ಬಿಟ್ಟಿ ಭಾಗ್ಯವಲ್ಲ – ಆರ್ಥಿಕ ಸದೃಢತೆಯ ಉದಾರತೆ

ಬಡತನ ದುರ್ಬಲಗೊಳಿಸುವ ಕೀಳು ಮನಸ್ಥಿತಿಗೆ ಬೇಕಿದೆ ಸೌಜನ್ಯತೆ
ಹಸಿವಿನ ಅನಿಶ್ಚಿತ ಕುಟುಂಬಗಳ ಬಗ್ಗೆಯೂ ಬಿಜೆಪಿಗರು ಕಾಳಜಿ ತೋರಲಿ – ಮುಡುಬ ರಾಘವೇಂದ್ರ

ಬಿಜೆಪಿ ಜನಪರವಾದ ಕಾರ್ಯಕ್ರಮ ರೂಪಿಸಲು ಅಸಮರ್ಥವಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಪುಗಸಟ್ಟೆ, ಬಿಟ್ಟಿ ಎನ್ನುವುದರ ಮೂಲಕ ಬಡವರನ್ನು ದುರ್ಭಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸರ್ಕಾರಕ್ಕೆ ಎಲ್ಲಾ ವರ್ಗದ ಜನರು ತೆರೆಗೆ ಪಾವತಿಸುತ್ತಾರೆ. ಅದರಲ್ಲಿ ಕೆಳ, ಮಧ್ಯಮ, ಮೇಲ್ವರ್ಗ ಎಂದು ವಿಂಗಡಣೆ ಮಾಡಲು ಸಾಧ್ಯವಿಲ್ಲ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎಲ್ಲಾ ವರ್ಗವೂ ಫಲಾನುಭವಿಯಾಗಿದೆ. ಹೆಚ್ಚು ಕಡಿಮೆ ಎಂಬುದನ್ನು ಬಿಟ್ಟರೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಒದಗಿಸಿದರೆ ಯಾರು ಮೇಲೂ ಅಲ್ಲ ಕೀಳು ಅಲ್ಲ ಎಂಬುದನ್ನು ಟೀಕಿಸುವ ಬಿಜೆಪಿ ಮನಸ್ಥಿತಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುಡುಬ ರಾಘವೇಂದ್ರ ಹೇಳಿದ್ದಾರೆ.

ಎಂದೂ ಹಸಿವಿನ ಅನಿಶ್ಚಿತತೆ ಇಲ್ಲದೆ ಹೊಟ್ಟೆ ತುಂಬ ಉಂಡು ಮಲಗುವ ಬಿಜೆಪಿ ಮನಸ್ಥಿತಿಯ ಜನರು ಮಾತ್ರ ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಹಂಗಿಸುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಅಂದೇ ದುಡಿದು ತಿನ್ನುವ ಅದೆಷ್ಟೋ ಕುಟುಂಬಗಳು ನಮ್ಮೊಂದಿಗೆ ಇವೆ ಎಂಬುದರ ಬಗ್ಗೆ ನಿಮಗೆ ಸ್ವಲ್ಪ ಅರಿವು ಇರಬೇಕಾಗುತ್ತದೆ. ದೇಶ ಬೆಳವಣಿಗೆಯಲ್ಲಿ ಬಹುಪಾಲು ಬಡವರ ಕೊಡುಗೆ ಮಾತ್ರ ಇದೆ ಎಂಬುದನ್ನು ನೀವು ಅಲ್ಲಗಳೆಯುವಂತಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನಪರ ಕಾರ್ಯಕ್ರಮಗಳನ್ನು ನೀಡುವುದನ್ನು ಸಹಿಸದ ಹೀನ ಮನಸ್ಥಿತಿಗಳು ಅಪಪ್ರಚಾರದಲ್ಲಿ ತೊಡಗಿವೆ. ಸಂವಿಧಾನದ ಆಶಯದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸದೃಢಗೊಳಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಟೀಕಿಸುವ ಮನಸ್ಸುಗಳು ಬದುಕು ಸಾಗಿಸಲು ಅದೇ ದುಡಿದು ತಿನ್ನುವ ಅನಿಶ್ಚಿತ ಕುಟುಂಬಗಳ ಬಗ್ಗೆಯೂ ಸೌಜನ್ಯಯುತ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ನುಡಿದಂತೆ ನಡೆಯುವ ಸರ್ಕಾರ. ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ 5 ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದೆ. ಭಾನುವಾರ ತೀರ್ಥಹಳ್ಳಿ ಮುಖ್ಯ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆ 11.30ಕ್ಕೆ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಕ್ಷೇತ್ರದ ಎಲ್ಲಾ ಮಹಿಳೆಯರು, ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಸಕಾಲದಲ್ಲಿ ಪಾಲ್ಗೊಳ್ಳಬೇಕು ಎಂದು ಮುಡುಬ ರಾಘವೇಂದ್ರ ಕೋರಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post