ಶಿವಮೊಗ್ಗದಲ್ಲಿ ಈಶ್ವರಪ್ಪ ಮಿಂಚಿನ ಸಂಚಾರ

ಬಿಳಿ ಕಮಲ ಕೊಟ್ಟು ಶುಭ ಹಾರೈಸಿದ ಕಾರ್ಮಿಕರು

ಪ್ರಚಾರಕ್ಕಾಗಿಯೇ ಸಿಬ್ಬಂದಿಗೆ ರಜೆ ನೀಡಿದ ವಿವಿಧ ಕಾರ್ಖಾನೆ ಶೋರೂಂಗಳು

ಶಿವಮೊಗ್ಗದಲ್ಲಿ ಇಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಲೋಕಸಭಾ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಮಿಂಚಿನ ಸಂಚಾರ ನಡೆಸಿ ಮತ ಯಾಚಿಸಿದರು. ನನ್ನದು ವೈಯಕ್ತಿಕ ಲಾಭದ ಸ್ಪರ್ಧೆಯಲ್ಲ ಬಿಜೆಪಿ ಪಕ್ಷ ಹಿಂದುತ್ವ ಮತ್ತು ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಸಾಧಾರಣ ಮನೋಬಲದ ಕಾರ್ಯಕರ್ತರು ನನಗೆ ಎಲ್ಲವನ್ನು ನೀಡಿದ್ದಾರೆ. ಆದರೆ ಈಗ ಪಕ್ಷದ ತತ್ವ ಸಿದ್ಧಾಂತ ಹಿಂದುತ್ವದ ಹಿರಿಮೆಯನ್ನು ಕಡೆಗಣಿಸಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗುತ್ತಿದೆ. ಇದು ತೊಲಗಬೇಕು. ಹಿಂದುತ್ವದ ತತ್ವ ಸಿದ್ಧಾಂತ ಗಟ್ಟಿಯಾಗಿ ಉಳಿಯಬೇಕು. ಹಾಗಾಗಿ ಬಂಡಾಯ ಎದ್ದಾದರೂ ಬಿಜೆಪಿ ಪಕ್ಷ ಶುದ್ಧವಾಗಬೇಕು ಎಂದು ನನ್ನ ಖಚಿತ ನಿಲುವು ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ಪರ್ಫೆಕ್ಟ್ ಅಲಾಯ್ ಕಾರ್ಖಾನೆಗೆ ಮತ ಯಾಚಿಸಲು ತೆರಳಿದಾಗ ಅಲ್ಲಿನ ಕಾರ್ಮಿಕರು ಕೆ.ಎಸ್.ಈಶ್ವರಪ್ಪ ರವರಿಗೆ ಬಿಳಿ ಕಮಲ ನೀಡಿ ಸ್ವಾಗತ ಕೋರಿದ್ದು ಭಾವನಾತ್ಮಕ ಕ್ಷಣಗಳನ್ನು ಸೃಷ್ಟಿಸಿತ್ತು.

ಪರ್ಫೆಕ್ಟ್ ಅಲಾಯ್ ಕಾಂಪೊನೆಂಟ್ ನಿರ್ದೇಶಕರಾದ ಬಿ.ಸಿ.ನಂಜುಂಡ ಶೆಟ್ಟಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ನಾವು ಹಿಂದುತ್ವದ ಕಾರಣಕ್ಕಾಗಿ ಇಲ್ಲಿಯವರೆಗೂ ಬಿಜೆಪಿಗೆ ಮತ ನೀಡುತ್ತಾ ಬಂದಿದ್ದೇವೆ. ಈ ಬಾರಿ ಕೂಡ ಹಿಂದುತ್ವದ ಉಳಿವಿಗಾಗಿ ಕೆ.ಎಸ್.ಈಶ್ವರಪ್ಪ ರವರಿಗೆ ಮತ ಹಾಕಬೇಕು ಎಂದರು.

ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ನಗರದ ಅನೇಕ ವಾಹನಗಳ ಶೋರೂಮ್‌ಗಳಿಗೆ ತೆರಳಿ ಮತ ಯಾಚನೆ ಮಾಡಿದರಲ್ಲದೇ ಎಲ್ಲಾ ಶೋರೂಮ್‌ಗಳ ಮಾಲೀಕರ ಬಳಿ ತೆರಳಿ ತಮ್ಮ ಪರ ಪ್ರಚಾರ ಮಾಡಲು ಸಿಬ್ಬಂದಿಗಳಿಗೆ ಭಾನುವಾರ ಹೊರತು ಪಡಿಸಿ ಒಂದು ದಿನದ ರಜೆ ನೀಡಬೇಕೆಂದು ಮನವಿ ಮಾಡಿದರು. ಈಶ್ವರಪ್ಪ ರವರ ಮನವಿ ಸ್ಪಂಧಿಸಿದ ಪರ್ಫೆಕ್ಟ್ ಅಲಾಯ್ ಕಾರ್ಖಾನೆ, ಆರ್ಯ ಟಿ.ವಿ.ಎಸ್. ಕಾರ್ತಿಕ್ ಹೀರೋ ಶೋರೂಮ್, ಪ್ರಭು ಮೋಟಾರ್ಸ್, ಮಂಹತಾ ಶೋರೂಮ್, ರಾಹುಲ್ ಹುಂಡೈ, ಆದಿಶಕ್ತಿ ಕಾರ್ಸ್, ಮಾರುತಿ ಶೋರೂಮ್ ಗಳ ಮಾಲೀಕರು ಈಶ್ವರಪ್ಪ ಪರ ಪ್ರಚಾರ ಮಾಡಲು ಕಾರ್ಮಿಕ ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ರಜೆ ಕೊಡುವುದಾಗಿ ವಾಗ್ದಾನ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಪರ್ಫೆಕ್ಟ್ ಅಲಾಯ್ ಕಾಂಪೋನೆಂಟ್ ನಿರ್ದೇಶಕರಾದ ವಸಂತ್ ದಿವೇಕರ್, ಬಿ.ಸಿ ನಂಜುಂಡ ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಮಹಾಲಿಂಗ ಶಾಸ್ತ್ರಿ ಉಪಸ್ಥಿತರಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post