ದೈವಾರಾಧನೆ ಆರಗಕ್ಕೆ ಏಕೆ ಕೋಪ…?

ಆರಗ ಕ್ಷಮೆಯಾಚನೆಗೆ ಕಿಮ್ಮನೆ ಪಟ್ಟು
ಗೃಹಸಚಿವರಿಂದ ಸಾಂಸ್ಕೃತಿಕ ಅತ್ಯಾಚಾರ
ಬಿಜೆಪಿಯವರು ಮಾತ್ರ ದೈವಾರಾಧನೆ ಮಾಡಬೇಕೆ…?
ಬಿಜೆಪಿಯೇತರರಿಗೆ ಪೂಜೆ ನಿಶಿದ್ಧವೇ… – ಕಿಮ್ಮನೆ ತಿರುಗೇಟು
ರಾಜಕೀಯ ಸಂಕ್ರಮಣದಲ್ಲಿದ್ದ ಆರಗ ಜ್ಞಾನೇಂದ್ರರಿಗೆ ಸಂಕಷ್ಟ


ರಾಜ್ಯದ ಎರಡನೇ ದೊಡ್ಡ ಅಧಿಕಾರ, ರಾಜ್ಯ ಸರ್ಕಾರವನ್ನೇ ಮುನ್ನಡೆಸುವ ಸಾರಥಿಯಾಗಿ ರಾಜಕೀಯ ಸಂಕ್ರಮಣದ ಕಾಲದಲ್ಲಿದ್ದ ಗೃಹಸಚಿವ ಆರಗ ಜ್ಞಾನೇಂದ್ರರಿಗೆ ಇದೀಗ ಸಂಕಷ್ಟ ಎದುರಾಗಿದೆ. ದೈವಾರಾಧನೆಯ ಮೇಲೆ ಆರಗ ಜ್ಞಾನೇಂದ್ರರಿಗೆ ಕೋಪ ಏಕೆ ಎಂಬ ದೊಡ್ಡ ಮಟ್ಟದ ಧ್ವನಿ ರಾಜ್ಯವಲ್ಲದೇ ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರತೊಡಗಿದ್ದು ಮುಂಬರುವ ವಿಧಾನಸಭೆಯ ಚುನಾವಣೆಯ ಸ್ಥಿತ್ಯಂತವೂ ಇದರೊಳಗೆ ತಳುಕು ಹಾಕಿಕೊಂಡಂತಿದೆ.
ಗೃಹಸಚಿವರು ತೀರ್ಥಹಳ್ಳಿಯಲ್ಲಿ ನಡೆದ ಬಿಜೆಪಿ ರೈತರ ಸಮಾವೇಶದಲ್ಲಿ ಶಿವದೂತೆ ಗುಳಿಗೆ ನಾಟಕದ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಕರಾವಳಿ, ಮಲೆನಾಡು, ಮುಂಬೈ, ಬೆಂಗಳೂರು, ದುಬೈ, ಬೆಳಗಾವಿ, ಚಿಕ್ಕಮಗಳೂರು ಹಾಗೂ ಕರಾವಳಿ ಮೂಲದವರು ನೆಲೆಸಿದ ಬಹುತೇಕ ಕಡೆಗಳಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ರೂಪುಗೊಳ್ಳುತ್ತಿದೆ. ದೈವಾರಾಧನೆ ನಂಬಿದವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ಬೆನ್ನಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಟಕ ತಂಡ ಹಾಗೂ ಗುಳಿಗ ದೈವ ಆರಾಧಕರ ಮುಂದೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರೆಲ್ಲರು ಹೋರಾಟಕ್ಕೆ ಮುಂದಾಗಲಿದ್ದಾರೆ. ಅವರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಈ ದೇಶದಲ್ಲಿ ಆಡಳಿತಕ್ಕೆ ಬಂದಿರುವುದು ಹಿಂದೂ ಧರ್ಮ ಹಾಗೂ ಅದರ ಮೇಲಿನ ತೀವ್ರ ನಂಬಿಕೆಯಿಂದ. ಹಿಂದೂ ಧರ್ಮದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಭೂತಾರಾಧನೆ, ಕೋಲಾ, ದೈವಾರಾಧನೆ ಇವೆಲ್ಲ ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಈ ಸಂಸ್ಕತಿಯನ್ನು ಪ್ರಶ್ನಿಸುವ ಜೊತೆಗೆ ಗುಳಿಗೆ, ಜಾಪಾಳ್ ಮಾತ್ರೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಇದೊಂದು ದೈವಾರಾಧನೆ ನಂಬಿದ ಜನರ ಮೇಲೆ ಮಾಡಿದ ಸಾಂಸ್ಕೃತಿಕ ಆತ್ಯಾಚಾರ ಎಂದು ಕಟುವಾಗಿ ಟೀಕಿಸಿದ್ದಾರೆ.
ಇತ್ತೀಚೆಗೆ ಇದೇ ನಾಟಕದ ಆಧಾರದ ಮೇಲೆ ತೆಗೆದಿರುವ ಕಾಂತಾರ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದಿದೆ. ಸಿನಿಮಾದ ಕಲಾವಿದರು ನಾಟಕದಲ್ಲಿ ಭಾಗವಹಿಸಿದ್ದರು. ನಾಟಕ ಯಾವುದೇ ಪಕ್ಷದ ವಿರುದ್ದವೂ ಇಲ್ಲ ಮತ್ತು ಪರವಾಗಿಯೂ ಇಲ್ಲ. ತೀರ್ಥಹಳ್ಳಿ ರಂಗಸಿಂಗಾರ ತಂಡದಿಂದ ನಾಟಕ ಆಯೋಜನೆ ವ್ಯವಸ್ಥೆ ಮಾಡಿದ್ದಾರೆ. ಸುಮಾರು 10 ರಿಂದ 12 ಸಾವಿರ ಜನರು ನಾಟಕ ವೀಕ್ಷಿಸಿ ಪ್ರಶಂಸೆ ಮಾಡಿದ್ದಾರೆ.
ಆರಗ ಜ್ಞಾನೇಂದ್ರ ಈ ನಾಟಕದ ವ್ಯವಸ್ಥೆಯನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಗುಳಿಗೆ, ಜಾಪಾಳ್ ಮಾತ್ರ ಅಂತ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಬಿಜೆಪಿ ಬಿಟ್ಟು ಬೇರೆಯವರು ಪೂಜೆ, ಆರಾಧನೆ ಮಾಡಿದ್ರೆ ಅದಕ್ಕೆ ಇವರು ನಿಶಿದ್ಧ ಹೇರುತ್ತಾರೆ. ಇವರಿಗೆ ಸಂಬಂಧ ಇಲ್ಲ ಅಂತ ಹೇಳುತ್ತಾರೆ. ನಂಬಿಕೆಗಳ ಬಗ್ಗೆ ಪ್ರಶ್ನಿಸುವುದು ಎಷ್ಟರ ಮಟ್ಟಿಗೆ ಸರಿ. ನಾಟಕ ತಂಡ, ಗುಳಿಗ ದೈವ ನಂಬಿದವರ ಮುಂದೆ ಆರಗ ಜ್ಞಾನೇಂದ್ರ ಕ್ಷಮೆ ಯಾಚನೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post