ಪ್ರತಿಷ್ಠಿತ ಕಾಲೇಜಿನ ಹುಡುಗನ ಕಾಮದಾಟ

ಹಿಂದುತ್ವದ ಹೆಸರಲ್ಲಿ ಮುಗ್ದ ಯುವತಿಯರ ಬದುಕಲ್ಲಿ ಘೋರ ಚೆಲ್ಲಾಟ
ಸಾಮಾಜಿಕ ಜಾಲತಾದಲ್ಲಿ ಅಶ್ಲೀಲ ವಿಡಿಯೋ ವೈರಲ್
ಹಿಂದೂ ವಿದ್ಯಾರ್ಥಿ ಸಂಘಟನೆ ಹೆಸರಲ್ಲಿ ಮಂಚಕ್ಕೆ ಆಹ್ವಾನ
ಬ್ಲಾಕ್ ಮೇಲ್ ಗೆ ವೀಡಿಯೋ ಬಳಕೆ...? ಇದೆಂತಾ ಕರ್ಮ
ಅಧಿಕಾರಿಗಳಿಗೆ ತಲೆನೋವು
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಬಯಲಾಗುತ್ತಿದ್ದಂತೆ ಹಿಂದೂ ಸಂಘಟನೆಯ ಕೆಲವರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಸ್ವತಃ ಹಿಂದೂ ಸಂಘಟನೆಯಲ್ಲಿ ಇದ್ದುಕೊಂಡು ಸಂಘಟನೆಯ ಹುಡುಗಿಯರನ್ನೇ ದುರ್ಬಳಕೆ ಮಾಡಿಕೊಂಡಿರುವುದು ವಿವಾದಕ್ಕೆ ಗುರಿಯಾಗಿದೆ. ಜಗತ್ತಿಗೆ ಸಂಸ್ಕೃತಿ, ಸಂಸ್ಕಾರ ಬೋಧನೆ ಮಾಡುವ ಸಂಘಟನೆ ತಮ್ಮ ವಿದ್ಯಾರ್ಥಿ ಸಂಘಟಕನಿಗೆ ಸಂಸ್ಕಾರ, ಸಂಸ್ಕೃತಿ ಭೋದಿಸಲಾಗಲಿಲ್ಲವಾ ಎಂಬ ಪ್ರಶ್ನೆ ಉದ್ಭವಿಸಿದೆ. ಸ್ವತಃ ಹಿಂದೂ ಸಂಘಟನೆಯ ಕೆಲವರು ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದು ಇನ್ನು ಕೆಲವರು ಒಳಗಿನಿಂದ ರಕ್ಷಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆಂಬ ಸುದ್ದಿಗಳು ಇವೆ. ಹೀಗಾಗಿ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದು ತಲೆನೋವಿಗೂ ಕಾರಣವಾದಂತಿದೆ.

ತೀರ್ಥಹಳ್ಳಿಯಲ್ಲಿ ಅಕ್ರಮ ದಂಧೆ ವಹಿವಾಟು ದಿನನಿತ್ಯ ಮಿತಿ ಮೀರುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಮೇಲಾಟದಲ್ಲಿ ತಪ್ಪು ಮಾಡುವವರನ್ನು ರಕ್ಷಿಸುವವರ ಸಂಖ್ಯೆಯೂ ಹೆಚ್ಚಾದಂತೆ ಅನಾಚಾರ, ಅಕ್ರಮಗಳು ಹೆಚ್ಚಾಗುತ್ತಿದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವಿವಿಧ ಕಸರತ್ತುಗಳನ್ನು ಮಾಡುವವರನ್ನು ಹಿಡಿಯಲು ಅಧಿಕಾರಿಗಳು ಪೀಕಲಾಟಕ್ಕೆ ಸಿಲುಕಿದ್ದಾರೆ ಎಂಬದಕ್ಕೆ ಇದೊಂದು ಉತ್ತಮ ನಿದರ್ಶನದಂತಿದೆ.
ಹಿಂದೂ ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಮುಂಚೂಣಿ ಜವಾಬ್ದಾರಿ ನಿರ್ವಹಿಸುತ್ತಿದ್ದ ತೀರ್ಥಹಳ್ಳಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯೋರ್ವನ ಕಾಮದಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆತ ಸಂಘಟನೆಯ ಹೆಸರಲ್ಲಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ತೀರಾ ಸಲಿಗೆ ಬಳಸಿದ್ದಾನೆ ಎನ್ನಲಾಗುತ್ತಿದೆ. ಸಲಿಗೆ ದೇಹ ಸಂಬಂಧಕ್ಕೂ ತಿರುಗಿಸಿಕೊಂಡಿದ್ದಾನೆ ಎನ್ನುವ ಗುಸುಗುಸು ಪಟ್ಟಣದಲ್ಲಿ ಬಾರಿ ಕೋಲಾಹಲಕ್ಕೆ ಕಾರಣವಾಗಿದೆ. ದಿಗ್ಭ್ರಮೆ ಆಗುತ್ತಿರುವುದು ಈತ ತನ್ನ ನೀಚ ಕೃತ್ಯವನ್ನು ಚಿತ್ರಿಸಿಕೊಂಡಿರುವುದು. ಸಹಜವಾಗಿ ಇದು ಮುಂದೆ ದುರ್ಬಳಕೆ ಮಾಡಿಕೊಂಡ ಯುವತಿಯರ ಭವಿಷ್ಯದ ಕಥೆ ಏನು ಎಂಬ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಹಿಂದೂ ಸಂಘಟನೆಯ ಹೆಸರಲ್ಲಿ ವಿದ್ಯಾರ್ಥಿನಿಯರನ್ನು ಪರಿಚಯ ಮಾಡಿಕೊಳ್ಳುವ ಆತ ಹುಡುಗಿಯರ ಖಾಸಗಿ ವೀಡಿಯೋ, ಫೋಟೊಗಳನ್ನು ಬಳಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಬ್ಲಾಕ್ ಮೇಲೆ ನಂತರ ಖಾಸಗಿಯಾಗಿ ವಿವಿಧ ಕಡೆಗಳಿಗೆ ಕರೆಸಿಕೊಳ್ಳುತ್ತಿದ್ದ ಎಂಬ ಬಗ್ಗೆಯೂ ಗುಮಾನಿ ಇದೆ. ಈಗಾಗಲೇ ಇಬ್ಬರು ಯುವತಿಯರೊಂದಿಗಿನ ಖಾಸಗಿ ವೀಡಿಯೋ ವೈರಲ್ ಆಗಿದ್ದು ಇನ್ನಷ್ಟು ವಿಡಿಯೋಗಳು ಇವೆ ಎಂಬ ಬಗ್ಗೆಯೂ ಸಂಶಯ ಹೆಚ್ಚಿಸುವಂತೆ ಆತನ ವರ್ತನೆಗಳನ್ನು ವೀಕ್ಷಿಸಿದವರು ಹೇಳುತ್ತಿದ್ದಾರೆ‌.

ಇನ್ನೊಂದು ಕಡೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಪೋಷಕರು ಇಂತಹ ಆಘಾತಕಾರಿ ಘಟನೆಯ ಬಗ್ಗೆ ತೀವ್ರ ಮರುಗುವಂತಾಗಿದೆ. ಮಕ್ಕಳು ಪಟ್ಟಣಕ್ಕೆ ಕಾಲೇಜಿಗೆಂದು ಆಗಮಿಸುತ್ತಿದ್ದು ಬಂದ ಮೇಲೆ ಏನು ಮಾಡುತ್ತಾರೆ ಎಂಬ ಬಗ್ಗೆಯೂ ಚಿಂತಿಸುವಂತಾಗಿದೆ. ಬ್ಲಾಕ್ ಮೇಲ್ ಮಾಡುವ ಇಂತಹ ಕ್ರಿಮಿಗಳು ಹೆಚ್ಚಿದಂತೆ ಸಮಾಜದಲ್ಲಿ ಗೌರವ ಹೊಂದಿದ್ದ ಕುಟುಂಬಗಳ ಮಾನ ಮಾರ್ಯಾದೆ ಬೀದಿಗೆ ಬರುವಂತಾಗಿದೆ. ಇಂತಹವರ ಬಗ್ಗೆ ಪೊಲೀಸ್ ಇಲಾಖೆ, ಕಾಲೇಜು, ಪೋಷಕರು, ಸಮಾಜ ತೀವ್ರ ನಿಗಾ ವಹಿಸದಿದ್ದರೆ ಇನ್ನಷ್ಟು ಕೆಟ್ಟ ಘಟನೆಗಳು ಜರುಗುವ ಸಾಧ್ಯತೆ ಇದೆ.‌ ಪ್ರಕರಣ ಮುಚ್ಚಲು ಕೊಸರಾಡುತ್ತಿರುವವರು ತಮ್ಮ ಮನೆಯ ಹೆಣ್ಣು ಮಕ್ಕಳ ಬಗ್ಗೆಯೂ ಚಿಂತಿಸಬೇಕಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post