ಆಜಾದ್ ರಸ್ತೆಯಲ್ಲಿ ಹೈಕ್ಲಾಸ್ ಮರದ ಡಿವೈಡರ್

ಸಿಂಗಾಪುರ ರಸ್ತೆಗೆ ಅಂತು ಬಂತು ಬೇಲಿ

ತೀರ್ಥಹಳ್ಳಿ ಪಟ್ಟಣ ಆಜಾದ್ ರಸ್ತೆ ರಾಜ್ಯದಲ್ಲಿಯೇ ಮಾದರಿ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ವಿಸ್ತಾರವಾಗಿದ್ದ ಈ ರಸ್ತೆಯನ್ನು ನೋಡಿದ ಹೊರ ತಾಲ್ಲೂಕಿನ ಜನರಿಗೆ ನಮ್ಮೂರಲ್ಲಿ ಇಂತಹ ರಸ್ತೆ ಆಗಬೇಕಿತ್ತು. ನಮ್ಮ ಜಿಲ್ಲೆಯಲ್ಲೂ ಇಂತಹ ರಸ್ತೆ ಇಲ್ಲವಲ್ಲ ಎಂಬ ಅಳಕು ಕೆಲವು ವರ್ಷಗಳ ಹಿಂದೆ ಬಹಳವಾಗಿ ಕಾಡಿತ್ತು. ಅಂತಹ ವಿಶ್ವಪ್ರಸಿದ್ಧ ರಸ್ತೆಯಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ.

ಆದರೆ ಬರುಬರುತ್ತ ರಸ್ತೆ ನಿರ್ವಹಣೆ ಇಲ್ಲದೆ ಸೊರಗಿ ಹೋಗಿದೆ. ಕೊಪ್ಪ ಸರ್ಕಲ್‌ ನಿಂದ ಹಿಡಿದು ಬಾಳೇಬೈಲು ತನಕ ಡಿವೈಡರ್‌ ಇದ್ದರು ಕೂಡ ಅದನ್ನು ಹಾರುವುದು ಸಾಮಾನ್ಯವಾಗಿದೆ. ರಸ್ತೆಯಲ್ಲಿ ದೊಡ್ಡ ವಾಹನಗಳು ತೆರಳಿದರೆ ಅಲ್ಲಿಂದ ಏಳುವ ದೂಳುಗಳು ಸಾರ್ವಜನಿಕರ ಬಿಳಿ ಬಟ್ಟೆಯನ್ನು ಕೆಂಪಾಗಿಸುವ ತಾಕತ್ತು ಹೊಂದಿದೆ. ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಿ ಕಬ್ಬಿಣದ ಗ್ರಿಲ್‌ಗಳು ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿದೆ. ಗ್ರಾಮೀಣ ಭಾಷೆಯಲ್ಲಿ ಹೇಳಬೇಕಾದರೆ ಬಣ್ಣ ಹಚ್ಚದೆ ಓಬಿರಾಯನ ಕಾಲ ಕಳೆದಿದೆ.

ಅಂದಾಜು 150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿಂಗಾಪುರ ಮಾದರಿಯ ರಸ್ತೆಯನ್ನು ನೋಡಲು ರಾಜ್ಯ, ಕೇಂದ್ರದ ಹಲವಾರು ಇಂಜಿನಿಯರ್‌ ಪ್ರವಾಸ ಕೈಗೊಂಡಿದ್ದರು. ಅನೇಕರಿಗೆ ಮೊದ ಮೊದಲು ಈ ರಸ್ತೆ ಪಿಕ್ನಿಕ್‌ ಸ್ಪಾಟ್‌ ಆಗಿತ್ತು. ಇದೀಗ ಕಳೆಗುಂದಿದ ರಸ್ತೆಯಲ್ಲಿ ಪುಟ್‌ಪಾಥ್‌ನಲ್ಲಿ ನಡೆಯುವುದು ತ್ರಾಸದಾಯಕ. ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಾಗುತ್ತಿದ್ದು ಪಾರ್ಕಿಂಗ್‌ ಸ್ಥಳ ಸಿಗದಂತ ಸ್ಥಿತಿ ನಿರ್ಮಾಣವಾಗಿದೆ.

ಇದೀಗ ದ್ವಿಪಥ ರಸ್ತೆಯಲ್ಲಿ ಜನರು ಹಾರದಂತೆ ದೊಡ್ಡ ತಡೆಗೋಡೆ ನಿರ್ಮಾಣವಾಗಿದೆ. ಮರದ ಬೇಲಿಗಳು ನಿರ್ಮಾಣವಾಗುವ ಹಂತದಲ್ಲಿದೆ. ಕೊಪ್ಪ ಸರ್ಕಲ್‌ನಿಂದ ಹಿಡಿದು ಆಗುಂಬೆ ಬಸ್‌ ನಿಲ್ದಾಣದ ವರೆಗೆ ಯಾರು ಕೂಡ ಇನ್ಮೇಲೆ ರಸ್ತೆಯನ್ನು ಹಾರಿ ದಾಟುವಂತಿಲ್ಲ. ಪಾದಾಚಾರಿ ಮಾರ್ಗದಲ್ಲೇ ದಾಟಬೇಕಾಗಿದೆ…!

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post