ರಾಜಿಯಿಲ್ಲದ ಅಭಿವೃದ್ಧಿ ದೀರ್ಘಕಾಲ ಉಳಿಯಲಿದೆ

ಪ್ರಾಮಾಣಿಕತೆಯನ್ನು ಜನರು ಸ್ಮರಿಸುತ್ತಾರೆ - ಆರಗ
ನಿವೃತ್ತ ಚೀಫ್ ಇಂಜಿನಿಯರ್ ಬಿ.ಟಿ. ಕಾಂತರಾಜ್ ಅವರಿಗೆ ನಾಗರೀಕ ಸನ್ಮಾನ


ಪ್ರಾಮಾಣಿಕ ಕೆಲಸವನ್ನು ಸಮಾಜ ಸ್ಮರಿಸುತ್ತದೆ. ಮಾಡುವ ಅಭಿವೃದ್ಧಿ ಕಾರ್ಯಗಳನ್ನು ರಾಜಿಯಿಲ್ಲದೆ ಅಚ್ಚುಕಟ್ಟಾಗಿ ಮಾಡಿದರೆ ದೀರ್ಘಕಾಲ ಉಳಿಯಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಣಗೆರೆ ಮತ್ತು ಕನ್ನಂಗಿ ಗ್ರಾಮ ಪಂಚಾಯಿತಿಯ ನಾಗರೀಕ ವೇದಿಕೆ ವತಿಯಿಂದ ಲೋಕೋಪಯೋಗಿ ಮತ್ತು ಬಂದರು ಇಲಾಖೆ ನಿವೃತ್ತ ಮುಖ್ಯ ಅಭಿಯಂತರ ಬಿ.ಟಿ. ಕಾಂತರಾಜ್ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಸಮಾಜದೊಳಗೆ ಎಲ್ಲರೂ ಮಾದರಿ ವ್ಯಕ್ತಿಗಳಾಗಿ ಬದುಕಬಹುದು. ಅಂತಹ ಅವಕಾಶ ಪ್ರಾಮಾಣಿಕ ಕೆಲಸದಿಂದ ಸಿಗುತ್ತದೆ. ಅಧಿಕಾರದ ಅವಧಿಯಲ್ಲಿ ಜನರ ಕೆಲಸ ಮಾಡಿರುವ ವ್ಯಕ್ತಿಗಳು ಧೀರ್ಘಕಾಲ ಉಳಿಯುತ್ತಾರೆ. ಸರ್ಕಾರ, ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಬೇಕಾದಷ್ಟು ಅವಕಾಶಗಳಿವೆ. ಅಂತಹ ಅವಕಾಶ ಸಿಕ್ಕಾಗ ಯಾರೂ ದುರುಪಯೋಗ ಮಾಡಿಕೊಳ್ಳಬಾರದು ಎಂದರು.

“ಪಿಹೆಚ್ಡಿ ಪದವಿ ಪಡೆದ ವ್ಯಕ್ತಿಗಳಿಗಿಂತ ಅನಕ್ಷರಸ್ಥರ ಜ್ಞಾನ ಶ್ರೇಷ್ಟವಾಗಿದೆ. ಯುವ ಜನಾಂಗ ಸಹಬಾಳ್ವೆಯ ದೇಶ ಸೃಷ್ಟಿಗೆ ಕೈಜೋಡಿಸಬೇಕು. ಸಮಾಜದಲ್ಲಿ ಆಗುತ್ತಿರುವ ಎಲ್ಲಾ ಕೆಟ್ಟ ಕೆಲಸದ ಹಿಂದೆ ವಿದ್ಯಾವಂತರೇ ಹೆಚ್ಚಿದ್ದಾರೆ. ಸರ್ಕಾರಿ ನೌಕರಿ ಸಿಕ್ಕ ಮೇಲೆ ಡಿ ದರ್ಜೆಯ ನೌಕರರನ್ನು ಮಾತನಾಡಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಾಗರೀಕ ಜಗತ್ತಿನ ಕಲ್ಪನೆಗಳಿಲ್ಲ” ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

“ಕಾಂತರಾಜ್ ಶೆಟ್ಟಿಹಳ್ಳಿ ಅಭಯಾರಣ್ಯ ವಾಪ್ತಿಯಲ್ಲಿ ಅನೇಕ ಅಡತಡೆಗಳು ಇದ್ದರು ಧೃತಿಗೆಡದೆ ರಸ್ತೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರ ಅಂದಿನ ಶ್ರಮದಿಂದ ಹಣಗೆರೆ ಭಾಗದಲ್ಲಿ ಸಲೀಸಾಗಿ ವಾಹನ ಓಡಾಡಬಹುದಾಗಿದೆ. ಅವರ ಜ್ಞಾನವನ್ನು ಆಡಳಿತ ಬಳಸಿಕೊಳ್ಳಬೇಕು” ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ನುಡಿದರು.

ಸಭೆಯಲ್ಲಿ ಕನ್ನಂಗಿ ಗ್ರಾ.ಪಂ. ಅಧ್ಯಕ್ಷೆ ಸುಪ್ರಿತ ರವೀಂದ್ರ, ಹಣಗೆರೆ ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ಕೆರೆಹಳ್ಳಿ, ಪ್ರಮುಖರಾದ ಸತೀಶ್ ಬೇಗುವಳ್ಳಿ, ಕೆ.ಎಸ್. ಶೇಷಾದ್ರಿ, ಧರ್ಮೇಶ್ ಸಿರಿಬೈಲು, ಇಬ್ರಾಹಿಂ ಷರೀಫ್, ಸಾಲೇಕೊಪ್ಪ ರಾಮಚಂದ್ರ, ಹೊರಬೈಲು ರಾಮಕೃಷ್ಣ, ಅರುಣ್ ಕುಮಾರ್, ಹೆಚ್.ಎ. ಮಂಜುನಾಥ, ವೈ.ಎಂ. ಗಿರೀಶ್ ಇದ್ದರು. 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post