ತೀರ್ಥಹಳ್ಳಿ ಮಿತ್ರ ಪತ್ರಿಕೆ ಸಂಪಾದಕ ಮಂಜುನಾಥ ಪಿ ನಿಧನ

ತೀರ್ಥಹಳ್ಳಿ ಮಿತ್ರ ವಾರಪತ್ರಿಕೆಯ ಸಂಪಾದಕ ಮಂಜುನಾಥ ಪಿ. (38) ಮಂಗಳೂರಿನ ಎಂಐಎ ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಕೆಲವು ತಿಂಗಳಿನಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಎಂಐಎ ಆಸ್ಪತ್ರೆಯಲ್ಲಿ 16 ರೇಡಿಯೇಶನ್ ಥೆರಪಿಗೆ ಒಳಗಾಗಿದ್ದರು. ರೇಡಿಯೇಷನ್ ಪಡೆಯುತ್ತಿದ್ದ ಅವರಿಗೆ ಪ್ಲೇಟ್ ಲೈಟ್ಸ್ ಕೊರತೆ ಇಂದ ನ್ಯೂಮೋನಿಯಾಕ್ಕೆ ಒಳಗಾಗಿದ್ದರು. ಶ್ವಾಸಕೋಶದಲ್ಲಿ ರಕ್ತಸ್ರಾವವಾಗಿದ್ದರಿಂದ ಮಧ್ಯಾಹ್ನದಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.

ಮಂಜುನಾಥ್ ಅವರು ಪತ್ನಿ, 8 ವರ್ಷದ ಪುತ್ರಿ, ಅಕ್ಕ, ತಂಗಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ತಾಯಿ ಮೃತಪಟ್ಟಿದ್ದರು. ತಾಯಿ ಅಪರಕ್ರಿಯೆಗಾಗಿ ಓಡಾಡಿದ್ದ ಅವರಿಗೆ ನ್ಯೂಮೋನಿಯಾ ಇರುವುದು ಪತ್ತೆಯಾಗಿತ್ತು.

ಜೀವನಕ್ಕಾಗಿ ನಾನಾ ವೃತ್ತಿ ನಿರ್ವಹಿಸಿದ್ದ ಮಿತ್ರ ಮಂಜು ಪತ್ರಕರ್ತರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದರು. ತರಕಾರಿ ಅಂಗಡಿ, ಸೌಂಡ್ಸ ಅಂಡ್ ಲೈಟಿಂಗ್, ಡೆಕೊರೇಷ‌ನ್, ವಿದ್ಯುತ್ ಗುತ್ತಿಗೆದಾರ ಸೇರಿದಂತೆ ಪತ್ರಿಕೆ ವಿತರಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದರು.

ಮಂಜುನಾಥ್ ಅವರಿಗೆ 6 ವರ್ಷ ವಯಸ್ಸಿರುವಾಗ ತಂದೆ ತೀರಿಕೊಂಡಿದ್ದರು. ಅಂದಿನಿಂದ ತಾಯಿ ನಾಲ್ಕು ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಸಾಕಿ ಬೆಳೆಸಿದ್ದರು. ಶಾಲಾ ದಿನಗಳನ್ನು ಮುಗಿಸುತ್ತಿದ್ದಾಗಲೇ ಅರೆಕಾಲಿಕ ವೃತ್ತಿಗಳನ್ನು ಮಾಡುವ ಮೂಲಕ ತಾಯಿಗೆ ನೆರವಾಗಿದ್ದರು. ಅಲ್ಲದೇ ಅಕ್ಕ, ತಂಗಿಯಂದಿರಿಗೂ ಮದುವೆ ಮಾಡಿಸುವ ಜವಾಬ್ದಾರಿ ನಿಭಾಯಿಸಿದ್ದರು. ಬಡತನವಿದ್ದರು ಸಮಾಜದೊಳಗೆ ತೋರಿಸಿಕೊಳ್ಳದೆ ಎಲ್ಲವನ್ನು ಪರಿಶ್ರಮದಿಂದ ನಿಭಾಯಿಸುವ ಮೂಲಕ ಕುಟುಂಬಕ್ಕೆ ನೆರವಾಗಿದ್ದರು.

ಮಂಜುನಾಥ್ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸಲ್ಲಿಸಿದೆ‌.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post