ಕಿಮ್ಮನೆ ಅಬ್ಬರದ ಭಾಷಣಕ್ಕೆ ಕಾರ್ಯಕರ್ತರೇ ದಂಗು

ಮಣಿಪುರ ಅತ್ಯಾಚಾರ ಘಟನೆ ವಿಶ್ವಗುರು ಮೋದಿ ಯಾಕೆ ವಿರೋಧಿಸಲ್ಲ
420 ಆರಗ ಜ್ಞಾನೇಂದ್ರ ಮೋದಿ ಗ್ಯಾರಂಟಿ ಬಗ್ಗೆ ಏನಂತಾರೆ? ಕಿಮ್ಮನೆ
34 ರೂಗೆ ಸಿಗದ ಅಕ್ಕಿ - 29 ರೂಗೆ ಭಾರತ ಅಕ್ಕಿ ಆಗಿದ್ದು ಹೇಗೆ - ಆರ್.ಎಂ.ಎಂ.
ಯಡಿಯೂರಪ್ಪ ಜಾಗದ ಪಕ್ಕದಲ್ಲೇ ಶಿವಮೊಗ್ಗ ವಿಮಾನ ನಿಲ್ದಾಣ ! - ಬೇಳೂರು


ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ವಿಶ್ವದಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿದ ಪ್ರಕರಣಗಳು ಮಣಿಪುರದಲ್ಲಿ ನಡೆದಿದೆ. ಹಾಡಹಗಲೇ ಮಹಿಳೆಯರನ್ನು ಅತ್ಯಾಚಾರ ಮಾಡಿರುವ ವಿಡಿಯೋಗಳು ವೈರಲ್ ಅಗಿದೆ. ಇದರ ಕುರಿತು ಜಾಗತಿಕವಾಗಿ ಎಲ್ಲಾ ದೇಶಗಳು ಮಾತನಾಡುತ್ತಿವೆ. ಭಾರತವನ್ನು ತಲೆತಗ್ಗಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಯಾಕೆ ಹೋಗುವುದಿಲ್ಲ. ಜನರ ಸಮಸ್ಯೆಗಳ ಬಗ್ಗೆ ಯಾಕೆ ಧ್ವನಿಯಾಗುವುದಿಲ್ಲ. ವಿಶ್ವಗುರುವಿಗೆ ಭಾರತದ ದೇಶದ ಮಹಿಳೆಯರು ಕಾಣಿಸುವುದಿಲ್ಲವೇ. ಮೋದಿ ರಾಜ್ಯದಲ್ಲಿ ಅತ್ಯಾಚಾರಕ್ಕೆ ಕಡಿವಾಣ ಹಾಕುವುದಿಲ್ಲವೇ. ಇಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಎಂದು ಪ್ರಶ್ನಿಸಿದರು.

ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ 27 ಬಿಜೆಪಿ ಸಂಸದರು, 2 ಕೇಂದ್ರ ಸಚಿವರು ಏನ್ ಕಡಿದಿದ್ದಾರೆ. ಬಿಜೆಪಿಯನ್ನು ಪುನಃ ಆಯ್ಕೆ ಮಾಡಿದರೆ ಅನಂತಕುಮಾರ್ ಹೇಳಿದಂತೆ ಸಂವಿಧಾನ ಬದಲಾಯಿಸುತ್ತಾರೆ. ಆಗ ಚುನಾವಣೆ, ಅಧಿಕಾರ, ಆಡಳಿತ ಇವ್ಯಾವುದು ಇರುವುದಿಲ್ಲ. ಚಿಂತನಾಗಂಗದಲ್ಲಿ ಹೇಳಿರುವಂತೆ ಬಡವರು, ಶೂದ್ರರು, ಭಾಷೆ, ಪ್ರಾಂತ್ಯದ ಆದಾರದಲ್ಲಿ ಸಂಸ್ಕೃತ, ಹಿಂದಿ ಹೇರಿಕೆ ಆರಂಭವಾಗಲಿದೆ. ಬಿಜೆಪಿ ಸಿದ್ಧಾಂತ ಅಂತ್ಯಗೊಳಿಸದಿದ್ದರೆ ಸ್ವಾತಂತ್ರ್ಯ ಅಂತ್ಯವಾಗಲಿದೆ. ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ದೇಶ ಅಣಿಯಾಗಬೇಕಾದೀತು ಎಂದು ಎಚ್ಚರಿಸಿದರು.

ಸಿಗಂದೂರು ದೇವಸ್ಥಾನ ವಿಚಾರದಲ್ಲಿ ಆರ್ ಎಸ್ ಎಸ್ ಹೆಣೆದಿದ್ದ ಸೂತ್ರದ ಗೊಂಬೆಯಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ಕುಣಿದಿದ್ದರು. ಬಿಜೆಪಿ ಸಿದ್ಧಾಂತ ನಂಬಿದರೆ ಜನರ ಪರಿಸ್ಥಿತಿ ಹಾಲಪ್ಪರಿಗಿಂತ ಭಿನ್ನವಾಗುವುದಿಲ್ಲ. ಬಡವರು ಕ್ಯಾನ್ಸರ್ ಕಾಯಿಲೆಗಳಿಗೂ ಹಣ ಹೊಂದಿಸುವ ಪರದಾಟಕ್ಕೆ ಸಿಲುಕಿದ್ದಾರೆ. ಗುಜರಾತ್ ಮೂಲದ ದೊಡ್ಡ ಉದ್ಯಮಿಗಳು ದೇಶಕ್ಕೆ ನಷ್ಟ ಮಾಡಿ ಪರಾರಿಯಾಗಬಹುದು. ಅವರದೇ 11 ಲಕ್ಷ ಕೋಟಿ ಸಾಲ ಮನ್ನ ಮಾಡಬಹುದು. ದೇಶದ ಆದಾಯದಲ್ಲಿ 11 ಲಕ್ಷ ಕೋಟಿ ಬಡ್ಡಿಗೆ ಮೀಸಲಿಡುತ್ತಾರೆಂದರೆ ದೇಶ ಎತ್ತ ಸಾಗುತ್ತಿದೆ ಎಂಬುದನ್ನು ಜನರು ಓದಿ ತಿಳಿದುಕೊಳ್ಳಬೇಕು. ಬಡವರಿಗೆ ಕೊಡುವ ಗ್ಯಾರಂಟಿ ಯೋಜನೆಯ‌ನ್ನು 420 ಯೋಜನೆ ಅಂದಿದ್ದ 420 ಆರಗ ಜ್ಞಾನೇಂದ್ರ ಮೋದಿ ಗ್ಯಾರಂಟಿ ಬಗ್ಗೆ ಏನಂತಾರೆ ಎಂದರು.

ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, 75 ವರ್ಷದ ಅರಣ್ಯ ಸಾಗುವಳಿ ನಿಯಮವನ್ನು 25 ವರ್ಷಕ್ಕೆ ಇಳಿಸುವ ಯಡಿಯೂರಪ್ಪ, ರಾಘವೇಂದ್ರ ಕೋಟಾ ಮುಗಿದಿದೆ. ಶರಾವತಿ ಸಂತ್ರಸ್ತರ ಭೂಮಿ ಸಮಸ್ಯೆ ಡಿಸೆಂಬರ್ ಅಂತ್ಯಕ್ಕೆ ಮುಗಿಸುತ್ತೇವೆ ಎಂದಿದ್ದ ಬಸವರಾಜ ಬೊಮ್ಮಾಯಿ ಈಗೆಲ್ಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಡವರಿಗೆ ಉಚಿತ ಅಕ್ಕಿ ಕೊಡಲು 34 ರೂಪಾಯಿಯಂತೆ ಅಕ್ಕಿ ಕೇಳಿದರೆ ಮೋದಿ ಕೊಡಲಿಲ್ಲ. ಈಗ ಭಾರತ್ ಅಕ್ಕಿ ನೆಪದಲ್ಲಿ 29 ರೂಪಾಯಿ ಅಕ್ಕಿ ಹಂಚಲು ಎಲ್ಲಿಂದ ಬರುತ್ತದೆ. ಒಟ್ಟಿನಲ್ಲಿ ಬಡವರಿಗೆ ಅನ್ನ ಸಿಗಬಾರದು ಎಂಬ ಬಿಜೆಪಿ ಧೋರಣೆ ಸರಿಯಲ್ಲ. ಬಿಜೆಪಿ ಆಡಳಿತದಲ್ಲಿ ಹುಟ್ಟುವ ಮಕ್ಕಳಿಗೂ ಉದ್ಯೋಗ ಸಿಗುವುದಿಲ್ಲ ಎಂದು ಖಾತ್ರಿಯಾಗಿದೆ. ಮಗು ಕೂಡ ಪ್ರಶ್ನಿಸುತ್ತಿದೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಯಡಿಯೂರಪ್ಪ, ರಾಘವೇಂದ್ರ ಜಾಗದ ಬೆಲೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಮಾಡಿದ್ದಾರೆ. ಅದು ಬಿಟ್ಟರೆ ಬೇರೆ ಏನು ಮಾಡಿದ್ದಾರೆ. ಯಡಿಯೂರಪ್ಪ ಸಾಧನೆ ಏನು ಅಂದ್ರೆ ಸೊಪ್ಪಿನಬೆಟ್ಟ ಜಾಗವನ್ನು ಅರಣ್ಯ ಇಲಾಖೆಯ ಕಾನು ಮಾಡಿದ್ದು. ಬಡವರಿಗೆ ನಿವೇಶನ, ಭೂಮಿ ಹಕ್ಕು ಸಿಗಬಾರದು ಎಂದು ಅನುಮತಿ ನೀಡಿದ್ದೇ.? ಕಾಂಗ್ರೆಸ್ ಗ್ಯಾರಂಟಿ ಯೋಜನೆಯಡಿ ಬಿಜೆಪಿಯ ಶೇಕಡಾ 95ರಷ್ಟು ಕಾರ್ಯಕರ್ತರು ಫಲಾನುಭವಿಗಳು ಇದ್ದಾರೆ. ಅವರ್ಯಾರು ಹಣ ಪಡೆದುಕೊಂಡಿಲ್ಲ ಅಂದ್ರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಸವಾಲು ಹಾಕಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post