ಯಡಿಯೂರಪ್ಪ ಕುಟುಂಬ ರಾಜಕಾರಣ ಅಂತ್ಯಗೊಳಿಸುವೆ

ಮೋದಿ, ಅಮಿತ್‌ ಶಾರನ್ನು ಮನಬಂದಂತೆ ಟೀಕಿಸಿದ್ದ ಯಡಿಯೂರಪ್ಪ
ಬಂಗಾರಪ್ಪ ಮಕ್ಕಳ ಕಚ್ಚಾಟದಿಂದ ಸೊರಬ ಸೊರಗಿದೆ

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕುಟುಂಬ ರಾಜಕಾರಣ ದೇಶ ಹಾಗೂ ಯಾವುದೇ ಪಕ್ಷಕ್ಕೆ ಮಾರಕ. ಜನತೆಯ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ಸದಾಕಾಲ ವಿರೋಧಿಸಿಕೊಂಡು ಬಂದಿದ್ದಾರೆ. ಇದು ಬಿಜೆಪಿ ಪಕ್ಷದ ಮೂಲ ಸಿದ್ಧಾಂತಗಳಲ್ಲಿ ಒಂದು. ತನ್ನ ಸ್ವಾರ್ಥಕ್ಕೆ ಕುಟುಂಬದ ಅಭಿವೃದ್ಧಿಗೆ ತೊಂದರೆಯಾಗ ಕರ್ನಾಟಕದಲ್ಲಿ ಬಿಜೆಪಿ ತೊರೆದು ಕೆಜೆಪಿ ಕಟ್ಟಿ, ಮೋದಿ, ಅಮಿತ್ ಶಾ ಅವರನ್ನು ಮನಸ್ಸಿಗೆ ಬಂದಂತೆ ಟೀಕಿಸಿಅ ಅವಹೇಳನ ಮಾಡಿದ್ದ ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿ ತನ್ನ ಕುಟುಂಬದ ಹಿಡಿತದಲ್ಲಿ ಪಕ್ಷವನ್ನು ಇಟ್ಟುಕೊಂಡು ಬಿಜೆಪಿ ಪಕ್ಷ ಮತ್ತು ಹಿಂದುತ್ವ ವಾದಿಗಳ ನಿರ್ನಾಮ ಮಾಡುತ್ತಿದ್ದಾರೆ. ಮಾಡಿ ತನ್ನಗೆ ಬೇಕಾದವರಿಗೆ ಬಿಜೆಪಿ ಟಿಕೆಟ್ಕೂಡಿಸಿದ್ದಾರೆ. ರಾಘವೇಂದ್ರ ಅವರನ್ನು ಸೋಲಿಸಿ, ಕುಟುಂಬ ರಾಜಕರಣಕ್ಕೆ ಅಂತ್ಯಕಾಣಿಸುವುದೇ ನನ್ನ ಗುರಿ ಎಂದು ಈಶ್ವರಪ್ಪ ರಾಷ್ಟ್ರಭಕ್ತ ಬಳಗದ ಲೋಕಸಭಾ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಗುಡುಗಿದ್ದಾರೆ.

ಸೊರಬದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಿದ್ದರಾಮಯ್ಯ ಗ್ಯಾರಂಟಿ ಹೆಸರಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ಬಂದರೆ ಐದು ಗ್ಯಾರಂಟಿ ಜನರಿಗೆ ನೀಡುತ್ತೇವೆ ಎಂದು ನೀಡಿರುವ ಕಾರ್ಡ್ ಎಲ್ಲಾ ಹಸಿಸುಳ್ಳು ಎಂದರು.

ನಾನು  ರಾಷ್ಟ್ರಭಕ್ತ ಮುಸ್ಲಿಂರನ್ನು ಗೌರವಿಸುತ್ತೇನೆ. ಕ್ರೈಸ್ತ, ಮುಸ್ಲಿಂ, ಹಿಂದು ಎಲ್ಲರೂ ಅಣ್ಣತಮ್ಮರಿಂದಂತೆ. ಆದರೆ ರಾಷ್ಟ್ರ ದ್ರೋಹಿಗಳು, ಅತ್ಯಚಾರಿಗಳು, ಭಯೋತ್ಪಾದಕ ಮುಸ್ಲಿಂರನ್ನು ದ್ವೇಷಿಸುತ್ತೇನೆ. ಲವ್ಜಿಹಾದ್ಹೆಸರಲ್ಲಿ ಹಿಂದು ಮಹಿಳೆಯರನ್ನು ಕೊಲೆ ಮಾಡುವ ಮುಸ್ಲಿಮರಿಗೆ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ ಎಂದು ಲೋಕಸಭೆ ಚುನಾವಣೆ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಕೆ.ಎಸ್ಈಶ್ವರಪ್ಪ ಗುಡುಗಿದರು.

ಬಡವರ ಹೆಸರಲ್ಲಿ ರಾಜಕರಣ ಮಾಡುವ ಕಾಂಗ್ರೆಸ್‍ , ಬಿಜೆಪಿ ಬಡವರಿಗೆ ಏನು ಅನುಕೂಲ ಮಾಡಿಲ್ಲ. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದ ಸಾಕಾಷ್ಟು ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಮಠ, ಮಂದಿರಗಳಿಗೆ ಅನುದಾನ ಕೂಡಿಸಿದ್ದೇನೆ.ಆದರೆ ಸೊರಬ ತಾಲ್ಲೂಕಿನಲ್ಲಿ 35 ವರ್ಷದಿಂದ ಬಗರ್ ಹುಕಂ, ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಹೇಳುತ್ತಲ್ಲೇ ಜನರಿಗೆ ಮೋಸ ಮಾಡಿದ್ದಾರೆ.

ಬಂಗಾರಪ್ಪ ಅವರನ್ನು ಕಂಡರೇ ನನಗೆ ತುಂಬ ಗೌರವ, ಕಾರಣ ಅವರು ಬಡವರ ಪರ ಚಿಂತನೆ ಮಾಡುತ್ತಿದ್ದರು ಮತ್ತು ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದ ಅವರು ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಅವರಿಗೆ ಬಂಗಾರಪ್ಪರ ಚಿಂತನೆಗಳೇ ಅರ್ಥವಾಗಿಲ್ಲ. ಅವರ ಸ್ವಾರ್ಥದ ಕಚ್ಚಾಟದಿಂದ ಸೊರಬ ಕ್ಷೇತ್ರ ಅಭಿವೃಧಿಯಾಗಿಲ್ಲ. ಸಂಪೂರ್ಣ ನೀರಾವರಿ ಕಲ್ಪಿಸಲು ಸಾಧ್ಯವಾಗಿಲ್ಲ . ಗೀತಾ ಶಿವರಾಜಕುಮಾರ್ ವರ್ಷಕ್ಕೊಮ್ಮೆಯೂ ಕ್ಷೇತ್ರದಕ್ಕೆ ಬರುವುದು ಅನುಮಾನ ಅವರಿಂದ ಏನು ಪ್ರಯೋಜನ ಎಂದರು.

ಬಹಿರಂಗ ಸಮಾವೇಶದಲ್ಲಿ ಆನವಟ್ಟಿ ಘಟಕದ ರಾಷ್ಟ್ರ ಭಕ್ತರ ಬಳಗದ ಅಧ್ಯಕ್ಷ ರಾಮಾನಾಯ್ಕ ಕೋಟಿಪುರ, ಸದಸ್ಯರಾದ ಕೇಶವ ನಾಯ್ಕ, ಸಂಜೀವ್ ನಾಯ್ಕ, ಪ್ರಶಾಂತ ನೆಲ್ಲಿಕೊಪ್ಪ ಮುಖಂಡರಾದ ವಿಠ್ಠಲ್ಬನ್ನಿ, ಟಿ.ವಿ ಬೆಳಗಾವಿ, ಎನ್ವೀರಪ್ಪ, ಮೂಗಡಪ್ಪ, ಸುಜಾತ ಕಳ್ಳಿಕೇರಿ, ದುರ್ಗಪ್ಪ ಅಂಗಡಿ, ದಾನಪ್ಪ ಗಂಟೇರ್, ಪ್ರಭಾಕರ್ ರಾಯ್ಕರ್, ಚಿದಾನಂದಗೌಡ, ಮಂಜುನಾಥ ಸಾಗರ, ಹೇಮಾರವಿ, ವಕೀಲ ಶಿವಪ್ಪ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post