ಕಸ್ತೂರಿ ರಂಗನ್‌ ವಿಜ್ಞಾನಿ ಮಾತ್ರ ಪರಿಸರ ತಜ್ಞರಲ್ಲ

ಕಸ್ತೂರಿ ರಂಗನ್‌ ವರದಿ ವಿರುದ್ಧ ಗುಡುಗಿದ ಆರಗ ಜ್ಞಾನೇಂದ್ರ
ಲೆಫ್ಟ್‌ ಬುದ್ದಿಜೀವಿಗಳ ಸಲಹೆಯಂತೆ ವರದಿ ತಯಾರಿ

ಕಸ್ತೂರಿ ರಂಗನ್‌ ವರದಿ ಜಾರಿಯಾದಲ್ಲಿ ರಕ್ತಕ್ರಾಂತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೆ ಎಂದು ಶಾಸಕ ಆರಗ ಜ್ಞಾನೇಂದ್ರ ಗುಡುಗಿದರು.

ತೀರ್ಥಹಳ್ಳಿ ತಾಲ್ಲೂಕು ಕಚೇರಿ ಎದುರು ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕಸ್ತೂರಿ ರಂಗನ್‌ ವರದಿ ಜಾರಿಯಾದಲ್ಲಿ ಇಡೀಕ್ಷೇತ್ರ ಸ್ಥಬ್ದವಾಗುವ ಪರಿಸ್ಥಿತಿ ಬಂದೊದಗಬಹುದು. ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಸಿದ್ಧಗೊಳಿಸುವ ಮುನ್ನ ಗ್ರಾಮಸ್ಥರು, ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹೀಗೆ ಸಂಬಂಧಪಟ್ಟ ಯಾರನ್ನೂ ಕೂಡ ಸಮಿತಿ ಸಂಪರ್ಕ ಮಾಡಿಲ್ಲ. ಕೇವಲ ಉಪಗ್ರಹಚಿತ್ರಗಳ ಆಧಾರದ ಮೇಲೆ ಅರಣ್ಯ ಪ್ರದೇಶವನ್ನು ಗುರುತು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಅಡಿಕೆ ಬೆಳೆಯಲಾಗುತ್ತಿದ್ದು ಉಪಗ್ರಹಚಿತ್ರದಲ್ಲಿ ಎಲ್ಲವೂ ಹಸಿರಾಗಿಯೇ ಕಾಣುತ್ತದೆ ಎಂದು ಹೇಳಿದರಲ್ಲದೇ ಕಸ್ತೂರಿ ರಂಗನ್‌ ಹೇಳಿಕೆಯಲ್ಲಿ ವಿಜ್ಞಾನಿ ಮಾತ್ರ ಅವರು ಅರಣ್ಯ ತಜ್ಞರಲ್ಲ. ಅಥವಾ ಮಲೆನಾಡಿನ ಜೀವನ ವಿಧಾನದ ಕುರಿತು ತಿಳುವಳಿಕೆ ಇರುವ ವ್ಯಕ್ತಿಯೂ ಅಲ್ಲ. ಈಗಾಗಲೇ ಈ ವರದಿಯನ್ನು ಕೇರಳ ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಮಾತ್ರ ಇದನ್ನು ಒಪ್ಪುವ ಮೂಲಕ ಜನತೆಗೆ ದ್ರೋಹ ಬಗೆಯುತ್ತಿದೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರಕ್ಕೆ ಜನರ ಆದ್ಯತೆ ಏನೆಂಬುದು ಗೊತ್ತಿಲ್ಲ. ಕಸ್ತೂರಿ ರಂಗನ್‌ ವರದಿ ಜಾರಿಯಾದಲ್ಲಿ ಶಿವಮೊಗ್ಗ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ರೈತರು ತಮ್ಮ ಮೂಲ ನೆಲಯನ್ನು ಕಳೆದುಕೊಳ್ಳಲಿದ್ದಾರೆ. ವರದಿಯನ್ನು ಸಮರ್ಪಕವಾಗಿ ಇಲ್ಲಿಯವರೆಗೆ ಅಧ್ಯಯನ ಮಾಡುವ ವ್ಯವಧಾನವನ್ನು ತೋರಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಮುಖಂಡರುಗಳಾದ ನಾಗರಾಜ ಶೆಟ್ಟಿ, ಹುಲ್ಕುಳಿ ಮಹೇಶ್‌, ಆರ್‌. ಮದನ್‌, ಬೇಗುವಳ್ಳಿ ಸತೀಶ್‌, ಚಂದುವಳ್ಳಿ ಸೋಮಶೇಖರ್‌, ರಕ್ಷಿತ್‌ ಮೇಗರವಳ್ಳಿ, ಗೀತಾ ಶೆಟ್ಟಿ, ಸುಮಾ ರಾಮಚಂದ್ರ, ತಳಲೆ ಪ್ರಸಾದ್‌ ಶೆಟ್ಟಿ, ಹೊಳೆಕೊಪ್ಪ ರವಿ, ಸುಧಾಕರ್‌ ಮುನ್ನೂರು ಮುಂತಾದವರು ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post