ನರ್ಸಿಂಗ್‌ನಲ್ಲಿ ತೀರ್ಥಹಳ್ಳಿ ತಾಲ್ಲೂಕಿಗೆ ಎರಡನೇ ಪಿಹೆಚ್‌ಡಿ ಪದವಿ
ಋತುಬಂಧ ನಂತರ ಮಹಿಳೆಯರಲ್ಲಿ ಬಾಧಿಸುವ
ಮೂಳೆ ಸವಕಳಿಗೆ ಸಂಬಂಧಿಸಿದ ಕಾಯಿಲೆ ನಿಯಂತ್ರಣ ವಿಷಯದಡಿ ಡಿ.ಎಸ್. ಅನುಪಮಾ ಅವರು ಮಂಡಿಸಿದ ಸಂಶೋಧನಾ
ಮಹಾ ಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ.
ಡಿ.ಎಸ್. ಅನುಪಮಾ ಪೂರ್ಣ ಪ್ರಮಾಣದ ಸಂಶೋಧನಾ
ವಿದ್ಯಾರ್ಥಿಯಾಗಿ ಮಣಿಪಾಲ ನರ್ಸಿಂಗ್ ಕಾಲೇಜಿನ ಡೀನ್ ಡಾ.ಜೂಡಿತ್ ನರೋನ ಮತ್ತು ಮಣಿಪಾಲ ಆಸ್ಪತ್ರೆ
ಮೂಳೆ ಮತ್ತು ಕೀಲು ರೋಗ ವಿಭಾಗದ ಮುಖ್ಯಸ್ಥ ಡಾ.ಕಿರಣ್ ವಿ ಆಚಾರ್ಯ ಮಾರ್ಗದರ್ಶನದಲ್ಲಿ ಸಂಶೋಧನಾ
ಮಹಾಪ್ರಬಂಧ ಮಂಡಿಸಿದ್ದಾರೆ.
“ಅಸ್ಥಿರಂಧ್ರತೆ ಹೊಂದಿರುವ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಜೀವನದ ಗುಣಮಟ್ಟ, ಮೂಳೆ ಆರೋಗ್ಯ ಸ್ಥಿತಿ, ದೈಹಿಕ ಕಾರ್ಯಕ್ಷಮತೆ ಮತ್ತು ಔಷಧಿಗಳ ಅನುಸರಣೆಯ ಮೇಲೆ ಜೀವನಶೈಲಿ ಮಾರ್ಪಾಡು ಮಧ್ಯಸ್ಥಿಕೆ ಕಾರ್ಯಕ್ರಮದ ಪರಿಣಾಮಕಾರಿತ್ವ: ಒಂದು ಮಿಶ್ರ ವಿಧಾನದ ಅಧ್ಯಯನ” (Effectiveness of lifestyle modification intervention program on quality of life, Bone health status, physical function capacity and medication adherence among postmenopausal women with osteoporosis: A mixed method study” ವಿಷಯದ ಮೇಲೆ ಹಲವು ವರ್ಷಗಳ ಅಧ್ಯಯನ ನಡೆಸಿದ್ದಾರೆ.
ನರ್ಸಿಂಗ್ ವಿಷಯದಲ್ಲಿ ಜಿಲ್ಲೆಯ ಬೆರಳೆಣಿಕೆಯ
ಪಿಹೆಚ್‌ಡಿ ಪದವಿ ಪಡೆದವರಲ್ಲಿ ಅನುಪಮಾ ಕೂಡ ಒಬ್ಬರು. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಬಹುತೇಕ ಎರಡನೆಯವರು.
ಕಳೆದ ವರ್ಷ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೀನಾವಿಕ್ಟರ್ ಡಿಸೋಜಾ ಸಂಬಂಧಿ ಕ್ರಿಷ್ಮಾ ಎಂಬುವವರು
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಮನೋಶಾಸ್ತ್ರದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದರು.
ಸರ್ಕಾರಿ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಅನುಪಮಾ ಕೆಲವು ವರ್ಷಗಳು ಶಿವಮೊಗ್ಗ ನಂಜಪ್ಪ ನರ್ಸಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಮಣಿಪಾಲ ಮಾಹೆಯಲ್ಲಿ ಸಂಶೋಧನಾ ವಿಭಾಗದಲ್ಲಿ ಸಹ ಸಂಶೋಧಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ತಾಲ್ಲೂಕಿನ ದೇಮ್ಲಾಪುರ ಸುಶೀಲ ಶೇಖರಪ್ಪ ದಂಪತಿಯ ಪುತ್ರಿ ಹಾಗೂ ತೀರ್ಥಹಳ್ಳಿಯ ಪತ್ರಕರ್ತ ಮೋಹನ್ ಮುನ್ನೂರು ಅವರ ಧರ್ಮಪತ್ನಿ. ಅನುಪಮಾ ಅವರ ಮುಂದಿನ ವೃತ್ತಿ ಜೀವನ ಉಜ್ವಲವಾಗಲಿ ಎಂದು ಧ್ವನಿ ಬಳಗ ಹಾರೈಸುತ್ತದೆ.



