂ ಭೇಟಿ ನೀಡಿದ್ದೆ. ಆಗ ಎಲ್ಲ ಮಠಾಧೀಶರು ನಿಮವು ಗೆಲ್ಲುತ್ತೀರ ಹೋಗಿ ಎಂದು ಆಶೀರ್ವಾದ
ಮಾಡಿ ಕಳುಹಿಸಿದ್ದಾರೆ. ಜನರ ಆಶೀರ್ವಾದದಿಂದ ಶಾಸಕ, ಮಂತ್ರಿ, ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ.
ಈಗ ನಾನು ಅಧಿಕಾರಕ್ಕಾಗಿ ಚುನಾವಣೆ ಮಾಡುತ್ತಿಲ್ಲ. ಬಿಜೆಪಿ ಪಕ್ಷದಲ್ಲಿರುವ ವ್ಯವಸ್ಥೆ ಬದಲಾಗಬೇಕು
ಎಂಬ ಕಾರಣಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ಈಗಲೂ ನಿಮ್ಮ ಆಶೀರ್ವಾದದಿಂದ ಗೆದ್ದು ಬರುತ್ತೇನೆ. ಖಚಿತವಾಗಿ
ಹಿಂದುತ್ವ ಉಳಿಸುತ್ತೇನೆ. ಶಿವಮೊಗ್ಗ ನಗರದಲ್ಲಿ 2.60 ಲಕ್ಷ ಮತ ಇರಬೇಕಾದರೆ, 8-10 ಸಾವಿರ ನನ್ನ
ಜಾತಿ ಓಟಿಲ್ಲ. ಆದರೂ, ನಿಮ್ಮೆಲ್ಲರ ಆಶೀರ್ವಾದ ಮಾಡಿ ನನ್ನ ಗೆಲ್ಲಿಸಿಕೊಂಡು ಬಂದಿದ್ದೀರಿ. ಚುನಾವಣೆಯಲ್ಲಿ
ಗೆದ್ದ ಬಳಿಕ ಕಾರ್ಯಕರ್ತರ ಆದರ್ಶದ ಪ್ರಕಾರ ಬಿಜೆಪಿ ಬಿಡಲ್ಲ, ನರೇಂದ್ರ ಮೋದಿ ಜೊತೆ ನಾನು ಇರುತ್ತೇನೆ.
ಧರ್ಮವನ್ನು ಉಳಿಸುತ್ತೇನೆ ಎಂದಿದ್ದಾರೆ.
