ಟಿಕೆಟ್‌ ವಿಚಾರವನ್ನು ಹೈಕಮಾಂಡ್‌ಗೆ ಬಿಡಿ - ಡಿಕೆಶಿ

ಕೊನೆಗೂ ಇತ್ಯರ್ಥವಾಗದ ಆರ್‌ಎಂಎಂ - ಕಿಮ್ಮನೆ ಟಿಕೆಟ್‌ ಗುಟ್ಟು
ಒಂದಾಗಿ ಕೆಲಸ ಮಾಡಿ ಆರಗ ಸೋಲಿಸುವುದು ಮುಖ್ಯ
ಆಡಿದ ಮಾತಿನಂತೆ ಒಬ್ಬರಿಗೆ MLA, ಮತ್ತೊಬ್ಬರಿಗೆ MLC
ಟಿಕೆಟ್‌

ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಿಚಾರ ಈ ಕ್ಷಣಕ್ಕೂ ಇತ್ಯರ್ಥವಾಗದೆ ಉಳಿದಿದೆ. ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಇಂದು ಬೆಂಗಳೂರಿಗೆ ಆರ್‌ಎಂಎಂ ಹಾಗೂ ಕಿಮ್ಮನೆ ಬಣದ ತಲಾ 20 ಮಂದಿಯನ್ನು ಟಿಕೆಟ್‌ ಕುರಿತ ಚರ್ಚೆಗಾಗಿ ಕರೆಸಿಕೊಂಡಿದ್ದರು.

ಮಧ್ಯಾಹ್ನದ ನಂತರ ನಡೆದ ಚರ್ಚೆಯಲ್ಲಿ ಎರಡೂ ಗುಂಪಿನವರಿಗೆ ಎಚ್ಚರಿಕೆ ಬರಿತ ಸ್ಪಷ್ಟನೆಯನ್ನು ನೀಡಿದ್ದಾರೆ. ಕಿಮ್ಮನೆ ಮಂಜುನಾಥ ಗೌಡ ಸೇರಿದಂತೆ ಬೆಂಬಲಿಗರ ಎದುರೇ ಡಿಕೆ ಶಿವಕುಮಾರ್‌ ಚರ್ಚೆ ನಡೆಸಿದ್ದಾರೆ. ಆರ್‌ ಎಂ ಮಂಜುನಾಥ ಗೌಡರಿಗೆ 2004ರಲ್ಲಿಯೇ ಪಕ್ಷದ ಟಿಕೆಟ್ ದೊರೆಯಬೇಕಿತ್ತು. ಆದರೆ ಆಗ ಪಕ್ಷದ ತೀರ್ಮಾನದಂತೆ ಮಂಜುನಾಥ ಗೌಡರನ್ನು ಸಮಾಧಾನ ಪಡಿಸಿ ಕಿಮ್ಮನೆ ರತ್ನಾಕರ್‌ ಅವರಿಗೆ ಟಿಕೆಟ್‌ ನೀಡಲಾಯಿತು. ಅವರು ತಮಗೆ ನೀಡಿದ ನಾಲ್ಕು ಅವಕಾಶದಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಪಕ್ಷ ಅವರಿಗೆ ಸಚಿವ ಸ್ಥಾನ ನೀಡಿ ಗೌರವಿಸಿದೆ.

ಹಾಗೆ ನೋಡಿದರೆ ಮಂಜುನಾಥ ಗೌಡರಿಗೆ ರಾಜಕೀಯವಾಗಿ ಅನ್ಯಾಯವಾಗಿದೆ. ರಾಜಕೀಯ ಷಡ್ಯಂತರದ ಫಲವಾಗಿ ಅವರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನದಿಂದ ವಜಾ, ತೆರಿಗೆ ದಾಳಿ ಇಂತಹ ಅವಮಾನಗಳನ್ನು ಅನುಭವಿಸಿದ್ದಾರೆ. ಅವರ ಕೊಡುಗೆಯೂ ಪಕ್ಷಕ್ಕೆ ಅಗತ್ಯವಿದೆ. ಆದರೆ ಈಗ ಬಲಢ್ಯರಾಗಿರುವ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಸೋಲಿಸುವುದೇ ಪಕ್ಷದ ಮುಖ್ಯ ಗುರಿ. ಅದಕ್ಕಾಗಿ ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಕೂಡ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ತೀರ್ಥಹಳ್ಳಿಯಲ್ಲಿ ಬಹಿರಂಗವಾಗಿಯೇ ನೀಡಿದ ವಾಗ್ದಾನದಂತೆ ಒಬ್ಬರಿಗೆ ಎಂಎಲ್‌ಎ ಟಿಕೆಟ್‌ ಹಾಗೂ ಮತ್ತೊಬ್ಬರನ್ನು ಎಂಎಲ್‌ಸಿ ಮಾಡುವುದು ಖಚಿತ ಎಂದು ಡಿಕೆ ಶಿವಕುಮಾರ್‌ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.

ಬಳಿಕ ಆರ್‌.ಎಂ. ಮಂಜುನಾಥ ಗೌಡರಿಗೆ ಮಾತನಾಡಲು ಅವಕಾಶ ನೀಡಿದಾಗ ಪಕ್ಷ ಹಾಗೂ ಡಿಕೆ ಶಿವಕುಮಾರ್‌ ಅವರ ತೀರ್ಮಾಕ್ಕೆ ಬದ್ಧ ಇದರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಕೂಡ ಕೆಲಸ ಮಾಡುವುದಾಗಿ ಹೇಳಿದ್ದಾರಂತೆ. ಬಳಿಕ ಕಿಮ್ಮನೆ ರತ್ನಾಕರ್‌ ಅವರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ತಾವು ತುರ್ತಾಗಿ ಸಂಘಟನೆ ಮಾಡಲು ಹೋಗಬೇಕಿದೆ ಇಲ್ಲವಾದರೆ ಬಿಜೆಪಿಗೆ ಅವಕಾಶ ಒಲಿಯಲಿದೆ ಎಂದಿದ್ದಾರಂತೆ. ಇದಕ್ಕೆ ಡಿಕೆಶಿ ನೀವಿಬ್ಬರು ಸೇರಿ ಕೆಲಸ ಮಾಡಿದರೆ ಮಾತ್ರ ಕಾಂಗ್ರೆಸ್‌ ಪಕ್ಷಕ್ಕೆ ಅವಕಾಶ ಲಭಿಸಲಿದೆ. ಹಾಗಾಗಿ ಗಡಿಬಿಡಿ ಬೇಡ ಮತ್ತೆ ವಿನಾಕಾರಣ ಗುಂಪುಗಾರಿಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಗೆ ಗೊಂದಲ ಮೂಡಿಸಿ ಎದುರಾಳಿಗಳ ಟೀಕೆ ಟಿಪ್ಪಣಿಗೆ ಅವಕಾಶ ಕೂಡದು ಎಂದು ತಾಕೀತು ಮಾಡಲಾಗಿದೆ ಎನ್ನಲಾಗಿದೆ.

ಬಹುಶಃ 5ನೇ ತಾರೀಖು ನಂತರ ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್‌ ಯಾರಿಗೆ ಎಂದು ಸ್ಪಷ್ಟಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲಿಗೆ ಕಳೆದೆರಡು ದಿನಗಳಿಂದ ಕಿಮ್ಮನೆಯರಿಗೆ ಟಿಕೆಟ್‌ ಪೈನಲ್‌ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ತಾತ್ಕಾಲಿಕ ತಡೆ ಉಂಟಾಗಿದ್ದು ಮತ್ತೆ ಕಾಂಗ್ರೆಸ್‌ ಕಾರ್ಯಕರ್ತರು ಗೊಂದಲದಲ್ಲಿ ಮುಳುಗುವಂತಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post