ಬಗರ್ ಹುಕುಂ ವಿಷಯದಲ್ಲಿ ಪಕ್ಷಪಾತ ಮಾಡಿಲ್ಲ

ಕಿಮ್ಮನೆಗೆ ಆಪ್ತ ಸಮಾಲೋಚನೆ ಅಗತ್ಯವಿದೆ
ಮೇಗರವಳ್ಳಿಯ ಹೈಸ್ಕೂಲ್ ನಾಟ ಶಾಮೀಲಿಂದ 10 ವರ್ಷಗಳಿಂದ ಬಂದಿಲ್ಲ - ಆರಗ
ಕಿಮ್ಮನೆ ರತ್ನಾಕರ್ ಇತ್ತೀಚಿಗೆ ಸಭ್ಯತೆ, ಎಲ್ಲೆ ಮೀರಿ ಮಾತನಾಡುತ್ತಿರುವುದು ನೋಡಿದರೆ ಅವರಿಗೆ ಒಳ್ಳೆಯ ಆಪ್ತ ಸಮಾಲೋಚನೆ ಅಗತ್ಯವಿದೆ ಎನಿಸುತ್ತಿದೆ. ತಾಲೂಕಿಗೆ ಅವರ ಮತ್ತು ನನ್ನ ಕೊಡುಗೆ ಏನು ಎಂಬುದರ ಪರಮರ್ಶೆ ನಡೆಯಲಿ. ಬಹಿರಂಗ ಸವಾಲಿಗೆ ನಾನು ಸಿದ್ದ ಎಂದು ಶಾಸಕ ಆರಗ ಜ್ಞಾನೇಂದ್ರ ಗುಡುಗಿದ್ದಾರೆ.
ಪಕ್ಷದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉದ್ದಕ್ಕೂ ಕಿಮ್ಮನೆ ರತ್ನಾಕರ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಡಿ.ಎಸ್. ವಿಶ್ವನಾಥ್ ಶೆಟ್ಟಿ ವಿರುದ್ಧ ಕಿಡಿಕಾರಿದರು.
ಕಿಮ್ಮನೆಗೆ ವಿಶ್ವನಾಥ್ ಶೆಟ್ಟಿ ಗುರುವಾಗಿದ್ದಾರೋ ಅಥವಾ ವಿಶ್ವನಾಥ್ ಶೆಟ್ಟಿಗೆ ಕಿಮ್ಮನೆ ಗುರುವೋ ಗೊತ್ತಿಲ್ಲ.
ಬಗರ್ ಹುಕುಂ ವಿಷಯದಲ್ಲಿ ನಾನು ಪಕ್ಷಪಾತಿ ಎನ್ನುವ ಕಿಮ್ಮನೆ ವಿಶ್ವನಾಥ್ ಶೆಟ್ಟಿ ಹೆಂಡತಿ, ಮಗನ ಹೆಸರಲ್ಲಿ ಜಮೀನು ಮಂಜೂರು ಮಾಡಿದ್ದಾರೆ.
ಅವರ ಬೆಂಬಲಿಗರು ಎನ್ನುವ ಕಾರಣಕ್ಕೆ ಮಂಡಗದ್ದೆಯಲ್ಲಿ ಒಬ್ಬನೇ ವ್ಯಕ್ತಿಗೆ ಮೂವತ್ತು ಮೂರು ಎಕರೆ ಬೇರೆ ಬೇರೆ ಹೆಸರಲ್ಲಿ ಒಬ್ಬನೇ ವ್ಯಕ್ತಿಗೆ ಮಂಜೂರು ಮಾಡಿದ್ದಾರೆ ಇದನ್ನು ನಾನು ಪ್ರಶ್ನೆ ಮಾಡಬಾರದೆ...?
ವಿಶ್ವನಾಥ್ ಶೆಟ್ಟಿ ಎಂತವರು ಎಂದು ಇಡೀ ತೀರ್ಥಹಳ್ಳಿಗೆ ಗೊತ್ತು. ಹಿಂದೆ ಹೈಸ್ಕೂಲ್ ಕಮಿಟಿ ಅಧ್ಯಕ್ಷ ಆಗಿದ್ದಾಗ ಅವರು ಶಾಲೆಗೆ ಸೇರಿದ ಹಲಸಿನ ನಾಟವನ್ನೇ ಮಾಯ ಮಾಡಿದ್ದರು. ನಂತರ ಶ್ರೀ ರಾಮೇಶ್ವರ ದೇವಾಲಯ ಸಮಿತಿ ಸೇರಿಕೊಂಡು ಅಲ್ಲಿಯೂ ಹಲಸಿನ ನಾಟ ಲಪಟಾಯಿಸಿ ಅವರ ಮನೆಯಲ್ಲಿಟ್ಟುಕೊಂಡು ಕೇಸು ಕೂಡ ಆಗಿದೆ ಇಂತವರನ್ನು ಮುಂದಿಟ್ಟುಕೊಂಡು ನನ್ನ ವಿರುದ್ಧ ಭಾಷಣ ಮಾಡಿಸುತ್ತಾರೆ ಎಂದು ಕಿಡಿಕಾರಿದರು.
ಕಿಮ್ಮನೆಯಂತ ಸಣ್ಣ ಮನಸಿನ ವ್ಯಕ್ತಿಯನ್ನೇ ನಾನು ನೋಡಿಲ್ಲ ಅವರು ಭಾರಿ ಓದಿದ್ದಿನಿ ಎಂದು ನಾಟಕ ಮಾಡುತ್ತಾರೆ ವಿಚಾರವಾದಿ ಎನ್ನುತ್ತಾರೆ ಗಾಂಧಿ, ಬಸವ ಎನ್ನುತ್ತಾರೆ ಆದರೆ ತೋರಿಕೆಗೆ ಮಡಿವಸ್ತ್ರ ಹಾಕಿ ದೇವಸ್ಥಾನದಲ್ಲೂ ಸುದ್ದಿಗೋಷ್ಠಿ ನಡೆಸಿ ಅಪಚಾರ ಮಾಡುತ್ತಾರೆ. ಬ್ರಾಹ್ಮಣರ ಜನಿವಾರ ಸುಟ್ಟವರು ನನ್ನ ಬೆಳೆಸಿದ್ದು ಬ್ರಾಹ್ಮಣರೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಂತ್ಲದಲ್ಲಿ ನನ್ನ ಮಗ ಜಾಗ ಕೊಂಡರೆ ಏನು ತಪ್ಪು. ಅವನು ಕೆಲಸ ಮಾಡಿ ದುಡಿದ ಹಣದಿಂದ ಕೊಂಡಿದ್ದಾನೆ. ಬಡವರು ಬೆಳೆಯಲೇ ಬಾರದ ಎಂದು ಪ್ರಶ್ನೆ ಮಾಡಿದ ಅವರು ಕಿಮ್ಮನೆ ತರ ಮಗನನ್ನು ಅಮೇರಿಕಾ ಬಿಟ್ಟು ಓದಿಸುವ ಶಕ್ತಿ ಬಡವರಾದ ನಮಗೆ ಇಲ್ಲ ಎಂದರು.
ಬಗರ್ ಹುಕುಂ ವಿಷಯದಲ್ಲಿ ಕಿಮ್ಮನೆ ರೀತಿ ನಾನು ಪಕ್ಷಪಾತ ಮಾಡಿಲ್ಲ ಅನರ್ಹರಿಗೆ ಮಂಜೂರು ಮಾಡಿದ್ದು ಮಾತ್ರ ಪ್ರಶ್ನೆ ಮಾಡಿದ್ದೇನೆ ಎಂದವರು ಸ್ಪಷ್ಟವಾಗಿ ಹೇಳಿದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post