ಆರಗ ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಲಿ

ನೀತಿ ಸಂಹಿತೆ ಉಲ್ಲಂಘಿಸಿ ಆರಗ ರಸ್ತೆಗೆ ಶಂಕಸ್ಥಾಪನೆ – ಕಿಮ್ಮನೆ ಆರೋಪ
ಡಬಲ್‌ ಇಂಜಿನ್‌ ಸರ್ಕಾರದಲ್ಲಿ ಐತಿಹಾಸಿಕ ಬೆಲೆ ಏರಿಕೆ - ಜನಶಕ್ತಿಯ ಎದುರು ಆರಗ ಧನಶಕ್ತಿ ನಿಲ್ಲಲ್ಲ
ತೀರ್ಥಹಳ್ಳಿಯಿಂದಲೇ ಕಾಂಗ್ರೆಸ್‌ ಬಹುಮತ – ಆರ್‌ಎಂಎಂ

ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ಆರ್‌.ಎಂ. ಮಂಜುನಾಥ ಗೌಡರ ನಿವಾಸದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಗೃಹಸಚಿವ ಆರಗ ಜ್ಞಾನೇಂದ್ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಕ್ಷೇತ್ರದಲ್ಲಿ ವಿವಿಧ ನಾಟಕಗಳನ್ನು ಆರಂಭಿಸಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಪೊಳ್ಳು ರಾಜಕೀಯ ಮಾಡಿದ್ದ ಅವರಿಗೆ ಇದೀಗ ಜನರ ನಾಡಿಮಿಡಿತ ಅರ್ಥವಾಗುತ್ತಿದೆ. ನಂದಿತಾ ಪ್ರಕರದಂತೆ ಮಂಡಗದ್ದೆಯಲ್ಲಿ ಕೋಮು ಸಂಘರ್ಷಕ್ಕೆ ಪಿತೂರಿ ನಡೆಸಿದ್ದರು. ಐದು ದಶಕಗಳ ಕಾಲ ಸಕ್ರೀಯ ರಾಜಕೀಯದಲ್ಲಿರುವ ಆರಗ ಜ್ಞಾನೇಂದ್ರ ರಾಜಕೀಯಕ್ಕೆ ನಿವೃತ್ತಿ ಘೋಷಿಸಲಿ. ಗೆಲುವಿಗಾಗಿ ಕೋಮು ಸೌಹಾರ್ದ ಹಾಳು ಮಾಡುವ ಬದಲು ಯುವಕರಿಗೆ ಅವಕಾಶ ಮಾಡಿಕೊಡಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಒತ್ತಾಯಿಸಿದರು.

ಗ್ರಾಮೀಣ ಭಾಗದ ಜನರ ಮೇಲೆ ಆರಗ ಸಚಿವಗಿರಿಯ ದರ್ಪ ಪ್ರದರ್ಶಿಸಿದ್ದಾರೆ. ಎಲ್ಲಾ ಕೆಲಸಗಳಿಗೂ ಬಿಜೆಪಿ ಘಟಕದ ಅಧ್ಯಕ್ಷರ ಅನುಮತಿ ಪಡೆಯುವ ನಿಯಮ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿದೆ. ಇದೀಗ ಚುನಾವಣೆ ಬಂದಿದ್ದು ಅದೇ ಜನರ ಮುಂದೆ ಮತಕ್ಕಾಗಿ ಅಂಗಲಾಚುತ್ತಿದ್ದಾರೆ. ಇವರ ದರ್ಪದ ರಾಜಕೀಯದಿಂದ ಕಾಂಗ್ರೆಸ್‌ ಪ್ರಚಾರ ಮಾಡದೇ ಗೆಲುವು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

5 ವರ್ಷಗಳು ಅಭಿವೃದ್ಧಿ ಮಾಡಲು ಅಸಮರ್ಥರಾದ ಆರಗ ನೀತಿ ಸಂಹಿತೆ ಉಲ್ಲಂಘಿಸಿ ರಸ್ತೆಗಳಿಗೆ ಗುದ್ದಲಿ ಪೂಜೆ ನಡೆಸುತ್ತಿದ್ದಾರೆ. 20 ವರ್ಷಗಳು ಶಾಸಕರಾಗಿದ್ದರು ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಆಗಲಿಲ್ಲ. ಜೆಜೆಎಂ ಕಿಕ್‌ ಬ್ಯಾಕ್‌ ಪಡೆಯುವ ಯೋಜನೆಯಾಗಿದ್ದು ನೀರಿನ ಮೂಲಗಳೇ ಇಲ್ಲದೇ ಪೈಪ್‌ ಮಾತ್ರ ಅಳವಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಹಿಂಬಾಲಕರೆಲ್ಲ ಗೃಹಸಚಿವರಾಗಿದ್ದಾರೆ. ದೇಶದ ಆರ್ಥಿಕತೆ ಸಂಪೂರ್ಣ ದಿವಾಳಿಯಾಗಿದೆ. ನಿಯಂತ್ರಣವಿಲ್ಲದ ಹಣದುಬ್ಬರ ತಡೆಗಟ್ಟಲು ಆರ್‌ಬಿಐ ಪ್ರತಿ ಮೂರು ತಿಂಗಳಿಗೆ ರೆಪೋ ದರ ಏರಿಸುತ್ತಿರುವುದು ಆತಂಕಕರ ಸಂಗತಿ. ನಿರುದ್ಯೋಗ, ಬೆಲೆ ಅಸ್ಥಿರತೆ, ಕಳಪೆ ಕಾಮಗಾರಿ, ಭ್ರಷ್ಟಾಚಾರ, ಪೊಲೀಸ್, ಅರಣ್ಯ ಸಿಬ್ಬಂದಿ ದುರ್ಬಳಕೆ, ಅನಾನುಭವಿ ತಹಶೀಲ್ದಾರ್‌, ಕಸ್ತೂರಿ ರಂಗನ್‌, ಬಗರ್‌ ಹುಕುಂ, ಅರಣ್ಯ ತೂಗುಗತ್ತಿಯಲ್ಲಿ ಜನರು ಸಿಲುಕಿ ಪರದಾಡುತ್ತಿದ್ದು ಕಾಂಗ್ರೆಸ್‌ ಮಾತ್ರ ಪರಿಹಾರ ಎಂದರು.

ಕಾಂಗ್ರೆಸ್‌ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇದೆ. ಹಾಗಾಗಿ ನಾನು ಕಾಂಗ್ರೆಸ್‌ ಬಿ-ಫಾರ್ಮ್ ಪ್ರಭಲ ಆಕಾಂಕ್ಷಿಯಾಗಿದ್ದೆ. ಪಕ್ಷದ ಅಧಿಕೃತ ಅಭ್ಯರ್ಥಿ ಕಿಮ್ಮನೆ ರತ್ನಾಕರ ಗೆಲ್ಲಸಿಕೊಂಡು ಬರುತ್ತೇವೆ. ವಿಧಾನಸಭಾ ಸಂಖ್ಯೆ 114 ಆಗಿದ್ದು ಕ್ಷೇತ್ರದಿಂದಲೇ ಕಾಂಗ್ರೆಸ್‌ ಬಹುಮತ ಆರಂಭಗೊಳ್ಳಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ, ಕ್ಷೇತ್ರ ಚುನಾವಣಾ ಉಸ್ತುವಾರಿ ಕಲಗೋಡು ರತ್ನಾಕರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಮುಖಂಡರಾದ ಕಡ್ತೂರು ದಿನೇಶ್‌, ಜಿ.ಎಸ್‌. ನಾರಾಯಣರಾವ್‌, ಕಟ್ಟೇಹಕ್ಕಲು ಕಿರಣ್‌, ರತ್ನಾಕರ ಶೆಟ್ಟಿ, ಡಿ.ಎಸ್.‌ ವಿಶ್ವನಾಥ ಶೆಟ್ಟಿ, ಬೇಡನಬೈಲು ಯಲ್ಲಪ್ಪ, ಆದರ್ಶ ಹುಂಚದಕಟ್ಟೆ, ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post