ಹಿರಿಯ ಪತ್ರಕರ್ತ ರುದ್ರಪ್ಪ ಚನ್ನಬಸಪ್ಪ ಅವರ ಲೇಖನ

ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ಕಟುವಾಗಿ ವಿಮರ್ಶಿಸುತ್ತಿರುವ ಪರಕಾಲ ಪ್ರಭಾಕರ್‌ ಯಾರು ?

ಇವರು ಪರಕಾಲ ಪ್ರಭಾಕರ.ರಾಜಕೀಯ ಅರ್ಥ ಶಾಸ್ತ್ರಜ್ಞರು ಮತ್ತು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಪತಿ.ಪರಕಾಲ ಪ್ರಭಾಕರ ಅವರು ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕಳೆದ ವಾರ ರಾಜ್ಯದ ವಿವಿಧೆಡೆ ಮಾಡಿದ ವಿಶಿಷ್ಟ ದೃಷ್ಟಿಕೋನದ ಮತ್ತುಬೌ ದ್ಧಿಕ ಪ್ರಖರತೆಯ ಭಾಷಣಗಳು  ಮತ್ತು ಪತ್ರಿಕೆಗಳಿಗೆ ಅವರು ನೀಡಿರುವ ಸಂದರ್ಶನಗಳು ಕೆಲವು ಆಸಕ್ತ ವಲಯಗಳ ಗಮನವನ್ನು ಸೆಳೆದಿವೆ.ಕೆಲವರಿಗೆ,ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ.

ಪರಕಾಲ ಅವರು ಆಂಧ್ರದ ನರಸಾಪುರ ಪಟ್ಟಣದಲ್ಲಿ ಸಾಕಷ್ಟು ರಾಜಕೀಯ ಪ್ರಭಾವ ಹೊಂದಿದ್ದ ಬ್ರಾಹ್ಮಣ ಕುಟುಂಬದವರು. ಅವರ ತಂದೆ ಶೇಷಾವತಾರಂ ಎರಡು ದಶಕಗಳ ಕಾಲ ಕಾಂಗ್ರೆಸ್ ಶಾಸಕರಾಗಿದ್ದರು ಮತ್ತು 1973 ರಿಂದ 1981 ರ ವರೆಗೆ ವಿವಿಧ  ಸಂಪುಟಗಳಲ್ಲಿ ಸಚಿವರಾಗಿದ್ದರು.ಅವರ ನಿಧನದ ನಂತರ ಪರಕಾಲ ಅವರ ತಾಯಿ ಶ್ರೀಮತಿ ಕಾಳಿಕಾಂಬಾ  ಕೂಡಾ ಅದೇ ನರಸಾಪುರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಸೋತರು.ಪರಕಾಲ ಅವರ ತಾಯಿಯ ತಂದೆ ಕೂಡಾ ಸುಮಾರು ಮೂರು ದಶಕಗಳ ಕಾಲ ಟೌನ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿದ್ದರು.ಪರಕಾಲ 1978 ರಲ್ಲಿ ಸೋಷಿಯಾಲಜಿಯಲ್ಲಿ ಮಾಸ್ಟರ್ಸ್ ಪದವಿ ಮತ್ತು international studies ನಲ್ಲಿ ಎಂಫಿಲ್ ವ್ಯಾಸಂಗಕ್ಕೆ ದೆಹಲಿಯ ಜವಾಹರಲಾಲ್ ಯೂನಿವರ್ಸಿಟಿ ಜೆ ಎನ್ ಯೂಗೆ ಬಂದಾಗ ಪಿ ವಿ ನರಸಿಂಹರಾವ್ ಅವರ ಲೋಕಲ್ ಗಾರ್ಡಿಯನ್ ಆಗಿದ್ದರು.ನರಸಿಂಹ ರಾವ್, ನಂತರ ,1980 ರಲ್ಲಿ ವಿದೇಶಾಂಗ ಸಚಿವರಾದರು ಮತ್ತು 1991 ರಲ್ಲಿ ಪ್ರಧಾನಿಯಾದರು.JNU ನಲ್ಲಿ ಪರಕಾಲ,ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ NSUI ಸೇರಿ ಅದರ ಅಧ್ಯಕ್ಷರಾಗಿದ್ದರು.ಅಧ್ಯಕ್ಷ ಸ್ಥಾನಕ್ಕೆ ಮತ್ತೆ 1982 ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತರು.1983 ರಲ್ಲಿ ಉಪ ಕುಲಪತಿ ನಿವಾಸದ ಘೇರಾವ್ ನಲ್ಲಿ ಭಾಗವಹಿಸಿ ಎರಡು ವಾರ ತಿಹಾರ್ ಜೈಲಿನಲ್ಲಿದ್ದರು.ಇದರಿಂದಾಗಿ ಅವರ ವ್ಯಕ್ತಿತ್ವಕ್ಕೆ ಹೊಸ ಬಲ  ಬಂದಿತು.ನಂತರ ಅವರು NSUI ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದರು.ಇದೇ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿರ್ಮಲಾ ಸೀತಾರಾಮನ್ ಅವರನ್ನು ಮಾತನಾಡಿಸಲು ಪರಕಾಲ JNU  ಲೈಬ್ರರಿಗೆ ಆಗಾಗ ಬರುತ್ತಿದ್ದರು.ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಅವರ ಸ್ನೇಹಿತರಿಗೆ ಗೊತ್ತಾಗಿದ್ದು 1986 ರಲ್ಲಿ ಮದುವೆ invitation ನೋಡಿದಾಗಲೇ.

ಅವರ ಮದುವೆಗೆ ಸ್ವಲ್ಪ ಕಾಲ ಇದ್ದಾಗ ಪರಕಾಲ ಪ್ರಭಾಕರ ಅವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ದೊರೆಯಿತು.ಆಗಿನ ಕಾಲದಲ್ಲಿ ಅಂತಹ ವಿದ್ಯಾರ್ಥಿ ವೇತನವನ್ನು ಪಡೆಯಲು ತುಂಬಾ ಸಾಮರ್ಥ್ಯ ಮತ್ತು ಉನ್ನತ ಮಟ್ಟದ ರಾಜಕೀಯ ಸಂಪರ್ಕ ಹೊಂದಿರಬೇಕಿತ್ತು.london school of economics ನಲ್ಲಿ ಅಡ್ಮಿಷನ್ನಿಗೆ ಅವರು ಆಯ್ಕೆಯಾಗಿದ್ದರು.ಅವರಿಗೆ ತಮ್ಮ ತಂದೆ ತಾಯಿಯವರಂತೆ ರಾಜಕೀಯ ಕ್ಷೇತ್ರದಲ್ಲಿಯೇ ಮುಂದುವರಿಯಲು ಇಷ್ಟವಿದ್ದರೂ ಅವರು ವಿದೇಶದಲ್ಲಿ ವ್ಯಾಸಂಗ ಮಾಡುವಂತೆ ಪ್ರೇರೇಪಿಸಿದ್ದು ದೇಶದ ಒಬ್ಬ ದೊಡ್ಡ ವ್ಯಕ್ತಿ.ಅವರೇ ರಾಜೀವ ಗಾಂಧಿ..!ಒಂದು ದಿನ ಪರಕಾಲ ಕುಟುಂಬದ ಆಪ್ತರಾಗಿದ್ದ ಮತ್ತು ಆಗ AICC ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀಮತಿ ನಜ್ಮಾ ಹೆಫ್ತುಲ್ಲಾ ಅವರು AICC ಕಾರ್ಯಾಲಯದಲ್ಲಿ ಪರಕಾಲ ಅವರ ಕೈ ಹಿಡಿದು ಎಳೆದುಕೊಂಡು ಹೋಗಿ ರಾಜೀವ ಗಾಂಧಿಯವರ ಮುಂದೆ ನಿಲ್ಲಿಸಿದರು."ನೋಡಿ ಸಾರ್ ,ಈ ಯುವಕ ಸುಮ್ಮನೆ ಟೈಮ್ ವೇಸ್ಟ್ ಮಾಡ್ತಾ ಇದ್ದಾರೆ"ಎಂದು ದೂರಿದರು.ಆಗಷ್ಟೇ ಪ್ರಧಾನಿಯಾಗಿದ್ದ ರಾಜೀವ ಗಾಂಧಿಯವರು 1983 ರ ಉಪಚುನಾವಣೆಯಲ್ಲಿ ಪರಕಾಲ ಅವರ ತಾಯಿಯವರ ಪರವಾಗಿ ಪ್ರಚಾರ ಮಾಡಿದ್ದರು.ಅವರು ಮುಗುಳ್ನಗೆಯೊಂದಿಗೆ"ಪ್ರಭಾಕರ್,ಮೊದಲು ನಿಮ್ಮ ಓದು ಮುಗಿಸಿ.ನಂತರ ನನ್ನ ಬಳಿ ಬನ್ನಿ"ಎಂದು ಕಿವಿ ಮಾತು ಹೇಳಿದರು .ಆಗ ,ಪರಕಾಲ ಪ್ರಭಾಕರ ವಿದ್ಯಾರ್ಥಿ ವೇತನವನ್ನು ಒಪ್ಪಿಕೊಳ್ಳುವ ನಿರ್ಧಾರ ಮಾಡಿದರು.ನಿರ್ಮಲಾ ಸೀತಾರಾಮನ್ ಅವರು ಕೂಡಾ JNU ನಲ್ಲಿ ಭಾರತ ಮತ್ತು ಯೂರೋಪ್ ನಡುವಿನ textile trade ಕುರಿತ ತಮ್ಮ doctoral thesis ಅನ್ನು ಮೊಟಕುಗೊಳಿಸಿ ಲಂಡನ್ನಿಗೆ ಪರಕಾಲ ಅವರೊಂದಿಗೆ ಹೊರಟರು.ಪರಕಾಲ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾಗ ನಿರ್ಮಲಾ ಸೀತಾರಾಮನ್ ಅವರು -ಹ್ಯಾಬಿಟ್ಯಾಟ್ ಹೋಂ decour ಸ್ಟೋರ್ ನಲ್ಲಿ sales assistant,ಬಿಬಿಸಿ world service ನಲ್ಲಿ ತಮಿಳು translator ,price waterhouse ನಲ್ಲಿ ಮ್ಯಾನೇಜರ್ -ಹೀಗೆ ವಿವಿಧ ಕೆಲಸಗಳನ್ನು ಮಾಡಿದರು.1991 ರಲ್ಲಿ ದಂಪತಿ ಭಾರತಕ್ಕೆ ಮರಳಿದರು..

ನಂತರ ಕೆಲವು ವರ್ಷಗಳ ನಂತರ ಪರಕಾಲ ತಮ್ಮ ಈ ಹಿಂದಿನ ಲೋಕಲ್ ಗಾರ್ಡಿಯನ್ ಪಿವಿ ನರಸಿಂಹ ರಾವ್ ಬೆಂಬಲದೊಂದಿಗೆ ಕಾಂಗ್ರೆಸ್ ರಾಜಕಾರಣದಲ್ಲಿ ತೊಡಗಿಕೊಂಡರು.1994 ರಲ್ಲಿ ತಮ್ಮ ತಂದೆಯ ಕ್ಷೇತ್ರ ನರಸಾಪುರದಲ್ಲಿ ಚುನಾವಣೆಗೆ ನಿಂತು ಸೋತರು.ಮತ್ತೆ ಎರಡು ವರ್ಷಗಳ ನಂತರ ಪುನಃ ಉಪಚುನಾವಣೆಯಲ್ಲಿಯೂ ಸೋತರು.1996 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ ಸೋತಿತು.ಆಗ ಕಾಂಗ್ರೆಸ್ ಪಕ್ಷದಲ್ಲಿ ನರಸಿಂಹ ರಾವ್ ಅವರನ್ನು ಮೂಲೆಗುಂಪು ಮಾಡಲಾಯಿತು.ಅವರ ಬೆಂಬಲಿಗರಿಗೆ ಕಿರುಕುಳವೂ ಆರಂಭವಾಯಿತು.13 ದಿನಗಳ ವಾಜಪೇಯಿ ಸರ್ಕಾರದ ಸಂದರ್ಭದಲ್ಲಿ ಪರಕಾಲ ಬಿಜೆಪಿ ಗೆ ಸೇರಿದರು.1998 ರಲ್ಲಿ ನರಸಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದರು. ಮತ್ತೆ ಸೋತರು.ಆ ವರ್ಷ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.ತೆಲುಗು ದೇಶಂ ಮತ್ತು ಬಿಜೆಪಿ ನಡುವೆ ಮೈತ್ರಿಯನ್ನು ಏರ್ಪಡಿಸುವಲ್ಲಿ ಪರಕಾಲ ಮಹತ್ವದ ಪಾತ್ರವನ್ನು ವಹಿಸಿದರು. ನಂತರ ಆಂಧ್ರ ಪ್ರದೇಶದ ಬಿಜೆಪಿ ವಕ್ತಾರರಾಗಿದ್ದರು.ಆ ನಂತರ National Economic cell ಸದಸ್ಯರಾಗಿ ಹತ್ತನೇ ಪಂಚ ವಾರ್ಷಿಕ ಯೋಜನೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.ನಿರ್ಮಲಾ ಸೀತಾರಾಮನ್ ಮಾತ್ರ ಇನ್ನೂ ಬಿಜೆಪಿ ಸೇರಿರಲಿಲ್ಲ.ಆದರೆ ಅವರು ಲಂಡನ್ನಿನಿಂದ ವಾಪಾಸ್ ಬಂದಾಗಲೇ RSS intellectual wing ನ ಭಾಗವಾಗಿದ್ದ ಚಿಂತಕರ ಚಾವಡಿ ಭಾರತೀಯ ಪ್ರಜ್ಞಾ  ಸಂಸ್ಥೆಯಲ್ಲಿ ತೊಡಗಿಕೊಂಡಿದ್ದರು. bjp ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಕೂಡಾ ಆ ಸಂಸ್ಥೆಯಲ್ಲಿದ್ದರು . ಪರಕಾಲ ಅವರು2000 ನೇ ಇಸವಿಯ ಆರಂಭದಲ್ಲಿ  ತಮ್ಮ ಪತ್ನಿಯವರಿದ್ದ ಭಾರತೀಯ ಪ್ರಜ್ಞಾ ಸಂಸ್ಥೆಗೆ ಸೇರ್ಪಡೆಯಾಗಿ ಕೆಲವು ಕಾಲ ಅದರ ಪ್ರಕಾಶನದ ಸಂಪಾದಕೀಯ ಮಂಡಳಿಯಲ್ಲಿದ್ದರು ಮತ್ತು ಆ ಸಂಸ್ಥೆಯ ಮ್ಯಾಗಝಿನ್ ಮ್ಯಾನೇಜಿಂಗ್ ಎಡಿಟರ್ ಹುದ್ದೆಯ ಹೊಣೆಯನ್ನು ವಹಿಸಿಕೊಂಡರು.ಅದರಲ್ಲಿ ಲೇಖನವೊಂದನ್ನು ಬರೆದು ಕಾಂಗ್ರೆಸ್ ಪಕ್ಷವನ್ನು"politically moribund ,programatically cynical and organizationally fatigued "ಎಂದು ಟೀಕಿಸಿ,ದೇಶಕ್ಕೆ ಈಗ ಸ್ಪಷ್ಟವಾಗಿ ರಾಷ್ಟ್ರೀಯ ವಿಚಾರಧಾರೆಯ ದೇಶವ್ಯಾಪಿ ಪ್ರಭಾವವಿರುವ ಪಕ್ಷವೊಂದರ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಆರ್ಎಸ್ಎಸ್ ಅನ್ನು ಸಮರ್ಥಿಸಿಕೊಂಡು ಇನ್ನೂ ಒಂದು ಲೇಖನವನ್ನು ಬರೆದರು.He accused Jawaharlal Nehru of seizing "the opportunity afforded by the unfortunate assassination of Gandhiji to launch a vitriolic campaign against the Sangh.".The RSS had been unfairly blamed for each and every untoward and unfortunate incident including extensive unrest during the Emergency and the demolition of the Babri Masjid.The sangh survived these adversities"he wrote."It survived the hostility of the mighty state.It survived the onslaught of the hostile news media.It survived the campaign of calumny by a majority of influencial political commentators and social scientists."ಎಂದು ಅವರು ಸಮರ್ಥಿಸಿಕೊಂಡರು.ಆದರೆ 2006 ರಲ್ಲಿ ಅವರು ಬಿಜೆಪಿಯಿಂದ ನಿರ್ಗಮಿಸಿದರು.ಆಂಧ್ರ ಪ್ರದೇಶ ವಿಧಾನ ಪರಿಷತ್ ಪುನಃ ಅಸ್ತಿತ್ವಕ್ಕೆ ಬಂದಾಗ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೆ ಸೋತರು.2008 ರಲ್ಲಿ ಅವರು ತೆಲಗು ನಟ ಚಿರಂಜೀವಿಯವರ ಪ್ರಜಾ ರಾಜ್ಯಮ್ ಪಕ್ಷದ ವಕ್ತಾರರಾದರು.2014 ರಲ್ಲಿ ತೆಲಗು ದೇಶಂ ಸರ್ಕಾರ ರಚನೆಯಾದಾಗ ಆ ಸರ್ಕಾರದ ಮೀಡಿಯಾ ಅಡ್ವೈಸರ್ ಹುದ್ದೆಯನ್ನು ವಹಿಸಿಕೊಂಡರು.ಆದರೆ ನಾಲ್ಕು ವರ್ಷಗಳ ನಂತರ ತೆಲಗು ದೇಶಂ ಮೋದಿ ಸರ್ಕಾರಕ್ಕೆ ಬೆಂಬಲವನ್ನು ವಾಪಸ್ ಪಡೆದಾಗ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.ಆಗ ನಿರ್ಮಲಾ ಸೀತಾರಾಮನ್ PM ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದರು.

ಇತ್ತೀಚಿನ ವರ್ಷಗಳಲ್ಲಿ ಅವರು ಮೋದಿ ಸರ್ಕಾರದ ಮತ್ತು ನಿರ್ಮಲಾ ಸೀತಾರಾಮನ್ ಅವರ ಆರ್ಥಿಕ ನೀತಿಯನ್ನು ಟೀಕಿಸುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ.ತಮ್ಮ ಪತ್ನಿಯ ನಿಲುವುಗಳನ್ನು ವಿರೋಧಿಸುತ್ತಿರುದರಿಂದ ಕೆಲವರಿಗೆ ಸಂತೋಷವಾಗಿರುವುದನ್ನು ಗಮನಿಸಿರುವ ಪರಕಾಲ ಪ್ರಭಾಕರ ಅವರು ಒಮ್ಮೆ ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದರು-"Evidently these people are alian to the idea of two individuals having a relationship of mutual respect notwithstanding their disagreement on a particular issue".



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post