ತೀರ್ಥಹಳ್ಳಿಯ ಶ್ರೀ ಕ್ಷೇತ್ರ ಜಯಪುರದಲ್ಲಿ 15ನೇ ವರ್ಷದ ವಾರ್ಷಿಕೋತ್ಸವ..!

ಸುದರ್ಶನ್ ಉಡುಪರಿಂದ ನಾಗ ಸಂದರ್ಶನ
ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾರ್ವಜನಿಕ ಅನ್ನ ಸಂತರ್ಪಣೆ 
ಅಣ್ಣಪ್ಪ ಪಂಜುರ್ಲಿ, ನಾಗ-ನಾಗಯಕ್ಷಿ ಪರಿಹಾರ ದೇವತೆಗಳ ದೇವಸ್ಥಾನ ಶ್ರೀ ಕ್ಷೇತ್ರ ಜಯಪುರ, ಗುಡ್ಡೆಕೊಪ್ಪ ಇಲ್ಲಿ 15 ನೇ ವರ್ಷದ ವಾರ್ಷಿಕೋತ್ಸವವನ್ನು ದಿನಾಂಕ 29-04-2024 ಸೋಮವಾರದಂದು ನಡೆಸಲಾಗುವುದು. ಬೆಳಗ್ಗೆ ಚಂಡಿಕಾಹೋಮ ಮತ್ತು ಸಂಜೆ ಪಂಚದುರ್ಗಾ ದೀಪ ನಮಸ್ಕಾರ ಪೂಜೆ ಹಾಗೂ ದಿನಾಂಕ 30-04-2024 ನೇ ಮಂಗಳವಾರದಂದು
ಶ್ರೀ ಕ್ಷೇತ್ರ ಜಯಪುರದಲ್ಲಿ ಇರತಕ್ಕಂಹ ಸಪರಿವಾರ ನಾಗದೇವರ 15ನೇ ವರ್ಷದ ವರ್ಧಂತ್ಯೋವವನ್ನು ಮಾಡಲಾಗುವುದು. ಆಪ್ರಯುಕ್ತ ಬೆಳಿಗ್ಗೆ ಗಂಟೆ 9-00 ರಿಂದ ಗಣಪತಿ ಪೂಜೆ ಮಾಸ್ತಿಗೆ ದುರ್ಗಾಹೋಮ, ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ನಾಗ-ನಾಗಯಕ್ಷಿಗೆ ಅಷ್ಟೋತರ ಪರಿಕಲಶ ಸಹಿತ ಪ್ರಧಾನ ಬ್ರಹ್ಮಕುಂಭ ಸ್ಥಾಪನಾ ಅದಿವಾಸಹೋಮ, ಬ್ರಹ್ಮ ಕಲಶಾಭಿಷೇಕ ಮಹಾಪೂಜೆ, ನಾಗ ಸಂದರ್ಶನ ಹಾಗೂ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗವಿರುತ್ತದೆ. ಸುದರ್ಶನ್ ಉಡುಪ ಇವರಿಂದ ನಾಗ ಸಂದರ್ಶನ ಇರುತ್ತದೆ.
ಮಧ್ಯಾಹ್ನ 1-00 ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ಇರುತ್ತದೆ. 
ಇದೇ ದಿನ ಸಂಜೆ ಸರ್ವಪ್ರಾಯಶ್ಚಿತ ಆಶ್ಲೇಷಬಲಿ, ಉದ್ಯಾಪನಹೋಮ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ಈ ಕಾರ್ಯಕ್ರಮದ ಆಚಾರ್ಯತ್ವವನ್ನು ಶ್ರೀ ಕ್ಷೇತ್ರ ಮಂದಾರ್ತಿಯ ಆರ್ಚಕರಾದ ವೇ। ಬ್ರ॥ ವೆಂಕಟೇಶ್ ಮಯ್ಯ ಇವರು ನಡೆಸಿಕೊಡುವವರು.
ಇದೇ ದಿನ ರಾತ್ರಿ 8-30ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ಕ್ಷೇತ್ರ ಗೋಳಿಗರಡಿ ಸಾಸ್ತಾನ ಯಕ್ಷಗಾನ ಮೇಳದವರಿಂದ ದಶಾವತಾರ ಯಕ್ಷಗಾನ ಬಯಲಾಟ ಆಡಿ ತೋರಿಸಲಿರುವವರು.
ಈ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತನು-ಮನ-ಧನ ಸಹಕಾರದೊಂದಿಗೆ ಸಹಕರಿಸಿ ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರ ಜಯಪುರ ಧರ್ಮದರ್ಶಿಗಳಾದ ರಾಜೇಂದ ಡಿ.ಎಸ್. ಹಾಗೂ ದೇವಸ್ಥಾನದ ಸಮಿತಿ ವಿನಂತಿಸಿಕೊಂಡಿದೆ.

ವಿಶೇಷ ಸೂಚನೆ: ಸಾನಿಧ್ಯದಲ್ಲಿ ಪ್ರತಿ ಅಮವಾಸೆ ಹುಣ್ಣಿಮೆಯೆಂದು ದೇವರ ದರ್ಶನ ವಿದ್ದು ಹೇಳಿಕೆ ಕೇಳಿಕೆ ಇರುತ್ತದೆ. ಮತ್ತು ಎಲ್ಲಾ ದಿನಗಳಂದು ಪ್ರಶ್ನ, ಚಿಂತನೆ ಇರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ ಶ್ರೀ ರಾಜೇಂದ್ರ ಜೈಪುರ : 6360337682
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post