ಎಬಿವಿಪಿ ಮುಖಂಡನ ಕಾಮದಾಟ ಪ್ರಕರಣ

ಪ್ರತೀಕ್ ಗೌಡನ ವಿರುದ್ಧ ಎಫ್ಐಆರ್
ದೂರು ಕೊಟ್ಟಿದ್ದು ಹಿಂದೂ ಮುಖಂಡರೇ..!
ಸದ್ಯ ಪ್ರಪಂಚದಾದ್ಯಂತ ತನ್ನ ಅಶ್ಲೀಲ ವೀಡಿಯೋಗಳ ಮೂಲಕ ಸುದ್ದಿಯಾಗಿರುವ ಪ್ರತೀಕ್‌ ಗೌಡನ ಮೇಲೆ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ವಿಶೇಷವೆಂದರೆ ಸಂತ್ರಸ್ತ ಹುಡುಗಿಯರು ಅಥವಾ ಅವರ ಕುಟುಂಬದವರು ದೂರು ನೀಡದೆ ಹಿಂದೂಪರ ಸಂಘಟನೆಯ ಮುಂಚೂಣಿಯ ಯುವ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಗಣೇಶ್‌ ಪ್ರಸಾದ್‌ ದೇವಾಡಿಗ ಮತ್ತು ವಿಶ್ವನಾಥ ಹಿಂದೂ ನೀಡಿದ ದೂರಿನಂತೆ ಪ್ರತೀಕ್‌ ಗೌಡನ ವಿರುದ್ಧ ದೂರು ದಾಖಲಾಗಿದೆ.
ಪ್ರತೀಕ್‌ ಗೌಡ ಅಶ್ಲೀಲ ವೀಡಿಯೋ ಚಿತ್ರೀಕರಿಸಿಕೊಂಡು ಬಳಿಕ ಶೋಷಿತ ಯುವತಿಯರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ ಎನ್ನುವುದು ದೂರಿನ ಸಾರಾಂಶವಾಗಿದೆ.
ಆದರೆ ಈ ದೂರು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ. ಏಕೆಂದರೆ ಸದರಿ ಪ್ರತೀಕ್‌ ಗೌಡ ಪ್ರಮುಖವಾಗಿ ಗುರುತಿಸಿಕೊಂಡಿದ್ದು ಎಬಿವಿಪಿಯಲ್ಲಿ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿರುವ ಎಬಿವಿಪಿ ಪ್ರಕರಣ ಹೊರ ಬರುತ್ತಲೇ ಆತನಿಗೂ ಸಂಘಟನೆಗೂ ಸಂಬಂಧವೇ ಇಲ್ಲ ಎಂಬ ಹೇಳಿಕೆ ನೀಡಿ ಜಾರಿಕೊಂಡರೆ ಇನ್ನೂ ಇದಕ್ಕಿಂತಲೂ ಮೇಲಿನ ಹಂತದ ಬಿಜೆಪಿ ಯುವಮೋರ್ಚಾ ಅಥವಾ ಬಿಜೆಪಿಯ ಧುರೀಣರಾಗಲಿ
 ಘಟನೆ ಬೆಳಕಿಗೆ ಬಂದು ಎರಡು ದಿನವಾಗಿದ್ದರು ಬಹಿರಂಗವಾಗಿ ಖಂಡಿಸಿರಲಿಲ್ಲ.
ಕೊನೆಗೆ ಮಾಜಿ ಗೃಹಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ “ಯಾವುದೋ ಒಂದು ಘಟನೆಯನ್ನು ಸಂಘಟನೆಯ ಹೆಸರಿಗೆ ತಳುಕು ಹಾಕಲು ಬರುವುದಿಲ್ಲ ಎಂದು ಹೇಳುತ್ತಲೇ ಆತನ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು” ಎಂದರು. ಉಗ್ರ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶವಿದ್ದಿದ್ದರೆ ಎಬಿವಿಪಿ ಹೆಸರು ಬಂದ ಕಾರಣಕ್ಕಾಗಿ ಆ ಸಂಘಟನೆಯೇ ಈತನ ವಿರುದ್ಧ ದೂರು ನೀಡಬಹುದಿತ್ತಲ್ಲಾ ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ನಡೆಯ ತೊಡಗಿದೆ.
ಇಲ್ಲಿ ಉಳಿದವರು ಜಾಣ್ಮೆಯಿಂದ ಕಾದು ನೋಡುವ ತಂತ್ರ ಅನುಸರಿಸಿ ಭಜರಂಗದಳದಲ್ಲಿ ಗುರುತಿಸಿಕೊಂಡಿರುವ ಗಣೇಶ್‌ ಪ್ರಸಾದ್‌ ಮತ್ತು ವಿಶ್ವ ಹಿಂದೂ ಪರಿಷತ್ತಿನಲ್ಲಿ ಗುರುತಿಸಿಕೊಂಡಿರುವ ವಿಶ್ವನಾಥರನ್ನು ದೂರು ನೀಡಲು ಬಳಸಿಕೊಳ್ಳಲಾಯಿತೇ…?  ಮತ್ತು ಇದರ ಹಿಂದಿರುವ ಜಾಣ್ಮೆಯ ರಾಜಕೀಯ ಲೆಕ್ಕಚಾರ ಏನು ಎಂಬ ಕುರಿತು ಚರ್ಚೆಗಳು ಆರಂಭವಾಗಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post