ತೀರ್ಥಹಳ್ಳಿಗೆ ಭರ್ಜರಿ ಎಂಟ್ರಿ ಕೊಟ್ಟ ಈಶ್ವರಪ್ಪ

ತೀರ್ಥಹಳ್ಳಿಯಲ್ಲಿ ಹಿಗ್ಗಾಮುಗ್ಗ ಮರಳು ಮಾಫಿಯಾ
“ಆರಗ ಜ್ಞಾನೇಂದ್ರ ನನ್ನ ಮನೆಯಲ್ಲೆ ಡಿಗ್ರಿ ಮುಗಿಸಿದ್ದು”
“ಅವನ ಕಥೆ ಚುನಾವಣೆ ನಂತರ ಬಿಚ್ಚಿಡ್ತೀನಿ” – ಕೆ.ಎಸ್.‌ ಈಶ್ವರಪ್ಪ

ಮಾಜಿ ಉಪಮುಖ್ಯಮಂತ್ರಿ, ಶಿವಮೊಗ್ಗ ಲೋಕಸಭೆ ಚುನಾವಣಾ ಸ್ಪರ್ಧಾಕಾಂಕ್ಷಿ ಕೆ.ಎಸ್.‌ ಈಶ್ವರಪ್ಪ ಶುಕ್ರವಾರ ತೀರ್ಥಹಳ್ಳಿಗೆ ಭರ್ಜರಿ ಎಂಟ್ರಿ ಕೊಟ್ಟಿರುವ ಅವರು ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ಅಂಬುತೀರ್ಥದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕರ್ತರಿಗೆ ಹುರುಪು ನೀಡಿದರು.

ತೀರ್ಥಹಳ್ಳಿಯಲ್ಲಿ ಹಿಂದೂ ಯುವಕರಿಗೆ ಭದ್ರತೆ ಇಲ್ಲ. ಗೋ ಪ್ರೇಮಿಗಳಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅವರೆಲ್ಲ ನನನ್ನು ಸಂಪರ್ಕಿಸಿ ಬೆಂಬಲ ಸೂಚಿಸುತ್ತಿದ್ದಾರೆ. ಆರಗ ಜ್ಞಾನೇಂದ್ರ ನನ್ನ ಮನೆಯಲ್ಲೇ ಬೆಳೆದು ಡಿಗ್ರಿ ಮುಗಿಸಿದ ಹುಡುಗ. ಆತನ ಕ್ಷೇತ್ರದಲ್ಲೇ ಹಿಗ್ಗಾಮುಗ್ಗ ಮರಳು ಮಾಫಿಯಾ ನಡೆಯುತ್ತಿದ್ದರು ತಡೆಯುತ್ತಿಲ್ಲ. ಬಿ.ವೈ. ರಾಘವೇಂದ್ರ ಹೆಸರು ಕೂಡ ಮರಳು ಮಾಫಿಯಾದಲ್ಲಿ ಪ್ರಸ್ತಾಪ ಆಗುತ್ತಿದೆ. ಚುನಾವಣೆ ಮುಗಿದ ನಂತರ ನನ್ನ ಸ್ಪರ್ಧೆಯನ್ನು ನಾಮಕಾವಸ್ತೆ ಎಂದ ಆರಗ ಜ್ಞಾನೇಂದ್ರರ ಪೂರ್ಣ ಮಾಹಿತಿ ಬಿಚ್ಚಿಡುತ್ತೇನೆ ಎಂದು ಗುಟುರು ಹಾಕಿದರು.

ರಾಜ್ಯದ ಜನರಿಗೆ ಬಿ.ಎಸ್.‌ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಆಕ್ರೋಶ ಇದೆ. ಬಹಳ ಜನ ಬಿಜೆಪಿ ಪ್ರಮುಖರು ನನ್ನ ಬೆನ್ನ ಹಿಂದೆ ಇದ್ದು ಸೈದ್ಧಾಂತಿಕ ಸ್ಪರ್ಧೆಗೆ ಬೆಂಬಲ ನೀಡುತ್ತಿದ್ದಾರೆ. ಯಡಿಯೂರಪ್ಪ ಯಾವ ಕಾರಣಕ್ಕೂ ಲಿಂಗಾಯತ ಸಮುದಾಯದ ನಾಯಕ ಅಲ್ಲ. ರಾಜ್ಯದ ಜನರಿಗೆ ಮಂಕುಬೂದಿ ಎರಚಿ ಭ್ರಮೆಗೆ ತಳ್ಳಿದ್ದಾರೆ. ಶಿಕಾರಿಪುರದಲ್ಲೇ ಸಾದರ ಲಿಂಗಾಯತ ಸಮುದಾಯದ ನಾಗರಾಜ ಗೌಡ ಸೋಲಿಸಲು ವಿಜಯೇಂದ್ರ ತಿಣುಕಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಸುರಿದರೂ 60 ಸಾವಿರ ಇದ್ದ ಗೆಲುವಿನ ಅಂತರ 10 ಸಾವಿರಕ್ಕೆ ಇಳಿದಿದ್ದು ಹೇಗೆ ಎಂದು ಪ್ರಶ್ನಿಸಿದರು.

ಏನೇನೋ ಮಾಡಲು ಹೋಗಿ ಸಿಕ್ಕಿ ಬಿದ್ದವರು ಯಡಿಯೂರಪ್ಪ. ಇಡಿ, ಐಟಿ ಬಲ ಪ್ರಯೋಗ ನಡೆಸಲು ನಂದೇನು ಇಲ್ಲ. ನನ್ನ ಮುಂದೆ ಷಡ್ಯಂತ್ರ, ಕುತಂತ್ರ, ಬಲಪ್ರಯೋಗ ನಡೆಸಲು ಯಾವನಿಗೂ ತಾಕತ್ತು ಇಲ್ಲ. ಹೊಂದಾಣಿಕೆ ರಾಜಕಾರಣ ಮಾಡಲು ಲೋಕಸಭಾ ಚುನಾವಣೆಗೆ ದುರ್ಬಲ ಕಾಂಗ್ರೆಸ್‌ ಅಭ್ಯರ್ಥಿಯನ್ನು ಹಾಕಿಸಿಕೊಂಡು ಬಂದಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಾಟಗೋಡು ಸುರೇಶ್‌, ತ.ಮ.ನರಸಿಂಹ, ಶಿವರಾಜಪುರ ರಾಜೇಶ್‌, ಕೆಳಕೆರೆ ಅರುಣ್‌, ಬಿಲಗ ದಿನೇಶ್‌, ಗೊರಕೋಡು ಮದನ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post