ಚೌಡಮ್ಮ ದೇವರ ಕಾಡು ರಕ್ಷಣೆ ಶತಸಿದ್ಧ

ಸಿಂಧುವಾಡಿ ಗ್ರಾಮಸ್ಥರ ಹೋರಾಟಕ್ಕೆ ಹೊಸ ಸ್ವರೂಪ
40 ವರ್ಷದ ಚಳವಳಿಗೆ ಜಯ ಸಿಗುವುದೇ…!

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಧುವಾಡಿ ಗ್ರಾಮಸ್ಥರ 40 ವರ್ಷದ ಹೋರಾಟಕ್ಕೆ ಹೊಸ ಸ್ವರೂಪ ನೀಡಬೇಕಿದೆ. ದೇವರ ಕಾಡು ರಕ್ಷಣೆಗೆ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಾಗುತ್ತದೆ. ಸರ್ವೆ ನಂಬರ್‌ 51ಪಿ ರಲ್ಲಿರುವ ದಟ್ಟ ಅರಣ್ಯ ಪ್ರದೇಶ ರಕ್ಷಣೆ ಎಲ್ಲರ ಹೊಣೆಯಾಗಬೇಕಿದೆ. ಸದರಿ ಪ್ರದೇಶದ ಖಾತೆಯ ಹಕ್ಕು ಯಾರು ಬೇಕಾದರೂ ಹೊಂದಿರಲಿ. ಚೌಡಮ್ಮ ದೇವಿಯ ಕಾಡು ಮಾತ್ರ ಮೂಲ ಸ್ವರೂಪ ಕಳೆದುಕೊಳ್ಳದೆ ಹಾಗೆ ಉಳಿಯಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ಹೈಕೋರ್ಟ್, ಕೆಇಟಿ ನ್ಯಾಯಾಲಯದಲ್ಲಿ ಕಾಡು ಸಂರಕ್ಷಣೆ ಮಾಡುವ ಗ್ರಾಮಸ್ಥರ ಹೋರಾಟಕ್ಕೆ ಖಂಡಿತ ನ್ಯಾಯ ಸಿಗುತ್ತದೆ. ಎಲ್ಲರೂ ಕಾನೂನು ಹೋರಾಕ್ಕೆ ಕೈಜೋಡಿಸಬೇಕು ಎಂದು ಸಿಂಧುವಾಡಿ ಗ್ರಾಮದ ಸುಮಾರು 300 ಎಕರೆ ವ್ಯಾಪ್ತಿಯಲ್ಲಿರುವ ಜೌಡಮ್ಮ ದೇವರ ಕಾಡು ಪ್ರದೇಶ ವೀಕ್ಷಿಸಿ ಮಂಡಗದ್ದೆ ವಲಯಾರಣ್ಯ ವಿಭಾಗದ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ದಟ್ಟಾರಣ್ಯ ಪ್ರದೇಶ 2 ಜನರ ಹೆಸರಿಗೆ ತಲಾ 74 ಎಕರೆಯಂತೆ ಅರ್‌ಟಿಸಿ ದಾಖಲೆಯಲ್ಲಿ ಖಾತೆ ನಮೂದಾಗಿದೆ. ಸರ್ಕಾರದಿಂದ ಖಾಸಗಿ ವ್ಯಕ್ತಿಗಳಿಗೆ ಖಾತೆ ಹೇಗೆ ನಮೂದಾಗಿದೆ ಎಂಬುದಕ್ಕೆ ಸ್ಪಷ್ಟ ದಾಖಲೆಗಳಿಲ್ಲ. 1990ರಲ್ಲಿ ಸರ್ವೆ ನಂಬರ್‌ 51 ರಲ್ಲಿ 124 ಎಕರೆ ಅಧಿಸೂಚಿತ ಪ್ರದೇಶವಾಗಿ ಘೋಷಣೆಯಾಗಿದೆ. ಅರ್‌ಟಿಸಿಯಲ್ಲಿ ತಪ್ಪಾಗಿ ದಾಖಲಾಗಿರುವ ವ್ಯಕ್ತಿಗಳ ಹೆಸರನ್ನು ರದ್ದು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಹೋರಾಟಗಾರರಾದ ಶ್ರೀಪಾದ್‌ ಬಿಚ್ಚುಗತ್ತಿ, ಅನಗವಳ್ಳಿ ಸುಬ್ಬರಾವ್‌, ವೆಂಕಟೇಶ್‌, ಮಂಡಗದ್ದೆ ಗ್ರಾ.ಪಂ. ಸದಸ್ಯರಾದ ಸಿಂಧುವಾಡಿ ಸತೀಶ್‌, ಪುಟ್ಟೋಡ್ಲು ರಾಘವೇಂದ್ರ, ಅರ್‌ಎಫ್‌ಓ ಆದರ್ಶ, ಪ್ರಮುಖರಾದ ದೀಪಕ್‌, ಸುರೇಶ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post