ಹಿಂದೂ ಯುವಕರ ಹೆಸರಿನಲ್ಲಿ ಸಿಮ್‌ ಖರೀಧಿ

ಬಾಂಬ್‌ ಇಡುವವರನ್ನು ಮೋದಿ ವಿಶ್ವಾಸ ತೆಗೆದುಕೊಳ್ಳಲ್ಲ – ಆರಗ ಜ್ಞಾನೇಂದ್ರ
ಮಧು ಬಂಗಾರಪ್ಪಗೆ ಅಧಿಕಾರದ ಮದ – ಬಿ.ವೈ. ರಾಘವೇಂದ್ರ

ಕಾಂಗ್ರೆಸ್‌ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಭಾರತದ ಏಕತೆ, ಸಮಗ್ರತೆ, ಗೌರಕ್ಕೆ ತೊಂದರೆಯಾಗಲಿದೆ. ಬಾಂಬ್‌ ಇಡುವವರನ್ನು ಕಾಂಗ್ರೆಸ್‌ ಪೋಷಿಸುತ್ತದೆ. ಕರ್ನಾಟಕದಲ್ಲಿ ಬಾಂಬ್‌ ಇಡುತ್ತಿದ್ದವರು ತೀರ್ಥಹಳ್ಳಿಯಲ್ಲೂ ಇದ್ದಾರೆ. ಅಮಾಯಕ ಹಿಂದೂ ಯುವಕರ ಹೆಸರಿನಲ್ಲಿ ಸಿಮ್‌ ಖರೀಧಿಸಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಮೋದಿ ಸಬ್‌ ಕಾ ಸಾಥ್‌ ಸಬ್‌ ಕಾ ವಿಶ್ವಾಸ್‌ ಎಂದು ಹೇಳುತ್ತಾರೆ ಎಂದ ಮಾತ್ರಕ್ಕೆ ಬಾಂಬ್‌ ಇಡುವವರ ವಿಶ್ವಾಸ ಪಡೆಯುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಾಗಿ ಮದ್ಯ ಪ್ರೀಯರಿಂದ ತೆರಿಗೆ ರೂಪದಲ್ಲಿ 3 ಸಾವಿರ ಪಡೆಯುತ್ತಿದೆ. ಅದನ್ನೇ ಅವರ ಪತ್ನಿಯರ ಹೆಸರಿಗೆ 2 ಸಾವಿರ ಜಮೆ ಮಾಡುತ್ತಿದ್ದು ಒಂದು ಸಾವಿರ ಪಂಗು ನಾಮ ಹಾಕುತ್ತಿದೆ. ಇದರಲ್ಲಿ ವಿಶೇಷ ಏನಿದೆ. ಮದ್ಯಪ್ರಿಯರಿಗೆ ಒಂದು ಸಾವಿರ ರೂಪಾಯಿ ನಷ್ಟ ಆಗುತ್ತಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕುಟುಕಿದರು.

ಸಂಸ್ಕೃತಿ ಮಂದಿರ ಆವರಣದಲ್ಲಿ ತಾಲ್ಲೂಕು ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕರ್ತರನ್ನು ಚೇಲಗಳು ಎಂದು ಸಂಭೋಧಿಸುತ್ತಾರೆ. ಅವರಿಗೆ ಶಬ್ದಗಳ ಮೇಲೆ ನಿಯಂತ್ರಣವಿಲ್ಲ. ಅವರಿಗೆ ಅಧಿಕಾರದ ಮದ, ದುರಂಹಾರ ಹೆಚ್ಚಿದೆ ಎಂದು ಟೀಕಿಸಿದರು.

ಭಾರತ ದೇಶ ನರೇಂದ್ರ ಮೋದಿ ನೇತೃತ್ವದಲ್ಲಿ ವಿಶ್ವಗುರುವಾಗಿ ಪ್ರಜ್ವಲಿಸುತ್ತಿದೆ. ಪುನಃ ಬಿಜೆಪಿಗೆ ಅಧಿಕಾರ ನೀಡಲು ಕಾರ್ಯಕರ್ತರು ಸಂಪೂರ್ಣ ಕೈಜೋಡಿಸಬೇಕು. ದೇಶದಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 18 ಕೋಟಿ ಇದೆ. ಕಾರ್ಯಕರ್ತರು ಅಭಿವೃದ್ಧಿಯ ವಿಚಾರಗಳನ್ನು ತಿಳಿಸಿ ಮತದಾರರನ್ನು ಸೆಳೆಯುವ ಕೆಲಸ ಮಾಡಬೇಕು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಪ್ರಿಲ್‌ 14 ರಂದು ಸಂಜೆ 4 ಗಂಟೆಗೆ ಜಿಲ್ಲೆಯ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದರು.

ವೇದಿಕೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್.ಎಲ್.‌ ಭೋಜೇಗೌಡ, ಮಾಜಿ ಶಾಸಕ ರಘುಪತಿ ಭಟ್‌, ಜೆಡಿಎಸ್‌ ಜಿಲ್ಲೆಯ ಅಧ್ಯಕ್ಷ ಕಡಿದಾಳು ಗೋಪಾಲ್‌, ತಾಲ್ಲೂಕು ಅಧ್ಯಕ್ಷ ಕುಣಜೆ ಕಿರಣ್‌, ಬಿಜೆಪಿ ಜಿಲ್ಲೆಯ ಅಧ್ಯಕ್ಷ ಟಿ.ಡಿ. ಮೇಘರಾಜ್‌, ತಾಲ್ಲೂಕು ಅಧ್ಯಕ್ಷ ನವೀನ್‌ ಹೆದ್ದೂರು, ಮುಖಂಡರಾದ ಪುಣ್ಯಪಾಲ್‌, ನಾಗರಾಜ ಶೆಟ್ಟಿ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post