ನಮ್ಮೂರ ಕಲಾವಿದ ನಟಿದ ಚಲನಚಿತ್ರ
ಸಿನಿಮಾ ಯಶಸ್ವಿಯಾದರೆ ವಿದ್ಯಾರ್ಥಿಗಳಿಗೆ ನೆರವು – ನಟ ಕಾರ್ತಿಕ್
ಜೂನ್ 9ರಂದು ರಾಜ್ಯದ 100 ಚಿತ್ರ ಮಂದಿರದಲ್ಲಿ ದರ್ಬಾರ್ ಚಲನಚಿತ್ರ ತೆರೆಯ ಮೇಲೆ ಬರಲಿದೆ.
ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಏರ್ಪಾಡಾಗಿದೆ. ನಿಮ್ಮೂರ ಕಲಾವಿದ
ನಟಿಸಿದ ಸಿನಿಮಾಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಚಿತ್ರನಟ ಕಾರ್ತಿಕ್ ಪಟ್ಟಣದ ಕಾರ್ಯನಿರತ ಪತ್ರಕರ್ತರ
ಸಂಘದ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಕೋರಿಕೊಂಡರು.
ಗ್ರಾಮ ಪಂಚಾಯಿತಿ ಚುನಾವಣಾ ರಾಜಕೀಯದಲ್ಲಿ ಬಹಳಷ್ಟು ಕೌತುಕದ ಘಟನೆಗಳು ನಡೆಯುತ್ತದೆ. ಆ ಸಂದರ್ಭದಲ್ಲಿ
ಗ್ರಾಮದೊಳಗೆ ನಡೆಯುವ ಅನೇಕ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡು ದರ್ಬಾರ್ ಸಿನಿಮಾದ ಚಿತ್ರಕಥೆ ರೂಪುಗೊಂಡಿದೆ.
ಗ್ರಾಮದ ರಾಜಕೀಯ, ಹಾಸ್ಯದ ಮೂಲಕ ರಸವತ್ತಾಗಿ ಚಿತ್ರಿಸಲಾಗಿದೆ. ಚಲನಚಿತ್ರದಲ್ಲಿ ರಂಗಭೂಮಿ ಸೇರಿದಂತೆ
300ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ಸಿನಿಮಾ ಅದ್ಬುತವಾಗಿ ಮೂಡಿ ಬಂದಿದ್ದು ಸಮಾಜಕ್ಕೆ ಒಳ್ಳೆಯ
ಸಂದೇಶ ನೀಡಲಿದೆ. ಹಾಸ್ಯದೊಂದಿಗೆ ಸಮಾಜದ ಅಂಕುಡೊಂಕು ತಿಳಿಸುವ ಸಿನಿಮಾ ಇದಾಗಿದೆ. 23 ವರ್ಷಗಳ ಬಳಿಕ
ವಿ.ಮನೋಹರ್ ಚಿತ್ರ ನಿರ್ದೇಶಿಸಿದ್ದಾರೆ. ಭದ್ರಾವತಿಯ ಸತೀಶ್ ನಾಯಕ ನಟರಾಗಿದ್ದು ಸಿನಿಮಾ ನಿರ್ಮಾಣ
ಮಾಡಿದ್ದಾರೆ ಎಂದು ತಿಳಿಸಿದರು.
ಸಿನಿಮಾ ಯಶಸ್ವಿಯಾದರೆ ತಾಲ್ಲೂಕಿನ 100 ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗುತ್ತೇನೆ. ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಚಿತ್ರನಟ ಕಾರ್ತಿಕ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಪೂರ್ಣೇಶ್ ಕೆಳಕೆರೆ, ಪ್ರಮೋದ್, ಪೂರ್ಣೇಶ್ ಪೂಜಾರಿ ಇದ್ದರು.

.jpeg)