50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ

ಬಿಜೆಪಿಗೆ ಬಿಗ್‌ ಶಾಕ್‌
ಗೃಹಸಚಿವರ ಕ್ಷೇತ್ರದಲ್ಲೇ ಪಕ್ಷ ತೊರೆಯುತ್ತಿರುವ ಯುವಕರು

L

ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಯಡೇಹಳ್ಳಿಕರೆ ಯುವಕರ ತಂಡ ಬಿಜೆಪಿ ಪಕ್ಷಕ್ಕೆ ಬಿಗ್‌ ಶಾಕ್‌ ನೀಡಿದೆ. ನಮ್ಮ ಪಕ್ಷದೊಳಗೆ ಎಲ್ಲವೂ ಸರಿ ಇದೆ ಎಂದು ಹೇಳಿ ತಿರುಗಾಡುತ್ತಿದ್ದ ಬೆಜೆಪಿ ಮುಖಂಡರು ಆಂತರರಿಕವಾಗಿ ಭುಗಿಲೆದ್ದಿರುವ ಅಸಮಾಧಾನ ಶಮನಗೊಳಿಸಲು ವಿಫಲವಾದಂತಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಬಿಜೆಪಿ ಪಾಳಯದಲ್ಲಿ ಯಾವ ಹಕ್ಕಿ ಯಾವ ಸಂದರ್ಭದಲ್ಲಿ ಹಾರಿ ಹೋಗಲಿದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲದಂತಹ ಸನ್ನಿವೇಶ ಉದ್ಬವಿಸಿದೆ.

ಸ್ವತಃ ಗೃಹಸಚಿವರಾಗಿರುವ ಆರಗ ಜ್ಞಾನೇಂದ್ರ ಅಧಿಕಾರದಲ್ಲಿ ಇದ್ದರೂ ಕಾರ್ಯಕರ್ತರಿಗೆ ಏನು ಮಾಡಿಲ್ಲ ಎಂಬ ಕೊರಗು ಕೆಲವರನ್ನು ಕಾಡುತ್ತಿದೆ. ಮುಂಚೂಣಿ ಮುಖಂಡರಿಂದಾಗಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಮನ್ನಣೆ ಸಿಗುತ್ತಿಲ್ಲ ಎಂಬ ಅಸಮಾಧಾನ ಹೆಚ್ಚಳವಾದಂತಿದೆ. ಸ್ವ ಕ್ಷೇತ್ರದಲ್ಲೇ ನಡೆಯುತ್ತಿರುವ ಪಕ್ಷಾಂತರ ಪರ್ವ ತಡೆಯಲು ಗೃಹಸಚಿವರು ವಿಫಲರಾಗಿದ್ದಾರೆಯೇ ಎಂಬ ಗೊಂದಲ ಇದೀಗ ಕಾರ್ಯಕರ್ತರ ವಲಯದಲ್ಲಿ ಆವರಿಸಿದೆ. ಮೂಲ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಲಯದಲ್ಲೂ ಸಚಿವರ ಬಗ್ಗೆ ಅಸಮಾಧಾನ ಹೆಚ್ಚಳವಾದಂತಿದೆ.

ಇದಕ್ಕೆ ಸರಿ ಎಂಬಂತೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಅನೇಕರು ಸಿದ್ಧತೆ ನಡೆಸಿದ್ದಾರೆ. ಇದರ ಭಾಗವಾಗಿ ಬುಧವಾರ ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಮುಖಂಡ ಆಮ್ರಪಾಲಿ ಸುರೇಶ್‌ ನೇತೃತ್ವದಲ್ಲಿ ಯಡೇಹಳ್ಳಿಕೆರೆ ಬಾಲರಾಜ್‌ ಹಾಗೂ ಅವರ 50ಕ್ಕೂ ಹೆಚ್ಚು ಸ್ನೇಹಿತರು ಕಾಂಗ್ರೆಸ್‌ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post