ಆರ್‌.ಎಂ. ಮಂಜುನಾಥ ಗೌಡರಿಗೆ ತೌರೂರ ಸಂಮಾನ

ಅಕ್ಟೋಬರ್‌ 6 ರಂದು ಸಹಕಾರಿ ದಿಗ್ಗಜನಿಗೆ ಅಭಿನಂದನೆ
ಪಕ್ಷಾತೀತ ಕಾರ್ಯಕ್ರಮ – ಬಸವಾನಿ ವಿಜಯದೇವ್‌

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾದ ಆರ್.ಎಂ. ಮಂಜುನಾಥ ಗೌಡರಿಗೆ ತೀರ್ಥಹಳ್ಳಿಯ ಸರ್ವ ಸಹಕಾರಿಗಳ ಪರವಾಗಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ “ತೌರೂರ ಸಂಮಾನ” ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಸಹಕಾರಿ ವೇದಿಕೆ ಅಧ್ಯಕ್ಷ ಬಸವಾನಿ ವಿಜಯದೇವ್‌ ಮಂಗಳವಾರ ಸಹ್ಯಾದ್ರಿ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಶಿವಮೊಗ್ಗ ಜಿಲ್ಲೆ ಹಾಗೂ ವಿಶೇಷವಾಗಿ ತೀರ್ಥಹಳ್ಳಿ ಸಹಕಾರಿ ಸಂಸ್ಥೆಗಳು ಬೆಳೆಯಲು ಆರ್‌.ಎಂ. ಮಂಜುನಾಥ ಗೌಡರು ನಿಸ್ವಾರ್ಥ ಕೊಡುಗೆ ನೀಡಿದ್ದಾರೆ. ಪುನಃ ಡಿಸಿಸಿ ಬ್ಯಾಂಕ್‌ಗೆ 10ನೇ ಬಾರಿಗೆ ಅಧ್ಯಕ್ಷರಾಗುವ ಮೂಲಕ ತಾಲ್ಲೂಕಿನ ಸಹಕಾರಿ ಹಿರಿಮೆ ಹೆಚ್ಚಿಸಿದ್ದಾರೆ. ಕಾರ್ಯಕ್ರಮ ಪಕ್ಷಾತೀತವಾಗಿ ನಡೆಯಲಿದ್ದು ಭಾಗವಹಿಸುವ ಆಹ್ವಾನಿತರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಂಜುನಾಥ ಗೌಡರ ಸಾಧನೆ ಮತ್ತು ಸಹಕಾರಿ ರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ. ಸಹಕಾರಿ ದಿಗ್ಗಜನ ಅಭಿನಂದನಾ ಕಾರ್ಯಕ್ರಮಕ್ಕೆ ಎಲ್ಲಾ ಸಹಕಾರಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಬೇಕೆಂದು ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ತುಳುನಾಡು ಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಿ.ಆರ್.‌ ರಾಘವೇಂದ್ರ ಶೆಟ್ಟಿ ಇದ್ದರು.

 ಆರ್‌ಎಂಎಂ ಸಹಕಾರಿ ಹೆಜ್ಜೆ ಗುರುತುಗಳು 

  • 1983 ರಿಂದ ಸಿರಿಗೆರೆ ವ್ಯ.ಸೇ..ಸ. ಬ್ಯಾಂಕಿನ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ.
  • 1986ರಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆ ಮತ್ತು ಅಧ್ಯಕ್ಷರಾಗಿ ಕಾರ್ಯಕ್ಷೇತ್ರದ ವಿಸ್ತರಣೆ.
  • 1998ರಲ್ಲಿ ಮಲೇಶಂಕರ ವ್ಯವಸಾತ ಸೇವಾ ಸಹಕಾರ ಬ್ಯಾಂಕಿನ ಸ್ಥಾಪನೆ.
  • 1996ರಿಂದ ಟಿಎಪಿಸಿಎಂಎಸ್‌, ಶಿವಮೊಗ್ಗ –ನಿರ್ದೇಶಕರಾಗಿ ನಾಯಕತ್ವ.
  • ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ 1994 ರಿಂದ ನಿರ್ದೇಶಕ.
  • ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ದಿನಾಂಕ : 11-1-1997 ರಿಂದ 2020ರ ವರೆಗೆ ಅಧ್ಯಕ್ಷರಾಗಿ ಸೇವೆ.
  • ದಿನಾಂಕ : 29-09-2023ರಂದು 10ನೇ ಬಾರಿಗೆ ಅಧ್ಯಕ್ಷ ಹುದ್ದೆಗೆ ಮರು ಆಯ್ಕೆಯಾಗಿ ಇತಿಹಾಸ ನಿರ್ಮಾಣ.
  • 2010 ರಿಂದ 2015ರ ವರೆಗೆ ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ.
  • ನ್ಯಾಪ್ಸ್‌ಕಾಬ್‌, ಮುಂಬೈ ಉಪಾಧ್ಯಕ್ಷರಾಗಿ ಸೇವೆ.
  • ರಾಷ್ಟ್ರೀಯ ಸಹಕಾರ ಬ್ಯಾಂಕ್‌, ನವದೆಹಲಿ ನಿರ್ದೇಶಕರಾಗಿ ಸೇವೆ.
  • ಕಾಸ್ಕಾರ್ಡ್‌ ಬ್ಯಾಂಕ್‌ ನಿ., ಬೆಂಗಳೂರು ಇದರ ನಿರ್ದೇಶಕರಾಗಿ ಸೇವೆ.
  • ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಇದರ ನಿರ್ದೇಶಕರಾಗಿ ಗಣನೀಯ ಸೇವೆ.
  • ರೀಜನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕೋ-ಆಪರೇಟಿವ್‌ ಮ್ಯಾನೇಜ್‌ಮೆಂಟ್‌ ಸದಸ್ಯರಾಗಿ ಸೇವೆ.
  • ಶಿವಮೊಗ್ಗ ಎಪಿಎಂಸಿ ನಿರ್ದೇಶಕರಾಗಿ 1998-2003ರ ವರೆಗೆ.
  • ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಮಹಾಮಂಡಳದ ಸ್ಥಾಪಕ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ 2005ರಿಂದ ಕಾರ್ಯ ನಿರ್ವಹಣೆ.
  • ತೀರ್ಥಹಳ್ಳಿ – ಸೊರಬ ಟಿಎಪಿಸಿಎಂಎಸ್‌ ನಿರ್ದೇಶಕರಾಗಿ ಸೇವೆ.
  • ನಿರ್ದೇಶಕರು, ಎಪಿಎಂಸಿ ಶಿವಮೊಗ್ಗ
  • ಕೊಡಚಾದ್ರಿ ಪತ್ತಿನ ಸೌಹಾರ್ದ, ನಿರ್ದೇಶಕರು ಶಿವಮೊಗ್ಗ
  • ಸಂಸ್ಥಾಪಕರು ಹಾಗೂ ನಿರ್ದೇಶಕರು, ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಶಿವಮೊಗ್ಗ


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post