ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪ್ರತಿಭಾವಂತ ಯುವಕ
ಆಗುಂಬೆ ಎವಿಎಂ ಶಾಲೆಯ ವಿದ್ಯಾರ್ಥಿ ಆರ್ಯನ್ ಕಳೆದ 22ಮತ್ತು 23 ರಂದು ಬೆಂಗಳೂರಿನಲ್ಲಿ ನಡೆದ ಶಾಲಾ ಹಂತದ ವಾಲಿಬಾಲ್ ಸ್ಪರ್ಧೆಯಲ್ಲಿ ಅದ್ಭುತ ಅಲ್ ರೌಂಡ್ ಪ್ರದರ್ಶನ ನೀಡುವ ಮೂಲಕ ಶಿವಮೊಗ್ಗ ವಿಭಾಗ ಚಾಂಪಿಯನ್ ಆಗಲು ಪ್ರಮುಖ ಪಾತ್ರ ವಹಿಸಿದ್ದಲ್ಲದೆ ರಾಷ್ಟ್ರ ಮಟ್ಟಕ್ಕೆ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿ ತೀರ್ಥಹಳ್ಳಿಗೆ ಗೌರವ ತಂದಿದ್ದಾನೆ.
ತಾಲೂಕು, ಜಿಲ್ಲಾ, ಮಟ್ಟದಲ್ಲಿ ಚೆತೋಹಾರಿ ಪ್ರದರ್ಶನ ನೀಡಿದ್ದ ಆರ್ಯನ್ ವಿಭಾಗ ಮಟ್ಟದಲ್ಲಿ ಬೆಂಗಳೂರು ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ಸೋಲಿಸಲು ದಿಟ್ಟ ಆಟವಾಡಿದ್ದು ಆ ಸಂಧರ್ಭದಲ್ಲಿ ಹಾಜರಿದ್ದ ರಾಜ್ಯ ಮಟ್ಟದ ಆಯ್ಕೆಗಾರರ ಗಮನ ಸೆಳೆಯಿತು.
ವಿಶೇಷ ಎಂದರೆ ಆಗುಂಬೆ ಎ ವಿ ಎಂ ಶಾಲೆಯಲ್ಲಿ ಅನಿವಾರ್ಯ ಕಾರಣ ದಿಂದ ಈ ಬಾರಿ ಕ್ರೀಡಾ ಶಿಕ್ಷಕರು ಸೂಕ್ತ ತರಬೇತಿ ನೀಡಲು ಲಭ್ಯರಿರಲಿಲ್ಲ. ಆದರೂ ಹಿಂದಿನ ದಿನಗಳ ತರಬೇತಿ ಮತ್ತು ಪ್ರಚಂಡ ಆತ್ಮ ವಿಶ್ವಾಸವನ್ನೆ ನೆಚ್ಚಿಕೊಂಡ ಆರ್ಯನ್ ತನ್ನ ತಂಡದ ನಾಯಕತ್ವ ವಹಿಸಿ ಜಯದ ಹಾದಿಗೆ ಮುನ್ನಡೆಸಿ ತಾನು ಕೂಡ ಸರ್ವ್, ಡಿಫೆಂನ್ಸ್, ಬ್ಲಾಕಿಂಗ್ ಎಲ್ಲದರಲ್ಲೂ ಮಿಂಚಿ ಸೂಕ್ತ ತರಬೇತಿ ದೊರೆತಲ್ಲಿ ಉಜ್ವಲ ಭವಿಷ್ಯ ಹೊಂದುವ ಭರವಸೆ ಮೂಡಿಸಿದ್ದಾನೆ. ಈ ಪ್ರತಿಭಾವಂತ ಕುರುವಳ್ಳಿ ಅನಿಲ್ ಮತ್ತು ರಮ್ಯಾ ಅನಿಲ್ ದಂಪತಿಗಳ ಮಗ.
ಆರ್ಯನ್ ಜೊತೆಯಲ್ಲಿಯೇ ಅತ್ಯುತ್ತಮ ಆಟವಾಡಿದ ಸಮಿತ್ ಕೂಡ ಗಮನ ಸೆಳೆದಿದ್ದಾನೆ. ಈ ಪ್ರತಿಭಾವಂತ ಮೇಲಿನ ಕುರುವಳ್ಳಿ ಮಂಜು ಟೈಲ್ಸ್ ಮಂಜುನಾಥ್ ದಂಪತಿಗಳ ಪುತ್ರ.
