ತನಿಖಾ ಸಂಸ್ಥೆ ಬಳಸಿ ಬಿಜೆಪಿ ಸಂಚು

ಕೇಂದ್ರ ಸರ್ಕಾರದ್ದು ಕೊಲೆಗಡುಕ ಆಡಳಿತ
ಬಿಜೆಪಿ ವಾಷಿಂಗ್‌ ಮಿಷನ್‌ನಲ್ಲಿ ಭ್ರಷ್ಟರು ಸ್ವಚ್ಚ
ಬಿಜೆಪಿ ಭ್ರಷ್ಟರು ಶ್ರೀರಾಮಚಂದ್ರ - ಉಳಿದವರು ರಾವಣ - ಕಿಮ್ಮನೆ

ಇಡಿ, ಐಟಿ ತನಿಖಾ ಸಂಸ್ಥೆಗಳನ್ನು ಮುಂದೆ ಬಿಟ್ಟು ಕಾಂಗ್ರೆಸ್‌ನ ಕತ್ತು ಹಿಸುಕುವ ಪ್ರಯತ್ನವನ್ನು ಖಂಡಿಸಲು ಮಂಳವಾರ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಂಗಳವಾರ ಪಟ್ಟಣದ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

ಬಿಜೆಪಿ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಮುಗಿಸುವ ಸಂಚನ್ನು ರೂಪಿಸುತ್ತಿದೆ. ಅದರ ಭಾಗವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸೀಜ್‌ ಮಾಡುವ ನಾಟಕ ಮಾಡಿದೆ. ಈಗಾಗಲೇ ತಮ್ಮ ಪಕ್ಷಕ್ಕೆ ಬೆಂಬಲವಾಗಿ ನಿಲ್ಲದ ನಾಯಕರುಗಳನ್ನು ತನಿಖಾ ಸಂಸ್ಥೆ ಚೂಬಿಟ್ಟು ಹೆದರಿಸಿ, ಬೆದರಿಸುವ ತಂತ್ರಗಾರಿಕೆ ಬಳಸುತ್ತಿದೆ ಎಂದರು.

ಸಾವಿರಾರು ಕೋಟಿ ಹಗರಣದ ಆರೋಪಿಗಳು, ದೋಷಿಗಳಾದ ಭ್ರಷ್ಟರೆಲ್ಲರೂ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡು ವಾಷಿಂಗ್‌ ಮೆಷಿನ್‌ ಒಳಗೆ ಹೋಗಿಬಂದರೆ ಪರಿಶುದ್ಧರಾಗುತ್ತಿದ್ದಾರೆ. ಬಿಜೆಪಿ ಭ್ರಷ್ಟರು ಶ್ರೀರಾಮಚಂದ್ರ ಆಗುತ್ತಾರೆ. ಹೋಗದೆ ಹೊರಗಿದ್ದವರು ರಾವಣರಾಗುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ.

ಬಿಜೆಪಿ ಕೊಲೆಗಡುಕ ಆಡಳಿತವನ್ನು ಜನರು ಕೊನೆಗಾಣಿಸಬೇಕು. ಕೆಟ್ಟ ಮನೋಭಾವ, ಸುಪಾರಿ ಮೋದಿ ಮನೋಭಾವವನ್ನು ಖಂಡಿಸುವ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸತ್ಯಾಗ್ರಹವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದರು.

ಜಾತಿ ಧರ್ಮದ ಆಧಾರದಲ್ಲಿ ಸರ್ಕಾರಿ ಜಾಗವನ್ನು ಸಂಘಪರಿವಾರ ಮಂಜೂರು ಮಾಡಿಸಿಕೊಳ್ಳುತ್ತಿದೆ. ಪ್ರಶ್ನಿಸುವವರಿಗೆ ಹಿಂದೂ ವಿರೋಧಿಗಳ ಪಟ್ಟ ಕಟ್ಟಲಾಗುತ್ತಿದೆ. ತೀರ್ಥಹಳ್ಳಿ ಸುತ್ತಮುತ್ತ ಸುಮಾರು 200 ಕೋಟಿಗೂ ಹೆಚ್ಚಿನ ಆಸ್ತಿಯನ್ನು ಆರ್‌ ಎಸ್‌ ಎಸ್‌ ಹೊಂದಿದೆ ಎಂದು ಕಿಮ್ಮನೆ ಗಂಭೀರವಾಗಿ ಆರೋಪಿಸಿದರು. ಬಿಜೆಪಿಗೆ ಒಂದು ಸಾರಿ ಚೂರಿಹಾಕಿದರೆ ಸಮಾಧಾನ ಆಗಲ್ಲ. ಕೊಲೆಗಡುಕರೆಲ್ಲ ಸಾಯಿಸುವಾಗ ಚುಚ್ಚಿ, ಚುಚ್ಚಿ ಕೊಲ್ಲುವಂತೆ ಜೀವ ಹೋಗುವರೆಗೂ ಚೂರಿಹಾಕಿ ಕೊಲ್ಲುತ್ತಾರೆ. ಒಂದು ರೀತಿಯಲ್ಲಿ ಹಿಟ್ಲರ್‌, ಮಸಲೋನಿ ತರದ ಮನೋಭಾವ ಹೊಂದಿದೆ. ದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಎಲ್ಲಿಂದಲೂ ಹಣ ಸಿಗಬಾರದು. ಈ ಚುನಾವಣೆಯಲ್ಲಿ ಎಲ್ಲಾ ನಾಯಕರನ್ನು ಕಟ್ಟಿಹಾಕಬೇಕು ಎಂಬ ಪ್ರಯತ್ನಕ್ಕೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಆಭ್ಯರ್ಥಿ ಗೀತಾ ಶಿವರಾಜಕುಮಾರ್‌ ಗೆಲವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಆಭ್ಯರ್ಥಿ ಗೀತಾ ಶಿವರಾಜಕುಮಾರ್‌ ಅವರು ಏಪ್ರಿಲ್‌ 5 ರಂದು ತಾಲ್ಲೂಕಿನ ಗಾಜನೂರಿನಿಂದ ಏಳು ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಗಾಜನೂರು, ಸಿಂಗನಬಿದರೆ, ಮಂಡಗದ್ದೆ, ತೂದೂರು, ಕನ್ನಂಗಿ, ಹಣಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಎಂಎಡಿಬಿ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ, ಕೆಪಿಸಿಸಿ ಸದಸ್ಯ ಜಿ.ಎಸ್.‌ ನಾರಾಯಣರಾವ್‌, ಉಸ್ತುವಾರಿ ರಮೇಶ್‌ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಪ್ರಮುಖರಾದ ಹಾರೋಗೊಳಿಗೆ ಪದ್ಮನಾಭ, ಆದರ್ಶ ಹುಂಚದಕಟ್ಟೆ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post