ಶಿವದೂತೆ ನಾಟಕ ಪ್ರದರ್ಶನಕ್ಕೆ ಕ್ಷಣಗಣನೆ

10 ಸಾವಿರ ಪ್ರೇಕ್ಷಕರ ನಿರೀಕ್ಷೆಯಲ್ಲಿ ಆಯೋಜಕರು
ದಕ್ಷಿಣ ಕನ್ನಡ ರಂಗಭೂಮಿಯಲ್ಲಿ ಅದ್ವಿತೀಯ ನಾಟಕ
700ಕ್ಕೂ ಹೆಚ್ಚು ಪ್ರದರ್ಶನ

ಹಿರಿಯ ಹಾಗೂ ಜನಪ್ರಿಯ ರಂಗಕರ್ಮಿ ನಟ, ನಿರ್ದೇಶಕ, ಲೇಖಕ, ನಾಟಕ ರಚನೆಕಾರ ವಿಜಯಕುಮಾರ್‌ ಕೋಡಿಯಾಲಬೈಲು ವಿರಚಿತ ಶಿವದೂತೆ ಗುಳಿಗ ನಾಟಕವು ಇಂದು ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ದಕ್ಷಿಣ ಕನ್ನಡ ರಂಗಭೂಮಿ ಇತಿಹಾಸದಲ್ಲಿಯೇ ನಿರಂತರವಾಗಿ ಭರ್ಜರಿ ಪ್ರದರ್ಶನ ಕಂಡಿರುವ ಮತ್ತು ಪ್ರದರ್ಶನ ಕಂಡ ಕೆಲವೆಡೆ 10 ಸಾವಿರದಷ್ಟು ದಾಖಲೆ ಸಂಖ್ಯೆಯ ಪ್ರೇಕ್ಷಕರನ್ನು ಕಂಡ ಅಪರೂಪದ ದಾಖಲೆ ಈ ನಾಟಕ ಹೊಂದಿದ್ದು ತೀರ್ಥಹಳ್ಳಿಯಲ್ಲೂ ಕೂಡ ಅಂದಾಜು 10 ಸಾವಿರ ಜನ ಪ್ರೇಕ್ಷಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರದರ್ಶನದ ಜವಾಬ್ದಾರಿ ಹೊತ್ತ ರಂಗ ಸಿಂಗಾರ ಹೇಳಿದೆ.

ದಕ್ಷಿಣ ಕನ್ನಡ ಮತ್ತು ತುಳು ಸಂಸ್ಕೃತಿಯಲ್ಲಿ ಗುಳಿಗ ದೈವ ಪ್ರಮುಖ ಆರಾಧ್ಯ ದೈವಗಳಲ್ಲಿ ಒಂದಾಗಿದೆ. ಈ ದೈವವು ಧರ್ಮ ಸಂಸ್ಥಾಪನೆಯನ್ನು ಹೇಗೆ ನೆಲೆಗೊಳಿಸಿಕೊಡುತ್ತದೆ ಮತ್ತು ನಂಬಿದವರ ಸಂಕಷ್ಟಗಳಿಗೆ ಹೇಗೆ ಸ್ಪಂದಿಸುತ್ತದೆ ಎನ್ನುವ ಕಥಾಹಂದರ ನಾಟಕ ಒಳಗೊಂಡಿದೆ. ಬಿಗಿಯಾದ ಚಿತ್ರಕಥೆ, ಚೇತೋಹಾರಿ ಸಂಭಾಷಣೆ, ನುರಿತ ಹಾಗೂ ಪ್ರತಿಭಾವಂತ ಕಲಾವಿದರುಗಳ ಅಭಿನಯ, ಆಧುನಿಕ ತಂತ್ರಜ್ಞಾನ ಬಳಸಿ ನೆರಳು ಬೆಳಕನ್ನು ಅದ್ಬುತವಾಗಿ ದುಡಿಸಿಕೊಂಡಿರುವ ಕಾರಣ ಇಡೀ ನಾಟಕ ಪ್ರದರ್ಶನದ ಅಷ್ಟು ಹೊತ್ತು ಬೇರೆಯದ್ದೇ ಆದ ಪ್ರಪಂಚಕ್ಕೆ ಕೊಂಡೊಯ್ಯಲಿದೆ ಎಂಬ ಅಭಿಪ್ರಾಯಗಳನ್ನು ಈ ಹಿಂದೆ ನಾಟಕ ನೋಡಿದವರು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರಾಜ್ಯ, ದೇಶ, ವಿದೇಶಗಳಲ್ಲಿ 700ಕ್ಕೂ ಹೆಚ್ಚು ಪ್ರದರ್ಶನಕಂಡಿದ್ದು ಮುಂದಿನ ಜುಲೈ ತಿಂಗಳ ವರೆಗೆ ಮುಂಗಡ ಬುಕ್ಕಿಂಗ್‌ ನಾಟಕ ಇದಾಗಿದೆ.

ತೀರ್ಥಹಳ್ಳಿಯಲ್ಲಿ ಈ ನಾಟಕ ಮಾಜಿ ಸಚಿವ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಜನತೆಗೆ ಅರ್ಪಣೆಗೊಳಿಸಲಿದ್ದು, ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ, ಮುಖಂಡರಾದ ಅಮ್ರಪಾಲಿ ಸುರೇಶ್‌, ಬಾಳೇಬೈಲು ರಾಘವೇಂದ್ರ ಶೆಟ್ಟಿ, ರತ್ನಾಕರ ಶೆಟ್ಟಿ, ಸುಶೀಲ ಶೆಟ್ಟಿ, ರಹಮತ್‌ ಉಲ್ಲಾ ಅಸಾದಿ, ಅಮರನಾಥ ಶೆಟ್ಟಿ, ಆದರ್ಶ ಹುಂಚದಕಟ್ಟೆ, ಪುಟ್ಟೋಡ್ಲು ರಾಘವೇಂದ್ರ, ಕಲಾವಿದರಾದ ಬಿ.ಗಣಪತಿ, ನಿಶ್ಚಲ್‌ ಜಾದೂಗಾರ್‌, ಬಸವಾನಿ ಉದಯ್‌ ಮುಂತಾದವರು ಸರ್ವರನ್ನು ಸ್ವಾಗತಿಸಿದ್ದಾರೆ. ಚಿಂತಕ ಹಾಗೂ ಲೇಖಕ ಸುಧೀರ್‌ ಕುಮಾರ್‌ ಮುರೋಳ್ಳಿ ಶಿವದೂತೆ ಗುಳಿಗ ನಾಟಕವು ದಕ್ಷಿಣ ಕನ್ನಡದ ದೈವ ಪರಂಪರೆಯ ಮಹತ್ವ ಮತ್ತು ವಿಭಿನ್ನ ಸಂಸ್ಕೃತಿಯನ್ನು ಅತ್ಯಂತ ಮನೋಜ್ಞವಾಗಿ ಕಟ್ಟಿಕೊಡುತ್ತಿದ್ದು ಆ ಸಂಸ್ಕೃತಿಯ ಸುಂದರ ಪರಿಚಯಕ್ಕಾಗಿ ಈ ನಾಟಕವನ್ನು ಪ್ರತಿಯೊಬ್ಬರು ವೀಕ್ಷಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ ಈ ನಾಟಕ ಪ್ರಮುಖ ಪಾತ್ರದಲ್ಲಿ ಕಾಂತಾರ ಗುರುವ ಖ್ಯಾತಿಯ ಸ್ವರಾಜ್‌ ಶೆಟ್ಟಿ ಅಭಿನಯಿಸಲಿದ್ದಾರೆ. ಸಂಜೆ 6.30ರಿಂದ ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post