ಬಡವರ ಮನೆ ಕಟ್ಟುವ ಕನಸಿಗೆ ಕೊಳ್ಳಿ

ನೀತಿ ಸಂಹಿತೆಯಿಂದ ಕೈಸೇರದ 1,150 ಮನೆ
ಬಿಜೆಪಿ ಆಡಳಿತದಲ್ಲಿ ಎಷ್ಟು ಮನೆ ಮಂಜೂರಾಗಿದೆ – ಲೆಕ್ಕ ಕೊಡಿ
ಹಂಗಾಮಿ ಗೃಹಮಂತ್ರಿಗಳಿಗೆ ಐವೈಸಿ ವಕ್ತಾರ ಆದರ್ಶ ಹುಂಚದಕಟ್ಟೆ ಆಗ್ರಹ

ನನಗೀಗ ವಿಶೇಷ ಪ್ರಯತ್ನ, ಕಾಳಜಿ ಅಂತಾ ಯಾರಾದರು ಬರೆದರೆ ಅದರ ಬಗ್ಗೆ ವಿಚಾರಿಸಬೇಕೆನಿಸುತ್ತದೆ. ಏಕೆಂದರೆ ತುಂಗಾ ನದಿಯಲ್ಲಿ ನೀರು ಹರಿಯುವುದು ಸಹ ಶಾಸಕರ ವಿಶೇಷ ಪ್ರಯತ್ನ ಎಂಬಂತಾಗಿದೆ. ಬಿಜೆಪಿಯ ತ್ರಿಕಾ ಹೇಳಿಕೆಗಳು ಇಂತಹದ್ದೇ ಪ್ರಶ್ನೆಗಳನ್ನು ಕೇಳಬೇಕು ಎಂಬ ಮನೋಭಾವ ಸೃಷ್ಟಿಸುತ್ತದೆ.

ಇದಕ್ಕೊಂದು ಅತ್ಯುತ್ತಮ ಉದಾಹರಣೆ ಎಂದರೆ ಗೃಹ ಮಂತ್ರಿಗಳ ವಿಶೇಷ ಪ್ರಯತ್ನದಿಂದ ಬಂದಿದೆ ಎನ್ನಲಾದ ಸುಮಾರು 1150 ಮನೆ ಸಚಿವರ ಬೇಜವಾಬ್ದಾರಿಯಿಂದ ವಾಪಾಸ್ಸು ಹೋಗುವಂತಾಗಿದೆ. ಆದರೂ ಕೂಡ ಶಿವಮೊಗ್ಗ ಜಿಲ್ಲೆಗೆ ಪಾಪಾ ನಮ್ಮ ಶಾಸಕರು ಮಾತ್ರ ಹೋರಾಟ ಮಾಡಿ 1150 ಮನೆ ತಂದಿದ್ದಾರೆ ಎನ್ನುವಂತೆ ವಿಶೇಷ ಪ್ರಯತ್ನ ಎನ್ನಲಾಗುತ್ತಿರುವುದು ವಿಪರ್ಯಾಸ ಎಂದು ಆದರ್ಶ ಹುಂಚದಕಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ.

ನಿನ್ನೆ ಮಾಹಿತಿ ತೆಗಸಿದರೆ ಇವರಿಗೆ ಯಾವ ಆಸಕ್ತಿಯೂ ಇಲ್ಲದೆ  ಕೊನೆಯ ಕ್ಷಣಕ್ಕೆ ಕೇವಲ ಪತ್ರಿಕಾ ಹೇಳಿಕೆಗಾಗಿ ಬಂದ ಮನೆಗಳಾಗಿದ್ದಾವೆ ಎಂಬುದು ಇದೀಗ ಜಗಜ್ಜಾಹೀರಾಗಿದೆ. ವಿರೋಧ‌ ಪಕ್ಷದಲ್ಲಿದ್ದರು ಭದ್ರಾವತಿಯ ಶಾಸಕ ಸಂಗಮೇಶ್‌  3000 ಮನೆಗಳಿಗೆ ಮೂರು ತಿಂಗಳ ಹಿಂದೆಯೆ ಒಪ್ಪಿಗೆ ಪಡೆದು ಅನುಷ್ಟಾನಕ್ಕೆ ಮುಂದಾಗಿದ್ದಾರೆ. ಸಾಗರ, ಸೊರಬದಲ್ಲೂ 3000 ಮನೆಗಳು ತಿಂಗಳ ಹಿಂದೆಯ ಬಂದು ಒಪ್ಪಿಗೆ ಪಡೆದಿದ್ದಾರೆ‌.‌ ಇನ್ನೂ ಹೊಸನಗರ (ಸಾಗರ ವಿಧಾನಸಭಾ) ತಾಲ್ಲೂಕಿಗೂ ಬಂದ 500 ಮನೆಗಳು ಒಂದು ಮಟ್ಟಕ್ಕೆ ಒಪ್ಪಿಗೆ ಪಡೆಯಲು ಸಾಧ್ಯವಾಗಿದೆ.

ಸಾಂಧರ್ಬಿಕ ಚಿತ್ರ

ಆದರೆ ತೀರ್ಥಹಳ್ಳಿಯಲ್ಲಿ ನೀತಿ ಸಂಹಿತೆ ಬರುವ ವೇಳೆಗೆ ಅಂದ್ರೆ ದಿಡ್ಡಿ ಬಾಗಿಲು ಮುಚ್ಚುವ ವೇಳೆಗೆ ನಾಮಕಾವಾಸ್ತೆ ಮನವಿ ಮಾಡಿ, ತ್ರಿಕೆಗಳ ಹೇಳಿಕೆಗೆ ಸೀಮಿತವಾಗಿಸಿದ್ದಾರೆ. ಶಾಸಕರ ಬೇಜಾವಾಬ್ದಾರಿಯಿಂದ 1150 ಮನೆಗಳಿಗೆ ಅನುಮತಿ ನೀಡದೆ ವಾಪಾಸ್ಸಾಗಿದೆ. ನಿಗಮಕ್ಕೆ ಫಲಾನುಭವಿ‌ ಪಟ್ಟಿ ಸಲ್ಲಿಸುವುದರೊಳಗೆ ನೀತಿ ಸಂಹಿತೆ ಜಾರಿಯಾಗಿ 1150 ಮನೆಗಳು ನಿಗಮದ ತೆಕ್ಕೆಗೆ ಜಾರಿದೆ. ಇನ್ನು ಹೊಸ ಸರ್ಕಾರ ಬಂದ ಮೇಲೆ ಮನೆಗಳ ಕತೆ ಮುಂದುವರೆಯಲಿದೆ. ಅಲ್ಲಿಯ ವರೆಗೆ ಬಡವರು, ಮದ್ಯಮ ವರ್ಗದರವ ಸೂರು ಕಟ್ಟಿಕೊಳ್ಳುವ ಕನಸು ಕಮರುವಂತಾಗಿದೆ.

ಐದು ವರ್ಷದಿಂದ ಮನೆಗಳನ್ನೇ ಕೊಡದೆ ಬಡವರ ಮನೆಯ ಕನಸಿಗೆ ಕೊಳ್ಳಿ ‌ಇಟ್ಟಿದ್ದ ಬಿಜೆಪಿ ಸರ್ಕಾರ ಈಗ ಗೃಹ ಸಚಿವರ ಬೇಜವಬ್ದಾರಿಯಿಂದ ಸಾವಿರಾರು ಬಡವರಿಗೆ ಸಿಗಬಹುದಾಗಿದ್ದ ಮನೆಯ ಅನುದಾನವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಶಾಸಕರ ಐದು ವರ್ಷದ ಅವಧಿಯಲ್ಲಿ ಎಷ್ಟು ಮನೆಗಳನ್ನು ಕೊಟ್ಟರು ಎಂಬುದು ಇವರು ಬಹಿರಂಗ‌ಪಡಿಸಲಿ.

ರಾಜ್ಯದ ಹಂಗಾಮಿ ಗೃಹಮಂತ್ರಿಗಳೇ ನಿಮ್ಮ ಬಳಿ ಮೇಲಿನ ಪ್ರಶ್ನೆಗಳಿಗೆ ಉತ್ತರವಿದೆಯಾ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ ವಕ್ತಾರ ಆದರ್ಶ ಹುಂಚದಕಟ್ಟೆ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post