ಕಾಳಜಿ ಪೂರ್ಣ ಅರ್ಜಿಗಳ ಕಡೆಗಣನೆ

ಕಾನೂನು ಬಾಹಿರವಾಗಿ ಚಿತ್ರಪ್ರದರ್ಶನ
ಚಿತ್ರಮಂದಿರ ಜನತೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದಿದೆ

ಸಕಾಲಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ- ಕೆ. ಗಣೇಶ್‌ ಕಾಮತ್‌

ಜಂಟಿ ಮಾಲಿಕತ್ವದಲ್ಲಿ ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರ ನಡೆಯುತ್ತಿದೆ. ಶಿಥಿಲಾವಸ್ಥೆ ತಲುಪಿದೆ ಎಂಬ ಬಗ್ಗೆ ಈ ಹಿಂದೆ ಜಿಲ್ಲಾಡಳಿತಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು ಅರ್ಜಿಯನ್ನು ಕಡೆಗಣನೆ ಮಾಡಿದೆ. ಆಡಳಿತ ಮಾಡಿದ ಎಡವಟ್ಟಿನಿಂದ ಚಿತ್ರಮಂದಿರ ಕುಸಿದಿದೆ ಎಂದು ಚಿತ್ರಮಂದಿರದ ಪಾಲುದಾರ ಕೆ. ಗಣೇಶ್‌ ಕಾಮತ್‌ ಶುಕ್ರವಾರ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು.

1987 ಅಕ್ಟೋಬರ್‌ 1ರಂದು ಆರಂಭವಾದ ಚಿತ್ರಮಂದಿರದ ಮಾಲಿಕತ್ವವನ್ನು ನನ್ನ ತಂದೆ ಕೆ. ವೆಂಕಟರಾಯ ಕಾಮತ್‌ ಹೊಂದಿದ್ದರು. ನಿಧನದ ನಂತರ ವಿಲ್‌ ಆಧಾರದ ಮೇಲೆ ತಾಯಿ ಕೆ. ನಾಗವೇಣಿಬಾಯಿ ಹಾಗೂ ಸಹೋದರ ಕೆ.ರವೀಂದ್ರ ಕಾಮತ್‌ ಹೆಸರಿನಲ್ಲಿ ಜಂಟಿ ಖಾತೆ ವರ್ಗಾವಣೆಯಾಗಿದೆ. 2007ರಲ್ಲಿ ತಾಯಿ ಕೆ. ನಾಗವೇಣಿಬಾಯಿ ನೋಂದಾಯಿತ ವ್ಯವಸ್ಥಾಪತ್ರದಲ್ಲಿ ತಮ್ಮ ಹಕ್ಕನ್ನು ನನಗೆ ವರ್ಗಾಯಿಸಿದ್ದಾರೆ ಎಂದು ತಿಳಿಸಿದರು.

ಕೆಎಟಿ ಪ್ರಾಧಿಕಾರ ಆದೇಶದ ಮೇರೆಗೆ ಜಿಲ್ಲಾಧಿಕಾರಿ 2022ರಲ್ಲಿ ಪರವಾನಿಗೆ ಹಕ್ಕು ವರ್ಗಾಯಿಸಿದ್ದಾರೆ. ಅಂದಿನಿಂದ ಹೊಸ ಪರವಾನಿಗೆ ನವೀಕರಿಸದೆ ಕಾನೂನುಬಾಹಿರವಾಗಿ ಚಿತ್ರಪ್ರದರ್ಶನ ಮುಂದುವರೆದಿದೆ. ಚಿತ್ರಮಂದಿರದ ಶಿಥಿಲಾವಸ್ಥೆ, ಪರವಾನಿಗೆ ನವೀಕರಿಸದೆ ಕಾನೂನು ಬಾಹಿರವಾಗಿ ಚಿತ್ರಪ್ರದರ್ಶನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಮೇ 2022ರಲ್ಲಿ ದೂರು ಸಲ್ಲಿಸಿದ್ದೇನೆ. ಯಾವುದೇ ಕ್ರಮ ಕೈಗೊಳ್ಳದಿದ್ದಾಗ ವಕೀಲರ ಮುಖಾಂತರ 2023ರ ಜೂನ್‌ 5 ರಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇನೆ. ನಾನು ನೀಡಿದ ಎಲ್ಲಾ ಅರ್ಜಿಗಳನ್ನು ಕಡೆಗಣಿಸಿ ಸ್ಥಳ ಪರಿಶೀಲನೆ ಮಾಡದೆ ವಿವಿಧ ಇಲಾಖೆ ನಿರಪೇಕ್ಷಣ ಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಸಕಾಲದಲ್ಲಿ ಸ್ಥಳ ಪರಿಶೀಲನೆ ಹಾಗೂ ನಿರ್ವಹಣೆ ಸಂಬಂಧ ಸೂಕ್ತ ಆದೇಶ ನೀಡಿದ್ದಲ್ಲಿ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ದೂರಿದರು.

ಚಿತ್ರಮಂದಿರ ಕ್ಷೇತ್ರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಪ್ರತಿನಿತ್ಯ ನೂರಾರು ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದು ಅದೃಷ್ಟವಶಾತ್‌ ಮಂಗಳವಾರ ಗೋಡೆ ಉರುಳಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿವಿಧ ಇಲಾಖೆಯ ಅಧಿಕಾರಿಗಳು ಪಾಲುದಾರನಾದ ನನ್ನ ಆಕ್ಷೇಪಣೆ ಆಲಿಸದೆ ಕಾನೂನುಬಾಹೀರವಾಗಿ ನಿರಪೇಕ್ಷಣ ಪತ್ರ ಸಲ್ಲಿಸಿದ್ದಾರೆ. ಇನ್ನಾದರೂ ಸಾರ್ವಜನಿಕರಿಗೆ ಅನಾಹುತ ಸಂಭವಿಸದಂತೆ ಎಚ್ಚೆತ್ತು ಆಡಳಿತ ಕೆಲಸ ಮಾಡಬೇಕು. ನಾನು ಚಿತ್ರಮಂದಿರದ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಸಿದ್ಧನಾಗಿದ್ದೇನೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪುತ್ರ ಶ್ರೀಕಾಂತ್‌ ಕಾಮತ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post