ಹೊಸ ಅಧ್ಯಕ್ಷರ ಆಯ್ಕೆ ಅಸಿಂಧು

“ಬಾಳೇಹಳ್ಳಿ ಪ್ರಭಾಕರ್‌ ಇದ್ದ ಅವಧಿಯಲ್ಲಿ ದಾನಿಗಳು ನೀಡಿದ ಹಣಕ್ಕೆ ಲೆಕ್ಕವಿಲ್ಲ”
“ನಾನೇ ಒಕ್ಕಲಿಗರ ಸಂಘದ ಅಧ್ಯಕ್ಷೆ” – ಸುಜನಿ ಕೆ.ವಿ. ಗೌಡ

ತುಡ್ಕಿ ಸಮೀಪ ನಿರ್ಮಾಣವಾಗುತ್ತಿರುವ ನೂತನ ಒಕ್ಕಲಿಗರ ಸಮುದಾಯ ಭವನಕ್ಕೆ ಬಾಳೇಹಳ್ಳಿ ಪ್ರಭಾಕರ್‌ ಅವಧಿಯಲ್ಲಿ ಅನೇಕ ದಾನಿಗಳು ನೆರವು ನೀಡಿದ್ದಾರೆ. ಆದರೆ ಆ ಹಣಗಳಿಗೆ ಲೆಕ್ಕಪತ್ರವೇ ಇಲ್ಲ. ಇದೀಗ ನಾನು ಹೊಸದಾಗಿ ದಾನಿಗಳನ್ನು ಗುರುತಿಸಿ ಸಹಾಯ ಕೇಳಲು ತೆರಳಿದರೆ ಅನೇಕರು ಸಂಘದಲ್ಲಿ ಹಣದ ದುರುಪಯೋಗ ಆಗಿದೆ ಎಂಬ ದೂರುಗಳನ್ನು ಹೇಳುತ್ತಿದಾರೆ. ಹಣ ಪೋಲಾಗುತ್ತಿದೆ ಎಂಬ ಆರೋಪ ಹೊತ್ತು ನಾನು ಹೇಗೆ ಸಮುದಾಯ ಭವನಕ್ಕೆ ಹಣ ಬೇಡಲಿ ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷೆ ಸುಜನಿ ಕೆ.ವಿ. ಗೌಡ ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

8 ತಿಂಗಳಿನಿಂದ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷೆಯಾಗಿ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಮಾಜಿ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್‌ ವಾಮಮಾರ್ಗದಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೇರಲು ಮುಂದಾಗಿದ್ದಾರೆ. ಅಧ್ಯಕ್ಷರು, ಕಾರ್ಯದರ್ಶಿಗಳು, ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಅನಧಿಕೃತವಾಗಿ ಹೊಸ ಆಡಳಿತ ಮಂಡಳಿ ರಚಿಸಿದ್ದಾರೆ. ಕೇಳಲು ತೆರಳಿದರೆ “ನಿಮ್ಮನ್ನು ಇಲ್ಲಿ ಕೂರಿಸಿದವವರು ಯಾರು. ನಿಮಗೆ ಯೋಗ್ಯತೆ ಇದ್ಯಾ, ನಾಲಿಗೆ ಇದ್ಯಾ” ಅಂತ ದಮ್ಕಿ ಹಾಕುತ್ತಾರೆ. ಅವರಿಂದ ಇಂತಹ ಮಾತಿಗಳನ್ನು ಕೇಳಲು ಹೆಣ್ಣು ಮಕ್ಕಳಾದ ನಾವು ತಯಾರಿಲ್ಲ ಎಂದು ಗಂಭೀರ ಆರೋಪಿಸಿದರು.

8 ತಿಂಗಳ ಅವಧಿಯಲ್ಲಿ ಆರಂಭದ 4 ತಿಂಗಳು ಅಧಿಕಾರ ಹಸ್ತಾಂತರ ಮಾಡದೆ ಸತಾಯಿಸಿದ್ದಾರೆ. ಸಹಕಾರ ಸಂಘದ ನಿಬಂಧಕರ ಅನುಮೋದನೆ ದೊರೆಯದ ಹಿನ್ನಲೆಯಲ್ಲಿ ಆಡಳಿತದಲ್ಲಿ ಯಾವುದೇ ಕೆಲಸ ಮಾಡದಂತೆ ತಡೆಹಿಡಿದಿದ್ದರು. ಕೇವಲ 4 ತಿಂಗಳ ಅವಧಿಯಲ್ಲಿ ಸಹ್ಯಾದ್ರಿ ಕೇಂದ್ರಿಯ ಶಾಲೆ, ಹೊಸ ಬಸ್‌, ವಸತಿ ಗೃಹ, ಕೆಟಿಕೆ ಸಂಸ್ಥೆ ಸೇರಿದಂತೆ ಇಲ್ಲಿಯವರೆಗೆ ₹1.20 ಕೋಟಿಯ ಅಭಿವೃದ್ಧಿ ಮಾಡಿಸಿದ್ದೇನೆ. ಸಂಘ ನಡೆಸಿದ ಯಾವ ಸಭೆಯನ್ನು ಸಂಪೂರ್ಣ ಯಶಸ್ವಿಯಾಗಲು ಬಿಟ್ಟಿಲ್ಲ. ಹೊಸಬರಿಗೆ ಅವಕಾಶ ಬೇಡವೇ, ಒಬ್ಬರೇ ಸಂಸ್ಥೆಯ ಅಧ್ಯಕ್ಷರಾಗಬೇಕೆ ಎಂದು ಪ್ರಶ್ನಿಸಿದರುವ ಅವರು ಅನ್ಯರಿಗೆ ಅವಕಾಶ ನೀಡುವುದಾದರೆ ನನ್ನ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

ಸಂಘದ ಹಣದಲ್ಲಿ ನಾನು ಒಂದು ರೂಪಾಯಿ ಮುಟ್ಟಿಲ್ಲ. ಪೆಟ್ರೋಲ್‌ ಕೂಡ ಹಾಕಿಸಿಕೊಳ್ಳದೇ ನಿತ್ಯ ಹಳ್ಳಿಯಿಂದ ಓಡಾಡುತ್ತಿದ್ದೇನೆ. ಕಾನೂನು ಪ್ರಕಾರ ಯಾರು ಬೇಕಾದರೂ ಅಧ್ಯಕ್ಷರಾಗಬಹುದಾಗಿತ್ತು. ನಿಯಮ ಮೀರಿ ಅಧ್ಯಕ್ಷರಾಗುವ ಅವಶ್ಯಕತೆ ಏನಿತ್ತು. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಅನುಪಸ್ಥಿತಿಯಲ್ಲಿ ಯಾಕೆ ಸಭೆ ನಡೆಸಿದ್ದಾರೆ. ಕಾರ್ಯದರ್ಶಿ ವ್ಯಾಪ್ತಿಯಲ್ಲಿದ್ದ ನಡವಳಿ ಪುಸ್ತಕವನ್ನು ಯಾಕೆ ಬಳಕೆ ಮಾಡಿಕೊಂಡಿದ್ದಾರೆ. ಯಾರು ಅವರಿಗೆ ನಡವಳಿ ಪುಸ್ತಕವನ್ನು ಕೊಟ್ಟಿದ್ದಾರೆ. ಪುಸ್ತಕ ಮತ್ತು ಕೀ ದೌರ್ಜನ್ಯದಿಂದ ಕಿತ್ತುಕೊಂಡು ಹೋದ ನಿರ್ದೇಶಕ ಸುಧೀರ್‌ ಮೇಲೆ ತೀರ್ಥಹಳ್ಳಿ ಪೊಲೀಸ್‌ ಠಾಣೆ ಮತ್ತು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದೇನೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಶಶಿಧರ್‌ ಮೇಲಿನಕೊಪ್ಪ, ನಿರ್ದೇಶಕರಾದ ಅಲ್ಮನೆ ಶೈಲಾ ಡಿ.ಎನ್‌., ಸುನಿಲ್‌ ಆಡಿನಸರ ಇದ್ದರು.







ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post