ನ್ಯಾಷನಲ್ ಸಮೂಹ ಸಂಸ್ಥೆಯ ಮೇಲೆ ಇಡಿ, ಐಟಿ ದಾಳಿ

ತಡರಾತ್ರಿ ಮುಂದುವರೆದ ತಪಾಸಣೆ
ಪಾದಾಚಾರಿ ಮಾರ್ಗದಲ್ಲಿ ಇಡಿ ವಾಹನ ನಿಲುಗಡೆ
ಉಡುಪಿ, ಪಡುಬಿದ್ರೆ, ಮಂಗಳೂರಿನಲ್ಲಿ ದಾಳಿ
ರಾಜ್ಯದ ನಿರ್ಮಾಣ ಮತ್ತು ವ್ಯಾಪಾರ ಸಂಸ್ಥೆಯಾದ ನ್ಯಾಷನಲ್ ಸಮೂಹ ಸಂಸ್ಥೆಗೆ ಸೇರಿದ ಕಚೇರಿ, ವ್ಯಾಪಾರ ಮಳಿಗೆ, ಪಾಲುದಾರರ ಮನೆ ಮೇಲೆ ಮಂಗಳವಾರ ಬೆಳಿಗ್ಗೆ 5.30ಕ್ಕೆ ಇಡಿ, ಐಟಿ (ತೆರಿಗೆ) ಅಧಿಕಾರಿಗಳ ತಂಡದಿಂದ ಶೋಧ, ತನಿಖೆ ನಡೆಸಿದೆ. ತಡರಾತ್ರಿವರೆಗೂ ಶೋಧಾಚರಣೆ ಮುಂದುವರೆದಿದ್ದು ಸಿಬ್ಬಂದಿಗಳ ಮೊಬೈಲ್ ಜಪ್ತಿ ಮಾಡಿದ್ದು, ಕಾರ್ಯಸ್ಥಳದಿಂದ ಹೊರಗೆ ಬಿಡದೆ ಪರಿಶೀಲನೆ ನಡೆಸಿದ್ದಾರೆ.

ಆಜಾದ್ ರಸ್ತೆಯಲ್ಲಿರುವ ನ್ಯಾಷನಲ್ ಇನ್ಫಾಬಿಲ್ಡ್ ಪ್ರೈ.ಲಿ., ನ್ಯಾಷನಲ್ ಇಂಡಿಯನ್ ಗ್ಯಾಸ್, ಎಂಟರ್ ಪ್ರೈಸಸ್, ನ್ಯಾಷನಲ್ ಸೂಪರ್ ಬಜಾರ್, ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್, ನ್ಯಾಷನಲ್ ಸೂಪರ್ ಬಜಾರ್, ಬಾಳೇಬೈಲು ಮನೆ, ಸೀಬಿನಕೆರೆ ಮನೆ ಸೇರಿದಂತೆ ಅನೇಕ ಕಡೆಗಳು ದಾಳಿ ನಡೆಸಿದ್ದಾರೆ.

ಬೊಬ್ಬಿ ಸಮೀಪ ಇರುವ ಜಲ್ಲಿ ಕ್ರಷರ್ ಘಟಕದ ಸ್ಥಳವನ್ನು ಅಧಿಕಾರಿಗಳ ತಂಡ ಪರಿಶೀಲಿಸಿದೆ. 15ಕ್ಕೂ ಹೆಚ್ಚು ಇನೋವಾ ಕಾರು, ಟಿಟಿ ವಾಹನದಲ್ಲಿ ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳು ತಪಾಸಣೆಗೆ ಆಗಮಿಸಿದ್ದಾರೆ.
ಉಳಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಸಮೂಹ ಸಂಸ್ಥೆಗೆ ಸೇರಿದ್ದ ಸ್ವತ್ತುಗಳು ಮತ್ತು ಆಸ್ತಿಗಳಿಗೆ ಸಂಬಂಧಿಸಿದಂತೆ ಬೆಂಗಳೂರು, ಪಡುಬಿದ್ರೆ, ಕಾರ್ಕಳ, ಹಾಸನ, ಮಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ. ಈ ಹಿಂದೆಯೂ 2012ರಲ್ಲಿ ಐಟಿ ದಾಳಿ ನಡೆದಿತ್ತು.
ಉಡುಪಿ ಕಾರ್ಕಳ ಕ್ರಷರ್ ಮಾಲೀಕನ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾರ್ಕಳದ ನಿಟ್ಟೆ ಗ್ರಾಮದ ಗುಂಡ್ಯಡ್ಕದ ಮಹಾಗಣಪತಿ ಮಾಲೀಕನ ಮನೆಯ ಮೇಲೆ ದಾಳಿ ನಡೆದಿದೆ. ಎರಡು ಇನೋವಾ ಕಾರಿನಲ್ಲಿ ಸುಮಾರು 12 ಅಧಿಕಾರಿಗಳು ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿ ಸಾರ್ವಜನಿಕರಿಗೆ ತೊಂದರೆ !
ತೀರ್ಥಹಳ್ಳಿ ಪಟ್ಟಣದ ಅಜಾದ್ ರಸ್ತೆಯಲ್ಲಿರುವ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಮಳಿಗೆ ಮುಂಭಾಗದ ಪುಟ್ಪಾತ್ನಲ್ಲಿ ಅಧಿಕಾರಿಗಳ ತಂಡ ಆಗಮಿಸಿದ್ದ ಬಾಡಿಗೆ ವಾಹನ ನಿಲ್ಲಿಸಿದ್ದರಿಂದ ಪಾದಾಚಾರಿಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ಇಡಿ ಅಧಿಕಾರಿಗಳು ದೇಶದ ನಾನಾ ಭಾಗಗಳಲ್ಲಿ ಪರಿಶೀಲನೆ ನಡೆಸುತ್ತಾರೆ. ಆ ಸಂದರ್ಭದಲ್ಲಿ ಸಿಗುವ ಕೆಲವು ಮಾಹಿತಿ ಹೊರತು ಪಡಿಸಿ ಉಳಿದ ಮಾಹಿತಿಗಳು ನಮಗೆ ಸಿಗುವುದಿಲ್ಲ. ಪ್ರಜೆಗಳ ರಾಷ್ಟ್ರದಲ್ಲಿ ಪೂರ್ಣ ಹಕ್ಕು ಹೊಂದಿರುವ ಪ್ರಜೆಗಳಿಗೆ ಮಾತ್ರ ಮಾಹಿತಿ ಸಿಗುವುದಿಲ್ಲ. ಇಂತಹ ವಿಚಾರದಲ್ಲಿ ದೇಶದ ಭದ್ರತೆ, ಹಿತದೃಷ್ಟಿಯಂತಹ ಸೂಕ್ಷ್ಮ ವಿಚಾರಗಳು ಇಲ್ಲದಿದ್ದರು ಮಾಹಿತಿ ಮಾತ್ರ ಅಪರಿಪೂರ್ಣವಾಗಿರುತ್ತದೆ. ಹಾಗಿದ್ದಾಗಲೂ ಹಿತಾಸಕ್ತಿಯಿರುವ ದಾಳಿಯಿಂದ ನಾಗರೀಕರಿಗೆ ಯಾಕೆ ತೊಂದರೆ ಕೊಡಬೇಕು ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವ ಸಾಮಾನ್ಯವಾಗಿ ಕೇಳಿ ಬಂತು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post