ಎಲ್ಲಿಂದ ಬಂತು ತಲ್ವಾರ್...!

ಮಾಜಿ ಹೋಂ ಮಿನಿಸ್ಟರ್ ಕ್ಷೇತ್ರದಲ್ಲಿ ನಡು ರಸ್ತೆಯಲ್ಲಿ ಕತ್ತಿ ಬೀಸಿದ ಪುಂಡರು
ಪೊಲೀಸ್ ಇಲಾಖೆಗೆ ಸಿಕ್ಕಾಪಟ್ಟೆ ಸವಾಲ್
ಕಾನೂನು ಸುವ್ಯವಸ್ಥೆ ಕೇಳೋರಿಲ್ಲ... ಸರದಿ ಅಪರಾಧ ಪ್ರಕರಣ... ಇದೇನ್ ಕಥೆ...?

ತೀರ್ಥಹಳ್ಳಿಯ ಆಗುಂಬೆ ವೃತ್ತದ ಸಮೀಪ ಕೆಲವು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಹಾಡಹಗಲೇ ತಲ್ವಾರ್ ಬೀಸಿದ್ದಾರೆ. ಮದ್ಯದ ಮತ್ತಿನಲ್ಲಿ ಕಮ್ಮರಡಿ ಯುವಕನ ಮೇಲೆ‌ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಜೀವಿತ್ ಹಾಗೂ ಅಫಾಜ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ ಎನ್ನಲಾಗುತ್ತಿದೆ.

ಮದ್ಯದ ಅಮಲಿನಲ್ಲಿ ಈ ಘಟನೆ ನಡೆದಿದ್ದು ತೀರ್ಥಹಳ್ಳಿ ಕ್ಷೇತ್ರದ ಘನತೆ ಮೂರಾಬಟ್ಟೆಯಾಗಿದೆ. ರಾಜ್ಯವೇ ಕೆಲವು ದಿನಗಳಿಂದ ಕ್ಷೇತ್ರದ ಅಪರಾಧ ಪ್ರಕರಗಳ ಬಗ್ಗೆ ಗಂಭೀರ ಚರ್ಚೆಗಳನ್ನು ಆರಂಭಿಸಿದಂತಿದೆ.

ಹೇಳಿ ಕೇಳಿ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರದಲ್ಲಿ ಸರಧಿ ಅಪರಾಧ ಪ್ರಕರಣಗಳು ದಾಖಲಾಗುತ್ತಿದೆ. ಕಾಲೇಜು ಯುವತಿಯರ ಅಶ್ಲೀಲ ವೀಡಿಯೋ, ವೈಶ್ಯಾವಾಟಿಕೆ ದಂಧೆ, ಕೊಲೆ ಪ್ರಕರಣ ಹೆಚ್ಚಾಗುತ್ತಿದೆ. ಇವೆಲ್ಲಾ ಪ್ರಕರಣಗಳು ತಿಂಗಳ ಈಚೆಗೆ ನಡೆದಿದ್ದು ಸಾಕಷ್ಟು ಅನುಮಾನ ಸೃಷ್ಟಿಸಿದೆ.

ಮಾಜಿ ಗೃಹಸಚಿವರ ಸ್ವಕ್ಷೇತ್ರದಲ್ಲಿ ಪೊಲೀಸ್ ಇಲಾಖೆ ಕೊಂಚ ಚುರುಕುತನದಿಂದ ಕೆಲಸ ಮಾಡಬೇಕಿತ್ತು. ಸ್ವತಃ ಆರಗ ಜ್ಞಾನೇಂದ್ರ ಅವರೇ ಶಾಸಕರಾಗಿದ್ದರೂ ಇಲಾಖೆ ಯಾಕೆ ಗಂಭೀರವಾಗಿ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸುತ್ತಿಲ್ಲ ಎಂಬ ಬಗ್ಗೆಯೂ ಸಾರ್ವಜನಿಕವಾಗಿ ವಿಭಿನ್ನ ಆಯಾಮಗಳಲ್ಲಿ ಗುಸುಗುಸು ಆರಂಭವಾದಂತಿದೆ.

ಆಗುಂಬೆ ವೃತ್ತದಲ್ಲಿ ಕಿಡಿಗೇಡಿಗಳು ಹಾಡ ಹಗಲೇ ಏಕಾಏಕಿ ಮಚ್ಚು ಹೊರ ತೆಗೆದಿದ್ದಾರೆ. ಗಲಾಟೆ ಆರಂಭವಾಗುತ್ತಿದ್ದಂತೆ ಮಚ್ಚು ಎಲ್ಲಿಂದ ಹೇಗೆ ಬಂತು ಎಂಬ ಬಗ್ಗೆಯೂ ಗುಮಾನಿ‌ ಶುರುವಾಗಿದೆ. ಮಚ್ಚುಗಳು ವಾಹನಗಳಲ್ಲೇ ಸಾಗಿಸುತ್ತಿದ್ದರು ಎನ್ನಲಾಗುತ್ತಿದೆ. ಯಾವ ಕಾರಣಕ್ಕಾಗಿ ಮಚ್ಚುಗಳನ್ನು ಬಳಕೆ ಮಾಡುತ್ತಿದ್ದರು. ಕಳ್ಳ ವ್ಯವಹಾರ ನಡೆಸುತ್ತಿದ್ದರೆ ಮಾತ್ರ ಮಚ್ಚು, ಕತ್ತಿ ಬಳಕೆ ಮಾಡಲು ಸಾಧ್ಯ. ಅಥವಾ ರಾತ್ರೋ ರಾತ್ರಿ ಜಾನುವಾರು ಕಳ್ಳ ಸಾಗಾಣೆಗಾಗಿ ಬಳಕೆ ಮಾಡುತ್ತಿದ್ದರಾ ಅಥವಾ ಯಾವುದಾದರು ಕೊಲೆ, ದರೋಡೆ ಮುಂತಾದ ಕೃತ್ಯಗಳಿಗಾಗಿ ಸ್ಕೆಚ್ ಹಾಕುತ್ತಿದ್ದರಾ ಎಂಬ ಬಗ್ಗೆ ಪೊಲೀಸರು  ಸೂಕ್ತ ತನಿಖೆ ನಡೆಸಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post