ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ

ತೀರ್ಥಹಳ್ಳಿ ಘಟಕಕ್ಕೆ ಮೋಹನ್‌ ಮುನ್ನೂರು ಸಾರಥ್ಯ

ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್‌ ಜಿ ಆಯ್ಕೆ
ಬುಧವಾರ ಸಂಘಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತೀರ್ಥಹಳ್ಳಿ ಘಟಕಕ್ಕೆ ನೂತನ ಅಧ್ಯಕ್ಷರಾಗಿ ವಿಸ್ತಾರ ಟಿವಿಯ ವರದಿಗಾರ ಮೋಹನ್‌ ಮುನ್ನೂರು, ಉಪಾಧ್ಯಕ್ಷರಾಗಿ ಅಜೇಯ ಪತ್ರಿಕೆಯ ವರದಿಗಾರ ಸಂತೋಷ ಕುಮಾರ್‌ ಜಿ ಅವಿರೋಧ ಆಯ್ಕೆಯಾಗಿದ್ದಾರೆ.

ಸಂಘದ ಅಧ್ಯಕ್ಷರಾಗಿದ್ದ ವಿಜಯವಾಣಿ ಪತ್ರಿಕೆಯ ವರದಿಗಾರ ಡಾನ್‌ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷರಾಗಿದ್ದ ಮೋಹನ್‌ ಮುನ್ನೂರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಅಧ್ಯಕ್ಷರಾದ ಮೋಹನ್‌ ಮುನ್ನೂರು ಅವರಿಗೆ ಅಭಿನಂಧಿಸುತ್ತಿರುವುದು.

ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಉಪಾಧ್ಯಕ್ಷ ಹಾಲಸ್ವಾಮಿ, ರಾಜ್ಯ ಸಂಘದ ನಿರ್ದೇಶಕ ಎನ್‌ ರವಿಕುಮಾರ್‌ ನಡೆಸಿಕೊಟ್ಟರು. ಕಾರ್ಯದರ್ಶಿ ಕೋಣಂದೂರು ಮುರುಘರಾಜ್‌, ಸಹಕಾರ್ಯದರ್ಶಿ ಶ್ರೀಕಾಂತ್‌ ನಾಯ್ಕ್‌, ಜಿಲ್ಲಾ ಗ್ರಾಮಾಂತರ ಪ್ರತಿನಿಧಿ ಟಿ.ಜೆ. ಅನಿಲ್‌ ಮುಂತಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾಗಿ ಸಂತೋಷ್‌ ಕುಮಾರ್‌ ಜೆ ಅವರಿಗೆ ಶುಭಾಶಯ ಕೋರಿರುವುದು.

20 ದಶಕಗಳ ಹಿಂದೆ ಯುವಜನ ಮೇಳಕ್ಕೆ ಶಕ್ತಿ ತುಂಬಿದ ಕೀರ್ತಿ ಮೋಹನ್‌ ಮುನ್ನೂರು ಅವರಿಗೆ ಸೇರುತ್ತದೆ. ಭಾವಗೀತೆ, ಜಾನಪದ, ನಾಟಕ ಮುಂತಾದ ಕ್ಷೇತ್ರದಲ್ಲಿ ಅವಿರತವಾಗಿ ದುಡಿದಿದ್ದಾರೆ. ನೂರಾರು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ, ಸಂಗೀತದ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧಾರವಾಹಿಗಳಿಗೆ ಸಾಹಿತ್ಯ ಒದಗಿಸುವ ಕೆಲಸವನ್ನು ಮಾಡಿದ್ದಾರೆ.

ನಿರ್ಗಮಿತ ಅಧ್ಯಕ್ಷರಾದ ಡಾನ್‌ ರಾಮಣ್ಣ ಶೆಟ್ಟಿ ಅವರಿಗೆ ಅಭಿನಂದಿಸುತ್ತಿರುವುದು.

ವಿವಿಧ ಪತ್ರಿಕೆ, ಮಾದ್ಯಮಗಳ ವರದಿಗಾರರಾದ ಮೇಲಂತೂ ಸಾಂಸ್ಕೃತಿಕ ಆಯಕಟ್ಟಿನಡಿ ಓದುಗರನ್ನು ವಿಶಿಷ್ಟವಾಗಿ ಸೆಳೆಯುವ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ವಾರ್ತಾ ಭಾರತಿ ವರದಿಗಾರನಾಗಿ, ಸಹಕಾರ ದನಿ ಪತ್ರಿಕೆಯ ಸಂಪಾದಕನಾಗಿಯೂ ಹಲವಾರು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸಿನಿಮಾ, ಕ್ರೀಡೆ, ಸಂಗೀತ, ಪಾಶ್ಚಿಮಾತ್ಯ ಚಿಂತನೆ, ಮನೋರಂಜನೆ, ವಿಮರ್ಶೆ, ಸಮಾಜದ ಆಗು ಹೋಗುಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಅವರು ತಮಗೆ ದೊರೆತ ಅವಕಾವನ್ನು ಪರಿಣಾಮಕಾರಿಯಾಗಿ ಸಂಘದ ಏಳಿಗೆಗೆ ದುಡಿಯುವ ಉತ್ಸಾಹ ಹೊಂದಿದ್ದಾರೆ.

ಉಪಾಧ್ಯಕ್ಷರಾಗಿರುವ ಸಂತೋಷ್‌ ಕುಮಾರ್‌ ಜಿ ಅವರು ಮೋಹನ್‌ ಮುನ್ನೂರು ಅವರಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುವ ಹೊಣೆಯನ್ನು ಹೆಗಲಿಗೇರಿಸಿಕೊಂಡಿದ್ದಾರೆ. ಸಂಘದ ಏಳಿಗೆಗೆ ಶ್ರಮಿಸಲಿರುವ ಈ ಇಬ್ಬರಿಗೂ ನೆಲದ ಧ್ವನಿ ಬಳಗ ಪರವಾಗಿ ಶುಭಾಷಯಗಳು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post