ಕೋಟ್ಯಾಂತರ ಬೆಲೆ ಬಾಳುವ ಖಾಲಿ ನಿವೇಶನದ ಮೇಲೆ ದುಷ್ಟರ ಕಣ್ಣು

ಕೆಲವು ಅಧಿಕಾರಿಗಳೇ ಸಸ್ಪೆಂಡ್‌ ಆಗ್ತಾರೆ!
ಬೇನಾಮಿ ಪೈಲ್‌ ಬಂದರೆ ಆಡಳಿತ ಪ್ರಕಟಿಸಬೇಕು – ಅಮ್ರಪಾಲಿ ಸುರೇಶ್

ತೀರ್ಥಹಳ್ಳಿ ತಾಲ್ಲೂಕು ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಬೆಲೆ ಬಾಳುವ ಖಾಲಿ ಜಾಗದ ಮೇಲೆ ಕೆಲವು ದುಷ್ಟ ಶಕ್ತಿಗಳು ಕಣ್ಣಿಟ್ಟಿದ್ದು, ಈ ಜಾಗಕ್ಕೆ ಈಗಾಗಲೇ ನಕಲಿ ದಾಖಲೆ ಸೃಷ್ಟಿಸಿ, ಫೈಲನ್ನು ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವುದು ತಿಳಿದು ಬಂದಿದೆ. ಈಗಾಗಲೇ ಮಲ್ಲಿಕಾ ಆರ್‌. ಭಂಡಾರಿ ಮತ್ತು ಇನ್ನಿತರ ಬೇನಾಮಿ ಹೆಸರಿನಲ್ಲಿ ಕೋಟ್ಯಾಂತರ ಬೆಲೆ ಬಾಳುವ ಖಾಲಿ ಜಾಗವನ್ನು ಕಬಳಿಸಲು ಹುನ್ನಾರ ನಡೆಯುತ್ತಿರುವುದು ಜಗಜ್ಜಾಹೀರಾಗಿದೆ. ತಾಲ್ಲೂಕಿನಾದ್ಯಂತ ಈ ರೀತಿ ಜಾಗವನ್ನು ಖಾತೆ ಮಾಡಿಕೊಟ್ಟಲ್ಲಿ ಸಂಬಂಧ ಪಟ್ಟ ತಹಶೀಲ್ದಾರ್‌, ಮುಖ್ಯಾಧಿಕಾರಿ ಮತ್ತು ಪಿಡಿಓಗಳು ಹೊಣೆ ಹೊರಬೇಕಾಗುತ್ತದೆ.

ಇಂತಹವರಿಗೆ ಸಹಾಯ ಮಾಡಲು ಹೋಗಿ ಕೆಲವು ಅಧಿಕಾರಿಗಳು ಸಸ್ಪೆಂಡ್‌ ಮತ್ತು ಜೈಲಿಗೆ ಹೋಗುವ ಸಂಭವವಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕೆಲವು ದುಷ್ಟ ಶಕ್ತಿಗಳ ಕುಮ್ಮಕ್ಕಿಗೆ ಮತ್ತು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಹಾಗೂ ಎಂಜಲು ಕಾಸಿಗೆ ಆಸೆ ಪಡೆಯದೇ, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವುದು ಉತ್ತಮ. ಇಂತಹ ಫೈಲ್‌ಗಳು ಬಂದಾಗ ಪತ್ರಿಕೆಯ ಮೂಲಕ ಪ್ರಕಟಣೆಗೊಳಿಸಬೇಕು. ನಿಮ್ಮ ಖಾಲಿ ಖಾಗ ಎಲ್ಲೇ ಇದ್ದರೂ ಜಾಗವನ್ನು ದುಷ್ಟಶಕ್ತಿಗಳಿಂದ ಉಳಿಸಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಅಂತಹ ದುಷ್ಟ ಶಕ್ತಿಗಳಿಗೆ ಯಾರಾದರೂ ಸಹಕಾರ ನೀಡಿದರೆ ಅವರುಗಳ ವಿರುದ್ಧ ನಾನು ತೀರ್ಥಹಳ್ಳಿ ಕ್ಷೇತ್ರದ ಜನರೊಂದಿಗೆ ಪ್ರತಿಭಟಿಸಬೇಕಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಸಂಘಟನಾ ಕಾರ್ಯದರ್ಶಿ ಅಮ್ರಪಾಲಿ ಸುರೇಶ್‌ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post