ಅದ್ದೂರಿ ವರಮಹಾಲಕ್ಷ್ಮೀ ವ್ರತ ಸಂಪನ್ನ

ಹೆಣ್ಣು ಭ್ರೂಣ ಹತ್ಯೆ ತಡೆದ ಯಡಿಯೂರಪ್ಪ ಕಾರ್ಯಕ್ರಮ
ಕಾಂಗ್ರೆಸ್‌ ಗ್ಯಾರಂಟಿಗೆ ಗ್ಯಾರಂಟಿ ಇಲ್ಲ – ಬಿ.ವೈ. ರಾಘವೇಂದ್ರ

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡ ಸಾಮೂಹಿಕ ವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಎಲ್ಲಾ ಮಹಿಳೆಯರಿಗೂ ಸೀರೆ, ಅರಿಶಿಣ-ಕುಂಕುಮಾ, ಹೂವು ಬಾಗಿನ ರೂಪದಲ್ಲಿ ಹಂಚಲಾಯಿತು. ಆಯೋಜಕರು ತಂದಿದ್ದ ಬಾಗಿನ ಅರ್ಧಕ್ಕೆ ಕಡಿಮೆಯಾದ ಕಾರಣ ಎಲ್ಲರಿಗೂ ಹಂಚಲು ಸಾಧ್ಯವಾಗಲಿಲ್ಲ. ಸಿಗದ ಅನೇಕ ಮಹಿಳೆಯರು ಅಸಾಮಾಧಾನಗೊಂಡರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ವಿಶ್ವಕಂಡ ಶ್ರೇಷ್ಟ ನಾಯಕ ಪ್ರಧಾನಿ ನರೇಂದ್ರ ಮೋದಿ ದೇಶ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ತಲೆಕೆಟ್ಟ ರಾಜಕಾರಣಿಗಳು ಸನಾತನ ಧರ್ಮದ ವಿರುದ್ಧ ಕೆಟ್ಟ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಗ್ಯಾರಂಟಿ ಇಲ್ಲ ಎಂಬುದು ಮಹಿಳೆಯರು ಗಮನಿಸಬೇಕು.  ಸಂಘಟನೆ ಮೂಲಕ ಮಾಡುವಂತಹ ಧಾರ್ಮಿಕ ಕಾರ್ಯದಲ್ಲಿ ವಿಶೇಷವಾದ ಶ್ರದ್ಧೆ ಕಾಣಬಹುದಾಗಿದೆ. ಮಹಿಳೆಯರು ಬೃಹತ್ ಶಕ್ತಿ ಆಗಿ ಬೆಳೆದು ಸಮಾಜದಲ್ಲಿ ಮಹಿಳೆಗೆ ವಿಶೇಷ ಮಾನ್ಯತೆ ದೊರೆಯಬೇಕಿದೆ. ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮೀ ಯೋಜನೆ ಜಾರಿಗೊಳಿಸಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ತಡೆಯುವ ಪ್ರಯತ್ನ ಮಾಡಿದ್ದರು. ಆಡಳಿತ ಸರ್ಕಾರ ಭಾಗ್ಯಲಕ್ಷ್ಮೀ ಯೋಜನೆ ನಿಲ್ಲಿಸಿದೆ ಎಂದು ಬೇಸರಿಸಿದರು.

ಅಡುಗೆ ಸಿಲಿಂಡರ್ ದರ ಏರಿಕೆ ಆಗಿದೆ ಎಂಬ ಅಪ್ರಚಾರ ಹಿಂದೆ ವ್ಯವಸ್ಥಿತ ಕುತಂತ್ರ ಇದೆ. ಬಡ ಕುಟುಂಬಗಳಿಗೆ ಅಡುಗೆ ಅನಿಲದ ಉಚಿತ ಸಂಪರ್ಕ ನೀಡಿ ಕಟ್ಟಿಗೆ ಹೊಗೆಯಿಂದ ಮಹಿಳೆಯರ ಕಣ್ಣೀರು ನರೇಂದ್ರಮೋದಿ ಒರೆಸಿದ್ದಾರೆ. ಕೇಂದ್ರದಲ್ಲಿ ಪುನಃ ಅವರ ಅಧಿಕಾರಕ್ಕೆ ಏರಿಸುವ ಜವಾಬ್ದಾರಿ ಮಹಿಳೆಯರು ನಿರ್ವಹಿಸಬೇಕು ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿ ಮಹಿಳೆಯರನ್ನು ಗೌರವಿಸುವಂತಹ ಪಕ್ಷ. ಕೆಟ್ಟ ಆಲೋಚನೆಗಳಿಂದ ರಾಜಕಾರಣ ಮಾಡುವಂತಹ ಉದ್ದೇಶ ಬಿಜೆಪಿಗಿಲ್ಲ. ಬಿ.ವೈ.ರಾಘವೇಂದ್ರ ಸಂಸದರಾಗಿ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ. ಕಳೆದ ವರ್ಷ ವರಮಹಾಲಕ್ಷ್ಮೀ ವ್ರತ ಆಚರಣೆ ಮಾಡಿದಾಗ ಪ್ರತಿಪಕ್ಷದ ನಾಯಕರು ಟೀಕೆ ಮಾಡಿದರು. ಈ ವರ್ಷ  ಅಂತಹ ಟೀಕೆಗೆ ಮಹಿಳೆಯರು ತಕ್ಕ ಉತ್ತರ ನೀಡಿದ್ದಾರೆ. ಚುನಾವಣೆಗಾಗಿ ಗಿಮಿಕ್ ಮಾಡ್ತಾರೆ ಎಂಬ ಟೀಕೆಯ ಬದಲಿಗೆ ಇಂತಹ ಒಳ್ಳೆಯ ಕೆಲಸವನ್ನು ಮಾಡಿ ತೋರಿಸಿ ಎಂದು ಸವಾಲು ಹಾಕಿದರು.

ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿದರು. ಈ ಸಂದರ್ಭ  ತಾಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪ್ರಮುಖರಾದ ಅಶೋಕಮೂರ್ತಿ, ದತ್ತಾತ್ರಿ, ಬೇಗುವಳ್ಳಿ ಸತೀಶ್, ಮಹಿಳಾ ಮೋರ್ಚಾ ಪ್ರಮುಖರಾದ ಗೀತಾ ಶೆಟ್ಟಿ, ಸವಿತಾ ಉಮೇಶ್ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post