ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ
ಕಿಮ್ಮನೆ ನೇಮಕಾತಿ ಹಗರಣ ಮುಚ್ಚಲು ಎಷ್ಟು ಡೀಲ್ ಮಾಡಿದ್ದರು..?
ಕೇಂದ್ರ ಸಚಿವ ಜೋತಿರಾಧಿತ್ಯ ಸಿಂದ್ಯಾ ಆಗಮನ ಸಾಧ್ಯತೆ
ಬಿಜೆಪಿ ಪೂರ್ಣ ಬಹುಮತದಿಂದ ಮತ್ತೆ ಅಧಿಕಾರಕ್ಕೇರಲಿದೆ. ಅಭಿವೃದ್ದಿ ಕಾರ್ಯಕ್ರಮ ಮುಂದಿಟ್ಟು ಮತದಾರರನ್ನು ತಲುಪಲಾಗುತ್ತಿದೆ. ಮಾರ್ಚ್ 15ರ ಬುಧವಾರ ಮಧ್ಯಾಹ್ನ 2ಕ್ಕೆ ಶಿವಮೊಗ್ಗ ಜಿಲ್ಲಾಮೋರ್ಚಾದ ವತಿಯಿಂದ ಪಟ್ಟಣದ ಎಪಿಎಂಸಿ ಸಮೀಪ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕಿಸಾನ್ ಸನ್ಮಾನ್, ರೈತರ ಖಾತೆಗೆ ನೇರ ಹಣ ವರ್ಗಾವಣೆ, ಬೆಳೆ ವಿಮೆ, ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ, ವಿದ್ಯಾನಿಧಿ ಮುಂತಾದ ಯೋಜನೆ ಯಶಸ್ವಿಯಾಗಿ ಜಾರಿಗೊಂಡಿದೆ. ಕೇಂದ್ರ, ರಾಜ್ಯ ಬಿಜೆಪಿ ಆಡಳಿತದ ಮೇಲೆ ಮತದಾರರ ನಂಬಿಕೆ ಹೆಚ್ಚಾಗಿದೆ ಎಂದು ಹೇಳಿದರು.
ಮಾಡಾಳ್ ವಿರೂಪಾಕ್ಷಪ್ಪ
ಪ್ರಕರಣವನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಪ್ರಕರಣದ ಕುರಿತಂತೆ ನನ್ನ ಮೇಲೆ ರಾಜಕೀಯ ದುರುದ್ದೇಶದ
ಆರೋಪ ಮಾಡಲಾಗಿದೆ. ಲೋಕಾಯುಕ್ತ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತದೆ. ಶಿಕ್ಷಣ ಸಚಿವರಾಗಿದ್ದ
ಅವಧಿಯಲ್ಲಿ ಅರ್ಜಿಯೇ ಹಾಕದ ಶಿಕ್ಷಕರನ್ನು ನೇಮಿಸಿದ್ದ ಕಿಮ್ಮನೆ ನೇಮಕಾತಿ ಹಗರಣವನ್ನು ಮುಚ್ಚಲು ಎಷ್ಟು
ಡೀಲ್ ಮಾಡಿದ್ದರು ಎಂದು ಪ್ರಶ್ನಿಸಿದರು.
ಸೀಬಿನಕೆರೆ ಅಡಿಕೆ
ಸಂಶೋಧನಾ ಕೇಂದ್ರಕ್ಕೆ ₹10 ಕೋಟಿ ಹೆಚ್ಚುವರಿ ಅನುದಾನವನ್ನು ಹಾಲಿ ಬಜೆಟ್‌ನಲ್ಲಿ
ಘೋಷಿಸಲಾಗಿದೆ. ಎಲೆಚುಕ್ಕಿ ರೋಗ ನಿರ್ವಹಣೆಗಾಗಿ ವಿಶೇಷ ತಂಡ ರಚಿಸಿದ್ದು ವಿಜ್ಞಾನಿಗಳಿಂದ ವಿಸೃತ
ವರದಿ ತಯಾರಾಗಿದೆ. ರೈತರ ಆರ್ಥಿಕ ಅಭಿವೃದ್ದಿಗಾಗಿ ಕೇಂದ್ರ, ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು
ಜಾರಿಗೊಳಿಸಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಬದಲಾಗಿ ಆರೋಗ್ಯ ವರ್ಧಕ ಎಂಬ ವರದಿ ಸುಪ್ರೀಂಗೆ
ಸಲ್ಲಿಸಲಾಗುತ್ತಿದೆ. ಅಡಿಕೆ ರೋಗ ಸಂಶೋಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಭಾರತದ ಅಡಿಕೆ ಬೆಳೆಗಾರರಿಗೆ
ಗರಿಷ್ಠ ಬೆಲೆ ದೊರೆಯಬೇಕು ಎಂಬ ಉದ್ದೇಶದಿಂದ ವಿದೇಶಿ ಅಡಿಕೆ ಆಮದು ಸುಂಕ ₹250ರಿಂದ ಕನಿಷ್ಠ 360ಕ್ಕೆ ಏರಿಸಲಾಗಿದೆ ಎಂದು ಹೇಳಿದರು.
ತೀರ್ಥಹಳ್ಳಿಯಲ್ಲಿ ಮಾರ್ಚ್ 15 ರಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾ ಸಮಾವೇಶ ನಡೆಯಲಿದೆ. ಹಾಗೂ ರಾಜ್ಯಾದ್ಯಂತ ಸಂಚರಿಸುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಯ ಎಲ್.ಇ.ಡಿ. ಪರದೆಯ ವಾಹನ ತೀರ್ಥಹಳ್ಳಿಗೆ ಅದೇ ದಿನ ಸಂಜೆ 5-30 ಕ್ಕೆ ಆಗಮಿಸಲಿದ್ದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂದ್ಯಾ, ಮಾನ್ಯ ಗೃಹಸಚಿವರಾದ ಶ್ರೀ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ಇಂಧನ ಸಚಿವರಾದ ಶ್ರೀ ಸುನಿಲ್ ಕುಮಾರ್, ರಾಜ್ಯ ನಾಯಕರೂ ಮಾಜಿ ಸಚಿವರೂ ಆಗಿರುವ ಶ್ರೀ ಕೆ.ಎಸ್. ಈಶ್ವರಪ್ಪ ರವರು ಹಾಗೂ ಜಿಲ್ಲೆಯ ಹೆಮ್ಮೆಯ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ರವರು ಹಾಗೂ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಸ್ವಾಮಿರಾವ್, ರಾಜ್ಯ ಬಿಜೆಪಿ ಮುಖಂಡ ನಾಗರಾಜ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್, ಮಂಡಲ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ರೈತಮೋರ್ಚಾ ಜಿಲ್ಲಾಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ರೈತಮೋರ್ಚಾ ಮಂಡಲ ಅಧ್ಯಕ್ಷ ರವೀಂದ್ರ ಹೊಳೆಕೊಪ್ಪ, ಮುಖಂಡರಾದ ಆರ್.ಮದನ್, ಸಂದೇಶ ಜವಳಿ, ಬೇಗುವಳ್ಳಿ ಕವಿರಾಜ್ ಇದ್ದರು.


