ತೀರ್ಥಹಳ್ಳಿಯಲ್ಲಿ ಪತ್ರಿಕಾ ದಿನಾಚರಣೆ

ಸಾಧಕರಿಗೆ ಸಾರ್ಥಕ ಸನ್ಮಾನ

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಘಟಕದಿಂದ ವರ್ಣ ರಂಜಿತವಾಗಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಪತ್ರಿಕಾ ಬಳಗದ ವಿಶೇಷ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರು ನೆರವೇರಿಸಿದರು,

ಸಹಕಾರ, ರಾಜಕಾರಣ, ಶಿಕ್ಷಣ, ಸಮಾಜ ಸೇವೆಯಲ್ಲಿ ಜಿ.ಎಸ್.‌ ನಾರಾಯಣ ರಾವ್‌, ಅತ್ಯಂತ ವಿಶಿಷ್ಠ ಹಾಗೂ ಬಡಜನತೆ ಪಾಲಿನ ಅಪತ್ಬಾಂದವನೆಂದು ಕರೆಸಿಕೊಂಡಿರುವ ಮೇಲಿನ ಕುರುವಳ್ಳಿ ಗೋಪಾಲ ಪೂಜಾರಿ, ಹಿರಿಯ ಯಕ್ಷಗಾನ ಕಲಾವಿದ ಕೊಕೊಡ್ತಿ ಕೃಷ್ಣಮೂರ್ತಿ, ಹಿರಿಯ ವಾಹನ ಚಾಲಕ, ಮಾಲೀಕ ಬಿ. ಮಂಜುನಾಥ ಶೆಟ್ಟಿ ತಮ್ಮ ಕ್ಷೇತ್ರಗಳಲ್ಲಿ 50 ವರ್ಷಕ್ಕೂ ಮಿಗಿಲಾಗಿ ನಿರಂತರ ಸೇವೆ ಸಲ್ಲಿಸಿರುವುದು ಗಮನ ಸೆಳೆಯಿತು. ಅಲ್ಲದೇ ತೀರ್ಥಹಳ್ಳಿಯಂತಹ ಊರಿನಲ್ಲಿ ವೃತ್ತಿಪರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಧೈರ್ಯ ತೋರಿದ ಮಹಮ್ಮದ್‌ ಶಫಿ, ನರ್ಸಿಂಗ್‌ ಕ್ಷೇತ್ರವನ್ನು ಆಯ್ದುಕೊಂಡು ವಿಶಿಷ್ಠ ಸಾಧನೆ ಮಾಡಿದ ಡಾ. ಅನುಪಮಾ ಮೋಹನ್‌, ನಿಜವಾಗಿಯೂ ತಮಗೆ ಸಲ್ಲಬೇಕಾದ ಗೌರವಾದರಗಳಿಂದ ವಂಚಿತರಾಗಿರುವ ನಾಲ್ಕು ದಶಕಕ್ಕೂ ಹೆಚ್ಚು ಕಾಲ ರಂಗ ಚಟುವಟಿಕೆಯಲ್ಲಿ ತೊಡಗಿರುವ ಸುರಾನಿ ಮ್ಯಾಥ್ಯೂ, ವಿಶೇಷ ಚೇತನ ಮಕ್ಕಳ ಪಾಲಿಗೆ ನಿಜವಾದ ಬಂಧುವಾಗಿರುವ ಶಿಕ್ಷಕ ಕುಮಾರ್‌, ವರನಟ ರಾಜ್‌ ಅವರ ಗೀತೆಗಳನ್ನು ಅಚ್ಚರಿ ಮುಟ್ಟಿಸುವಷ್ಟು ಸೊಗಸಾಗಿ ಹಾಡಬಲ್ಲ ರಮೇಶ್‌ ಗಾಂವಸ್ಕರ್‌, ಸಹಕಾರ ಮತ್ತು ಕೃಷಿಯಲ್ಲಿ ಮಹತ್ವ ಸಾಧನೆ ಮಾಡುತ್ತಿರುವ ವಿಶ್ವನಾಥ್‌ ಡಿ.ಪಿ. ಇವರುಗಳು ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಅಭಿನಂದನೆಗೆ ಪಾತ್ರರಾದರು.


ಇದಲ್ಲದೇ ಪತ್ರಿಕಾ ಬಳಗದವರಾಗಿ ಗುರುತಿಸಿಕೊಂಡಿರುವ ಹಿರಿಯ ಪತ್ರಕರ್ತ ಪ್ರಚಂಡ ಪತ್ರಿಕೆಯ ಸಂಪಾದಕ, ಪ್ರಕಾಶಕ, ಮುದ್ರಕ ಪ್ರವೀಣ್‌ ಭಟ್‌, ನಾಡಿನ ಹೆಸರಾಂತ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾದ ರಾಮಚಂದ್ರ ಕೊಪ್ಪಲು, ಉದಯವಾಣಿ ಮಾಜಿ ಉಪಸಂಪಾದಕ ಹಾಗೂ ರಾಜ್ಯದ ಪ್ರತಿಭಾವಂತ ಯುವ ಪತ್ರಕರ್ತರಲ್ಲಿ ಒಬ್ಬರಾದ ನಮ್ಮೂರು ಎಕ್ಸ್‌ಪ್ರೆಸ್‌ ಪ್ರಧಾನ ಸಂಪಾದಕರಾದ ತ.ರಾ. ರಾಘವೇಂದ್ರ, ಮುದ್ರಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ತುಂಗಾವಾರ್ತೆ ವಾರ ಪತ್ರಿಕೆಯ ಪಾರ್ಥಿಬನ್‌ ಇವರುಗಳಲ್ಲದೇ ಕುವೆಂಪು ವಿವಿ ಬಯೋ ಕೆಮೆಸ್ಟ್ರಿ ಎಂಎಸ್ಸಿಯಲ್ಲಿ 4ನೇ ರ್ಯಾಂಕ್‌ ಪಡೆದ ಸಿಂಚನಾ ಮುರುಘರಾಜ್‌, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರಣತಿ ಸಿ.ಎಸ್.‌, ಪತ್ರಿಕಾ ವಿತರಕ ಸಂದೇಶ್‌, ಉದಯೋನ್ಮುಕ ಬಾಲ ಕಲಾವಿದ ನವ ಎಸ್‌ ನಾಯಕ್‌ ಇವರುಗಳನ್ನು ಕೂಡ ಅಭಿನಂದಿಸಿ ಗೌರವಿಸಲಾಯಿತು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post